ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬಜೆಟ್ ನಲ್ಲಿ ಸಿಕ್ಕಿದ್ದೇನು..?

Social Share

ನವದೆಹಲಿ,ಫೆ.1- ಉದ್ಯಮ ಶೀಲತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಅವರು ಲಭ್ಯವಿರುವ ಅವಕಾಶ ಮತ್ತು ಸಂಪನ್ಮೂಲಗಳನ್ನು ವಿಸ್ತೃತಗೊಳಿಸುವ ಪ್ರಯತ್ನ ಮಾಡಿದ್ದಾರೆ.ಉದ್ಯಮ, ಇ-ಶ್ರಮ, ಅಸ್ಸೀಂ ಪೋರ್ಟಲ್‍ಗಳನ್ನು ಅಂತರ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಅವಕಾಶಗಳು ಮತ್ತಷ್ಟು ಹೆಚ್ಚಾಗಿವೆ. ಈ ವೇದಿಕೆಗಳಲ್ಲಿ ನೇರ ಪ್ರಸಾರ, ಸಾವಯವ ದತ್ತಾಂಶಗಳು, ಜಿ2ಸಿ, ಬಿ2ಸಿ ಮತ್ತು ಬಿ2ಬಿ ಸೇವೆಗಳನ್ನು ಒದಗಿಸಲಾಗುತ್ತಿದೆ.
ಸಾಲ ಸೌಲಭ್ಯ, ಕೌಶಲ್ಯ, ನೇಮಕಾತಿಗೆ ಸಂಬಂಧಪಟ್ಟಂತಹ ಅಗತ್ಯಗಳಿಗೆ ಇದು ಹೆಚ್ಚು ಉಪಯುಕ್ತವಾಗಿದ್ದು, ಔಪಚಾರಿಕ ಆರ್ಥಿಕತೆ ಮತ್ತು ಉದ್ಯಮಶೀಲತಾ ಅವಕಾಶಗಳು ಎಲ್ಲರಿಗೂ ತಲುಪಲು ನೆರವಾಗಿವೆ.ಕೊರೊನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಜಾರಿಗೊಳಿಸಲಾದ ತುರ್ತು ಸಾಲ ಖಾತ್ರಿ ಯೋಜನೆಯನ್ನು ವಿಸ್ತರಿಸಲಾಗಿದೆ. 130 ಲಕ್ಷ ಸಣ್ಣ, ಸೂಕ್ಷ್ಮ, ಮಧ್ಯಮ ಕೈಗಾರಿಕೆಗಳು ಇದರ ಸೌಲಭ್ಯ ಪಡೆದಿವೆ.
ಇದರಿಂದಾಗಿ ಕೊರೊನಾ ವ್ಯೂಹದ ವ್ಯವಹಾರಿಕ ಮಟ್ಟ ಮರುಕಳುಹಿಸುತ್ತಿದೆ. ಹಾಗಾಗಿ ಸಾಲ ಖಾತ್ರಿ ಯೋಜನೆಯನ್ನು 2023ರ ಮಾರ್ಚ್‍ವರೆಗೂ ವಿಸ್ತರಿಸಲಾಗುತ್ತಿದ್ದು, 50 ಸಾವಿರ ಕೋಟಿ ರೂ.ಗಳ ವರೆಗೆ ವಿಸ್ತರಣೆ ಮಾಡಲಾಗಿದ್ದು, ಗರಿಷ್ಠ 5 ಲಕ್ಷ ಕೋಟಿಗಳಿಗೆ ಖಾತ್ರಿಗೊಳಿಸಲಾಗಿದೆ.
ದೇಶದ ಎಂಎಸ್‍ಎಂಇ ಕ್ಷೇತ್ರ ಕಳೆದ ಐದು ವರ್ಷಗಳಲ್ಲಿ 6ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ದೇಶೀಯ ಸ್ವಾವಲಂಬನೆ, ಸ್ಪರ್ಧಾತ್ಮಕ ಮತ್ತು ಸಮರ್ಥನೀಯ ಪರಿಣಾಮಗಳನ್ನು ಉದ್ಯಮಗಳು ಅನುಭವಿಸುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕ್ರಿಯಾತ್ಮಕ ಕೈಗಾರಿಕೆಗಳ ಅಗತ್ಯಕ್ಕನುಗುಣವಾಗಿ ಖಾಸಗಿ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ, ಸುಸ್ಥಿತರತೆ ಮತ್ತು ಉದ್ಯೋಗ ಸಾಮಥ್ರ್ಯವನ್ನು ವೃದ್ದಿಸಲು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟನ್ನು ವಿನ್ಯಾಸಗೊಳಿಸಲಾಗಿದೆ. ಜೀವನೋಪಾಯ ಮತ್ತು ಕೌಶಲ್ಯಕ್ಕೆ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

Articles You Might Like

Share This Article