ವಿಶ್ವಸಂಸ್ಥೆ, ಫೆ.26-ಮುಂದಿನ ಮೂರು ತಿಂಗಳಲ್ಲಿ ಉಕ್ರೇನ್ನಲ್ಲಿ ಮಾನವೀಯ ಪರಿಹಾರಕ್ಕಾಗಿ 1 ಬಿಲಿಯನ್ ಡಾಲರ್ ದೇಣಿಗೆ ನೀಡಲು ಯೋಜಿಸಿದೆ ಎಂದು ವಿಶ್ವ ಸಂಸ್ಥೆಯ ಮಾನವೀಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಖರವಾದ ಮೊತ್ತವನ್ನು ಇನ್ನೂ ನಿರ್ಧರಿಸಲಾಗುತ್ತಿದೆ ಆದರೆ ಉಕ್ರೇನ್ನಲ್ಲಿ ತನ್ನ ಮಾನವೀಯ ಕಾರ್ಯಾಚರಣೆಗಳನ್ನು ವಿಸ್ತರಿಸಲು ತಕ್ಷಣವೇ 20 ಮಿಲಿಯನ್ ಡಾಲರ್ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ರಷ್ಯಾದ ದಾಳಿಗೆ ಮುಂಚೆಯೇ, ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಪೂರ್ವ ಉಕ್ರೇನಿಯನ್ ಸರ್ಕಾರದ ನಡುವಿನ ವರ್ಷಗಟಲೆ ಹೋರಾಟದ ನಂತರ ಸುಮಾರು 3 ಮಿಲಿಯನ್ ಜನರಿಗೆ ಸಹಾಯದ ಅವಶ್ಯಕತೆಯಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಈಗ ಅತ್ಯಂತ ಅಸಾಮಾನ್ಯ ಸಂದರ್ಭಗಳಲ್ಲಿ ಅಗತ್ಯದ ಪ್ರಮಾಣವು ಅತ್ಯಕವಾಗಿರುತ್ತದೆ ಎಂದು ಗ್ರಿಫಿತ್ಸï ಹೇಳಿದ್ದಾರತೆ.
ಪ್ರಪಂಚದಾದ್ಯಂತದ ತೊಂದರೆಯಾದ ಸ್ಥಳಗಳಲ್ಲಿ ಮಾನವೀಯ ಪ್ರಯತ್ನವಾಗಿ ಹಣಕಾಸು ಒದಗಿಸಲು ಅಂತರರಾಷ್ಟ್ರೀಯ ದಾನಿಗಳಿಗೆ ಮುಖ್ಯವಾಗಿ ಸರ್ಕಾರಗಳಿಗೆ ನಾವು ಪ್ರತಿ ವರ್ಷ ಬಹು ಮನವಿಗಳನ್ನು ಮಾಡುತ್ತೇವೆ ಎಂದರು . ಕಳೆದ ತಿಂಗಳು,ಅಫ್ಘಾನಿಸ್ತಾನಕ್ಕೆ 5 ಶತಕೋಟಿಗಿಂತ ಹೆಚ್ಚಿನ ಮೊತ್ತವನ್ನು ವಿನಂತಿಸಿದೆ,
