Finance Minister Smt. @nsitharaman presents Union Budget 2023-24. #AmritKaalBudget https://t.co/kCVNckepKb
— BJP (@BJP4India) February 1, 2023
# ಕೇಂದ್ರ ಬಜೆಟ್-2023 ಹೈಲೈಟ್ಸ್ :
* ತಲಾ ಆದಾಯವು ಸುಮಾರು ಒಂಬತ್ತು ವರ್ಷಗಳಲ್ಲಿ ದ್ವಿಗುಣಗೊಂಡು 1.97 ಲಕ್ಷ ರೂ.ಗೆ ತಲುಪಿದೆ.
* ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಗಾತ್ರದಲ್ಲಿ 10ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಹೆಚ್ಚಳವಾಗಿದೆ.
* ಇಪಿಎಫ್ಒ ಸದಸ್ಯತ್ವವು 27 ಕೋಟಿಗೆ ದ್ವಿಗುಣಗೊಂಡಿದೆ.
* 2022ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ.ಗಳ 7,400 ಕೋಟಿ ಡಿಜಿಟಲ್ ಪಾವತಿಗಳು ನಡೆದಿವೆ.
* ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 11.7 ಕೋಟಿ ಮನೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
* ಉಜ್ವಲ ಅಡಿಯಲ್ಲಿ 9.6 ಕೋಟಿ ಎಲ್ ಪಿ ಜಿ ಸಂಪರ್ಕಗಳನ್ನು ಒದಗಿಸಲಾಗಿದೆ.
* ಪ್ರಧಾನಮಂತ್ರಿ ಸುರಕ್ಷಾ ಬಿಮಾ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಅಡಿಯಲ್ಲಿ 44.6 ಕೋಟಿ ಜನರಿಗೆ ವಿಮೆಯ ರಕ್ಷಣೆ.
* ಪಿಎಂ ಕಿಸಾನ್ ಸಮ್ಮಾನ್ ನಿ ಅಡಿಯಲ್ಲಿ 11.4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ರೂ. ನಗದು ವರ್ಗಾವಣೆ.
* ಬಜೆಟ್ನ ಏಳು ಆದ್ಯತೆಗಳಾದ ಸಪ್ತರ್ಷಿಗಳೆಂದರೆ, ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯನ್ನು ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮಥ್ರ್ಯವನ್ನು ಬಳಸಿಕೊಳ್ಳುವುದು, ಹಸಿರು ಬೆಳವಣಿಗೆ, ಯುವ ಶಕ್ತಿ ಮತ್ತು ಹಣಕಾಸು ವಲಯ.
* ಹೆಚ್ಚಿನ ಮËಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗರಹಿತ, ಗುಣಮಟ್ಟದ ಬೆಳೆಯ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು 2200 ಕೋಟಿ ರೂ. ವೆಚ್ಚದಲ್ಲಿ ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು.
* 2014 ರಿಂದ ಸ್ಥಾಪಿತವಾಗಿ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು.
* 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗಾಗಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೇಮಕ ಮಾಡಲಾಗುವುದು.
* ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ.66 ರಷ್ಟು ಹೆಚ್ಚಳದೊಂದಿಗೆ 79,000 ಕೋಟಿ ರೂ.ಗಳಿಗೆ ಏರಿಸಲಾಗುವುದು
* ರೈಲ್ವೆಗೆ 2.40 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಒದಗಿಸಲಾಗಿದೆ, ಇದು ಇದುವರೆಗಿನ ಅತಿ ಹೆಚ್ಚು ಮತ್ತು 2013-14ರಲ್ಲಿ ಮಾಡಿದ ವೆಚ್ಚದ ಒಂಬತ್ತು ಪಟ್ಟು ಹೆಚ್ಚಳವಾಗಿದೆ.
* ನಗರ ಮೂಲಸೌಕರ್ಯ ಅಭಿವೃದ್ಧಿ ನಿ (ಯುಐಡಿಎಫ್) ಯನ್ನು ಆದ್ಯತಾ ವಲಯದ ಸಾಲದ ಕೊರತೆಯ ಬಳಕೆಯ ಮೂಲಕ ಸ್ಥಾಪಿಸಲಾಗುವುದು, ಇದನ್ನು ರಾಷ್ಟ್ರೀಯ ವಸತಿ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ನಗರ ಮೂಲಸೌಕರ್ಯವನ್ನು ನಿರ್ಮಿಸಲು ಸಾರ್ವಜನಿಕ ಏಜೆನ್ಸಿಗಳ ಮೂಲಕ ಬಳಸಲಾಗುತ್ತದೆ.
* ದಾಖಲೆಗಳನ್ನು ಆನ್ಲೈನ್ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಎಂಎಸ್ಎಂಇಗಳು, ದೊಡ್ಡ ವ್ಯಾಪಾರ ಮತ್ತು ಚಾರಿಟಬಲ್ ಟ್ರಸ್ಟ್ಗಳ ಬಳಕೆಗಾಗಿ ಸಂಸ್ಥೆಗಳ ಡಿಜಿಲಾಕರ್ ಅನ್ನು ಸ್ಥಾಪಿಸಲಾಗುತ್ತದೆ.
* ಹೊಸ ಶ್ರೇಣಿಯ ಅವಕಾಶಗಳು, ವ್ಯಾಪಾರ ಮಾದರಿಗಳು ಮತ್ತು ಉದ್ಯೋಗ ಸಾಮಥ್ರ್ಯವನ್ನು ಬಳಸಿಕೊಳ್ಳಲು 5ಜಿ ಸೇವೆಗಳನ್ನು ಆಧರಿಸಿದ ಅಪ್ಲಿಕೇಶನ್ ಅಭಿವೃದ್ಧಿಗಾಗಿ 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.
* 10,000 ಕೋಟಿ ರೂಪಾಯಿಗಳ ಒಟ್ಟು ಹೂಡಿಕೆಯಲ್ಲಿ ಮರುಬಳಕೆ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ (ಗಾಲ್ವನೈಸಿಂಗ್ ಆರ್ಗಾನಿಕ್ ಬಯೋಆಗ್ರೋ ರಿಸೋರ್ಸಸ್ ಧನ್) ಯೋಜನೆಯಡಿಯಲ್ಲಿ 500 ಹೊಸ ೈವೇಸ್ಟ್ ಟು ವೆಲ್ತ್¿ಘಟಕಗಳನ್ನು ಸ್ಥಾಪಿಸಲಾಗುವುದು. ನೈಸರ್ಗಿಕ ಮತ್ತು ಜೈವಿಕ ಅನಿಲವನ್ನು ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೆ 5 ಪ್ರತಿಶತ ಸಂಕುಚಿತ (ಕಂಪ್ರೆಸ್ಡ್) ಜೈವಿಕ ಅನಿಲ ಕಡ್ಡಾಯವನ್ನು ಪರಿಚಯಿಸಲಾಗುವುದು.
* ರೈತರು ಸಹ* ಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಇದಕ್ಕಾಗಿ 10,000 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ, ರಾಷ್ಟ್ರಮಟ್ಟದ ವಿತರಣಾ ಸೂಕ್ಷ್ಮ ರಸಗೊಬ್ಬರ ಮತ್ತು ಕೀಟನಾಶಕ ಉತ್ಪಾದನಾ ಜÁಲವನ್ನು ರಚಿಸಲಾಗುವುದು.
* ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಆರಂಭಿಸಲಾಗುವುದು. ಕೋಡಿಂಗ್, ಎಐ, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ, 3ಡಿ ಪ್ರಿಂಟಿಂಗ್, ಡ್ರೋನ್ಸ್ ಮತ್ತು ಸಾಫ್ಟ್ ಸ್ಕಿಲ್ಗಳಂತಹ ಉದ್ಯಮ 4.0 ಗಾಗಿ ಹೊಸ ತಲೆಮಾರಿನ ಕೋರ್ಸ್ಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ನೀಡಲಾಗುವುದು.
* ಅಂತರರಾಷ್ಟ್ರೀಯ ಅವಕಾಶಗಳಿಗಾಗಿ ಯುವಕರನ್ನು ಸಿದ್ಧಪಡಿಸಲು 30 ಸ್ಕಿಲ್ ಇಂಡಿಯಾ ಅಂತರಾಷ್ಟ್ರೀಯ ಕೇಂದ್ರಗಳನ್ನು ವಿವಿಧ ರಾಜ್ಯಗಳಾದ್ಯಂತ ಸ್ಥಾಪಿಸಲಾಗುವುದು.
* 9,000 ಕೋಟಿ ರೂಪಾಯಿಗಳ ಮರುಭರ್ತಿಯ ಮೂಲಕ 1ನೇ ಏಪ್ರಿಲ್ 2023 ರಿಂದ ಜÁರಿಗೆ ಬರುವಂತೆ ಎಂಎಸ್ಎಂಇ ಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಯೋಜನೆ. ಈ ಯೋಜನೆಯು 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಮೇಲಾಧಾರ ರಹಿತ ಖಾತರಿಯ ಸಾಲವನ್ನು ಒದಗಿಸುತ್ತದೆ ಮತ್ತು ಸಾಲದ ವೆಚ್ಚವನ್ನು ಸುಮಾರು 1 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.
* ಕಂಪನಿಗಳ ಕಾಯಿದೆಯ ಅಡಿಯಲ್ಲಿ ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಲಾದ ವಿವಿಧ ನಮೂನೆಗಳ ಕೇಂದ್ರೀಕೃತ ನಿರ್ವಹಣೆಯ ಮೂಲಕ ಕಂಪನಿಗಳಿಗೆ ತ್ವರಿತ ಪ್ರತಿಕ್ರಿಯೆಗಾಗಿ ಸೆಂಟ್ರಲ್ ಪೆÇ್ರಸೆಸಿಂಗ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು.
* ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
* ಉದ್ದೇಶಿತ ವಿತ್ತೀಯ ಕೊರತೆಯು 2025-26 ರ ವೇಳೆಗೆ ಶೇ.4.5 ಕ್ಕಿಂತ ಕಡಿಮೆ ಇರುತ್ತದೆ.
* ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಲ್ಲಿ ಕೃಷಿ-ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಯನ್ನು ಸ್ಥಾಪಿಸಲಾಗುವುದು.
* 20 ಲಕ್ಷ ಕೋಟಿ ರೂ. ಕೃಷಿ ಸಾಲವನ್ನು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ನೀಡಲಾಗುವುದು.
* ಮೀನುಗಾರರು, ಮೀನು ಮಾರಾಟಗಾರರು ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು, ಮËಲ್ಯ ಸರಪಳಿ ದಕ್ಷತೆಯನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು 6,000 ಕೋಟಿ ರೂ. ಗುರಿಯ ಹೂಡಿಕೆಯೊಂದಿಗೆ ಪ್ರಧಶಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಹೊಸ ಉಪ-ಯೋಜನೆಯನ್ನು ಪ್ರಾರಂಭಿಸಲಾಗುವುದು.
* ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ ಮೂಲವಾಗಿಸಲು, ಮುಕ್ತ ಗುಣಮಟ್ಟ ಮತ್ತು ಅಂತರ್ ಕಾರ್ಯಸಾಧ್ಯ ಸಾರ್ವಜನಿಕ ಸರಕನ್ನು ಒಳಗೊಂಡ ರೈತ ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸಲು ಮತ್ತು ಕೃಷಿ-ಟೆಕ್ ಉದ್ಯಮ ಮತ್ತು ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಬೆಂಬಲ ನೀಡಲು ನಿರ್ಮಿಸಲಾಗುವುದು.
* ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಸೂಕ್ತ ಸಮಯದಲ್ಲಿ ಮಾರಾಟದ ಮೂಲಕ ಲಾಭದಾಯಕ ಬೆಲೆಗಳನ್ನು ಪಡೆಯಲು ಸಹಾಯ ಮಾಡಲು ಬೃಹತ್ ವಿಕೇಂದ್ರೀಕೃತ ಶೇಖರಣಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.
* ಸಿಕಲ್ ಸೆಲ್ ಅನೀಮಿಯಾ (ವಂಶಪಾರಂರ್ಯವಾಗಿ ಬರುವ ರಕ್ತಹೀನತೆ) ನಿವಾರಣೆ ಅಭಿಯಾನ ಆರಂಭಿಸಲಾಗುವುದು.
ಈ ಬಾರಿಯ ಬಜೆಟ್‍ನಲ್ಲಿ ಕೃಷಿ ಹಾಗೂ ಮೀನುಗಾರಿಕೆ ಪ್ರೋತ್ಸಾಹಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರು ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟ್ ಅಪ್‍ಗಳನ್ನು ಉತ್ತೇಜಿಸಲು ‘ಕೃಷಿ ವೇಗವರ್ಧಕ ನಿಧಿ’ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ,
ಮಾತ್ರವಲ್ಲ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಹೇಳುವ ಮೂಲಕ ಅನ್ನದಾತರ ಓಲೈಕೆಗೆ ಮುಂದಾಗಿದ್ಧಾರೆ. ರೈತರಿಗೆ ಸಹಾಯ ಮಾಡಲು ಸರ್ಕಾರವು ಬೃಹತ್ ವಿಕೇಂದ್ರೀಕೃತ ಶೇಖರಣಾ ಸಾಮಥ್ರ್ಯವನ್ನು ಸ್ಥಾಪಿಸಲು ಮುಂದಾಗಿದೆ. ಮುಂದಿನ 3 ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ನೆರವು ನೀಡಲಾಗುವುದು. 10,000 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುವುದು ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಭಾರತೀಯ ರಾಗಿ ಸಂಶೋಧನಾ ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವಾಗಿ ಬೆಂಬಲಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಘೋಷಿಸಿದರು. ಕೃಷಿ ಸಾಲದ ವೆಚ್ಚ ಮತ್ತು ಅಗ್ರಿ ಕ್ರೆಡಿಟ್ ಸೊಸೈಟಿಗಳ ಡಿಜಿಟಲೀಕರಣವು ಆರ್ಥಿಕ ಬೆಳವಣಿಗೆಗೆ ಕ್ರೆಡಿಟ್ ಪ್ರವೇಶವು ಪ್ರಮುಖವಾಗಿದೆ ಎಂದು ಪುರುಚ್ಚರಿಸಿದ್ದಾರೆ.
# ಇ-ಕೋರ್ಟ್‍ಗೆ 7 ಸಾವಿರ ಕೋಟಿ
ನ್ಯಾಯದ ಸಮರ್ಥ ಆಡಳಿತಕ್ಕಾಗಿ, ಸುಮಾರು 7 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಇ-ನ್ಯಾಯಾಲಯಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್ ಮಂಡಿಸಿದ ಅವರು, ಕೋವಿಡ್ ಅವಯಲ್ಲಿ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ವಿಫಲವಾದ ಎಂಎಸ್‍ಎಂಇಗಳಿಗೆ ನೆರವು ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಮತ್ತು ಅರೆ ಸರ್ಕಾರಿ ವಲಯದಲ್ಲಿನ ಶೇ.95ರಷ್ಟು ಸಂಸ್ಥೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಬಿಡ್ ಅಥವಾ ಕಾರ್ಯಕ್ಷಮತೆಯ ಭದ್ರತಾ ಠೇವಣಿಯನ್ನು ವಾಪಾಸ್ ಮಾಡಲಾಗುತ್ತದೆ.
ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಬಹಳ ದಿನಗಳಿಂದ ಬಾಕಿ ಇರುವ ತಗಾದೆಗಳನ್ನು ಇತ್ಯರ್ಥ ಪಡಿಸಲು ವಿವಿಧ ಸೆ ಯೋಜನೆಯ ಬದಲು ವಿಶ್ವಾಸ್ 2 ಎಂಬ ಪ್ರಬಲ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ನ್ಯಾಯಾಲಯದಲ್ಲಿರುವ ಪ್ರಮಾಣೀಕೃತ ವಿವಾದಗಳನ್ನು ಶ್ರೇಣಿಕೃತ ಅವಯಲ್ಲಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ವಿವಿಧ ಹಂತಗಳಲ್ಲಿ ಬಾಕಿ ಇರುವ ವಿವಾದಗಳನ್ನು ಮುಕ್ತಾಯಗೊಳಿಸಲು ಇದು ನೆರವಾಗಲಿದೆ ಎಂದಿದ್ದಾರೆ.ರಾಷ್ಟ್ರೀಯ ಆದ್ಯತೆಗಳ ಕಡೆಗೆ ಗಮನ ನೀಡುವ ಸಾಮೂಹಿಕ ಪ್ರಯತ್ನಗಳಿಗಳಿಂದಾಗಿ ನೀತಿ ಆಯೋಗ ರಾಜ್ಯ ಬೆಂಬಲ ಮಿಷನ್ ಅನ್ನು ಮೂರು ವರ್ಷಗಳವರೆಗೆ ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಪರ್ಧಾತ್ಮಕ ಅಭಿವೃದ್ಧಿ ಅಗತ್ಯಗಳಿಗಾಗಿ ವಿರಳ ಸಂಪನ್ಮೂಲಗಳನ್ನು ಉತ್ತಮವಾಗಿ ನಿಯೋಜಿಸಲು, ಆಯ್ದ ಯೋಜನೆಗಳ ಹಣಕಾಸುವನ್ನು ಪ್ರಾಯೋಗಿಕ ಆಧಾರದ ಮೇಲೆ, ಇನ್‍ಪುಟ್-ಆಧಾರಿತ ವ್ಯವಸ್ಥೆಯಿಂದ ಫಲಿತಾಂಶ ಆಧಾರಿತವಾಗಿ ಬದಲಾಯಿಸಲಾಗುತ್ತದೆ ಎಂದಿದ್ದಾರೆ.
# ‘ಸಪ್ತ ಋಷಿ ಮಂತ್ರ’ ಪಠಿಸಿದ ನಿರ್ಮಲಾ ಸೀತರಾಮನ್ :
ಈ ಬಾರಿಯ ಬಜೆಟ್‍ನಲ್ಲಿ ಸಪ್ತ ಋಷಿ ಮಂತ್ರ ಪಠಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಮುಖವಾಗಿ ಏಳು ವಲಯಗಳಿಗೆ ಆದ್ಯತೆ ನೀಡಿದ್ದಾರೆ. ಬಜೆಟ್ ಪ್ರಾರಂಭದಲ್ಲೇ ಸಪ್ತಋಷಿ ಮಂತ್ರ ಪಠಿಸಿದ ಅವರು, ತಮ್ಮ ಬಜೆಟ್‍ನಲ್ಲಿ ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯವರೆಗೂ ಸಂಪರ್ಕ, ಮೂಲಸೌಕರ್ಯ ಮತ್ತು ಹೂಡಿಕೆ, ಸುಪ್ತ ಸಾಮಥ್ರ್ಯವನ್ನು ಹೊರಹಾಕುವುದು, ಹಸಿರು ಬೆಳವಣಿಗೆ, ಯುವಶಕ್ತಿ ಮತ್ತು ಹಣಕಾಸು ವಲಯವನ್ನು ಬಲಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. ಇದು ಅಮೃತಕಾಲದ ಮೊದಲ ಬಜೆಟ್ ಹಿಂದಿನ ಬಜೆಟ್‍ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ಕೊವಿಡ್ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಭಾರತವು ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಯಾವುದೇ ಭಾರತೀಯರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲಾಗಿದೆ, 80 ಕೋಟಿ ಜನರಿಗೆ ಆಹಾರ ಒದಗಿಸಲಾಯಿತು ಎಂದು ಹೇಳಿದರು.
ಜಾಗತಿಕ ಸಂಕಷ್ಟಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಲಭಿಸಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಭಾರತದ ಆರ್ಥಿಕತೆಯು ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ.ನಮ್ಮ ಸ್ಥಾನಮಾನವು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಮುಟ್ಟಿದ್ದೇವೆ. ಭಾರತ ಉತ್ತಮ ಆಡಳಿತದ ಪ್ರಗತಿಶೀಲ ದೇಶ ಎಂದು ವಿಶ್ವದಲ್ಲೇ ಗೌರವ ಪಡೆದಿದೆ ಎಂದು ತಿಳಿಸಿದರು.
# ಬಜೆಟ್‍ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು
ಪ್ರಸಕ್ತ ಆರ್ಥಿಕ ವರ್ಷದಲ್ಲಿ 45 ಲಕ್ಷ ಕೋಟಿ ರೂಪಾಯಿ ವೆಚ್ಚದ 2023-24ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು. ಹಿಂದಿನ ವರ್ಷ 24.3 ಲಕ್ಷ ಕೋಟಿ ಒಟ್ಟು ಆದಾಯ ಮತ್ತು 20.9 ಲಕ್ಷ ಕೋಟಿ ನಿವ್ವಳ ತೆರಿಗೆ ಆದಾಯವನ್ನು ನಿರೀಕ್ಷಿಸಲಾಗಿತ್ತು. ಒಟ್ಟು ಬಜೆಟ್‍ನ ಗಾತ್ರ 41.9 ಲಕ್ಷ ಕೋಟಿ ರೂಪಾಯಿಗಳಿತ್ತು. ಅದರಲ್ಲಿ ಬಂಡವಾಳ ವೆಚ್ಚಗಳನ್ನು 7.3 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.
ವಿತ್ತಿಯ ಕೊರತೆಯನ್ನು ಜಿಡಿಪಿಯಲ್ಲಿ 6.4ಕ್ಕೆ ನಿಗದಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸಾಲ ಹೊರತಾಗಿ 27.2 ಲಕ್ಷ ಕೋಟಿ ಆದಾಯ ಸಂಗ್ರಹ ಗುರಿ ನಿಗದಿಯಾಗಿದೆ. ಜೊತೆಗೆ ನಿವ್ವಳ ತೆರಿಗೆ ಆದಾಯವನ್ನು 23.3 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿತ್ತಿಯ ಕೊರತೆಯನ್ನು ಶೇ.5.9ರಷ್ಟಾಗುವ ನಿರೀಕ್ಷೆ ಇದೆ. 2021-22ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವಂತೆ 2025-26ನೇ ಸಾಲಿನ ವೇಳೆಗೆ ವಿತ್ತಿಯ ಕೊರತೆಯನ್ನು ಶೇ.4.5ರ ಒಳಗೆ ಮಿತಿಗೊಳಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
2023-24ನೇ ಸಾಲಿಗೆ ಮಾರುಕಟ್ಟೆಯಿಂದ 11.8 ಲಕ್ಷ ಕೋಟಿ ಸಾಲ ತೆಗೆಯುವ ಅಂದಾಜು ಮಾಡಲಾಗಿದೆ. ನಿವ್ವಳ ಮಾರುಕಟ್ಟೆ ಸಾಲ 15.4 ಲಕ್ಷ ಕೋಟಿಯಾಗುವ ನಿರೀಕ್ಷೆ ಇದೆ. ಇನ್ನೂ ವೆಚ್ಚದ ಪೈಕಿ ಕಂದಾಯ ವಲಯದಲ್ಲಿ ಕಳೆದ ವರ್ಷ 34.6 ಲಕ್ಷ ಕೋಟಿ ಇದಿದ್ದು, ಈ ಬಾರಿ 35 ಲಕ್ಷ ಕೋಟಿಗೆ ಹೆಚ್ಚಾಗಿದೆ. ಪರಿಣಾಮಕಾರಿ ಬಂಡವಾಳ ವೆಚ್ಚವನ್ನು 10.5 ಲಕ್ಷ ಕೋಟಿ ಎದುರಾಗಿ 13.7 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ಆದಾಯ ಸಂಗ್ರಹದಲ್ಲಿ ಕಂದಾಯ ವಲಯದಿಂದ ಕಳೆದ ವರ್ಷ 23.5 ಲಕ್ಷ ಕೋಟಿ ಗುರಿ ಇತ್ತು, ಅದನ್ನು 26.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಬಂಡವಾಳ ಮೂಲದ ಆದಾಯದಿಂದ 18.4 ಲಕ್ಷ ಕೋಟಿ ಬದಲು 18.7 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಇಲಾಖಾವಾರು ಹಂಚಿಕೆ:
ಇಲಾಖಾವಾರು ಅನುದಾನ ಹಂಚಿಕೆಯಲ್ಲಿ ರಕ್ಷಣಾ ಇಲಾಖೆ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ರಕ್ಷಣೆಗೆ 5.94 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗೆ 2.70 ಲಕ್ಷ ಕೋಟಿ, ರೈಲ್ವೆಗೆ 2.41 ಲಕ್ಷ ಕೋಟಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆಗೆ 2.06 ಲಕ್ಷ ಕೋಟಿ, ಗೃಹ ಸಚಿವಾಲಯಕ್ಕೆ 1.96 ಲಕ್ಷ ಕೋಟಿ, ರಸಾಯನಿಕ ಮತ್ತು ರಸಗೊಬ್ಬರ ವಲಯಕ್ಕೆ 1.78 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.60 ಲಕ್ಷ ಕೋಟಿ, ಕೃಷಿ ಮತ್ತು ರೈತ ಕಲ್ಯಾಣಕ್ಕೆ 1.25 ಲಕ್ಷ ಕೋಟಿ, ಸಂಪರ್ಕ ವಲಯಕ್ಕೆ 1.23 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ.
ಔಷ ವಲಯಕ್ಕೆ ಹೆಚ್ಚಿನ ಅನುದಾನ ನೀಡಲಾಇದೆ. ಕಳೆದ ಬಜೆಟ್‍ನಲ್ಲಿ 100 ಕೋಟಿ ಒದಗಿಸಲಾಗಿತ್ತು, ಈ ಬಾರಿ 1250 ಕೋಟಿ ರೂಪಾಯಿ ನೀಡಲಾಗಿದೆ. ಮನೆ ಮನೆಗೆ ನಲ್ಲಿ ಸಂಕರ್ಪ ಕಲ್ಪಿಸುವ ಜಲಜೀವನ್ ಮೀಷನ್ ಯೋಜನೆ ಅನುದಾನವನ್ನು 60 ಸಾವಿರ ಕೋಟಿಯಿಂದ 70 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 2 ಸಾವಿರದಿಂದ 5943 ಕೋಟಿ ರೂಪಾಯಿ, ವಸತಿ ನಿರ್ಮಿಸುವ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 48 ಸಾವಿರ ಕೋಟಿಯನ್ನು 79,590 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನಾ ವಲಯಕ್ಕೆ ಕಳೆದ ವರ್ಷ ನೀಡಿರುವ 2908 ಕೋಟಿ ರೂಪಾಯಿಗಳನ್ನು ಈ ಬಾರಿ 5172 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಈಶಾನ್ಯ ವಲಯಕ್ಕೆ 1419 ಕೋಟಿಯಿಂದ 2491 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.
# ಉಚಿತ ಪಡಿತರ ಯೋಜನೆ ಇನ್ನೂ 1 ವರ್ಷ ವಿಸ್ತರಣೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ಬಡವರಿಗೆ ಇನ್ನೂ ಒಂದು ವರ್ಷಗಳ ಕಾಲ ಉಚಿತ ಆಹಾರ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿದ್ದಾರೆ. ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 28 ತಿಂಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಬಜೆಟ್‍ನ ಕೆಲವು ಮುಖ್ಯ ಅಂಶಗಳು ಇಲ್ಲಿವೆ ನೋಡಿ
ಕೋವಿಡ್ ಕಾಲದಲ್ಲಿ ಹಸಿವನ್ನು ನೀಗಿಸಿದ ಈ ಯೋಜನೆಯನ್ನು ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸುತ್ತಿದ್ದೇವೆ. ಈ ಯೋಜನೆ ಜಾರಿಗೆ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ. ಅಗತ್ಯವಿದ್ದು, ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. 10 ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ ಎಂದು ಸರ್ಕಾರದ ಸಾಧನೆಯನ್ನು ತಿಳಿಸಿದರು.
# ರೈಲ್ವೇ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಕೊಡುಗೆ
ಸತತ ಐದನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ.2013-14 ನೇ ಸಾಲಿನ ನಂತರ ರೈಲ್ವೇ ಇಲಾಖೆಗೆ ಬಿಡುಗಡೆಯಾದ ಅತಿ ಹೆಚ್ಚಿನ ಅನುದಾನ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ರೈಲ್ವೆಗೆ ಒಟ್ಟು 2.40 ಲಕ್ಷ ಕೋಟಿ ರೂ. ದೊಡ್ಡ ರೈಲ್ವೆ ಯೋಜನೆಗಳ ಜಾರಿಗಾಗಿ ನಿರಂತರವಾಗಿ ಕೆಲಸಗಳು ನಡೆಯುತ್ತಿವೆ ಮತ್ತು ಮುಂಬರುವ ಕೆಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ಕೋಟಿಗಟ್ಟಲೆ ಜನರಿಗೆ ರೈಲ್ವೇ ಯೋಜನೆಗಳ ಉಪಯೋಗಗಳು ಲಭ್ಯವಾಗಲಿವೆ ಎಂದಿದ್ದಾರೆ.
ಚೆನಾಬ್ ನದಿಯ ರೈಲ್ವೆ ಸೇತುವೆ: ವಿಶ್ವದ ಅತಿ ಎತ್ತರದ ಸಿಂಗಲï-ಆರ್ಚ್ ರೈಲ್ವೆ ಸೇತುವೆಯನ್ನು ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಚೆನಾಬ್ ನದಿಯ ರೈಲ್ವೆ ಸೇತುವೆಯು ಉಧಮ್‍ಪುರ-ಶ್ರೀನಗರ-ಬಾರಾಮು ರೈಲು ಸಂಪರ್ಕ ಯೋಜನೆಯ ಒಂದು ಭಾಗವಾಗಿದೆ. 92 ಮಿಲಿಯನ್ ಬಜೆಟ್‍ನೊಂದಿಗೆ 1.3 ಕಿಲೋಮೀಟರ್ ಉದ್ದದ ಯೋಜನೆಯು ಕಾಶ್ಮೀರ ಕಣಿವೆಯನ್ನು ಭಾರತದ ಉಳಿದ ಭಾಗಗಳೊಂದಿಗೆ ರೈಲು ಜಾಲದ ಮೂಲಕ ಸಂಪರ್ಕಿಸುತ್ತದೆ.
ಕ್ಷಿಪ್ರ ರೈಲಿನ ಕಾರ್ಯಾಚರಣೆ: 2025 ರಲ್ಲಿ ದೆಹಲಿ-ಮೀರತ್ ನಡುವೆ ಕ್ಷಿಪ್ರ ರೈಲು ಓಡಿಸಲಾಗುವುದು. ಈ ಸಂಪೂರ್ಣ ರೈಲ್ವೆ ಕಾರಿಡಾರ್ ಮೂರು ವಿಭಾಗಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಮೊದಲ ವಿಭಾಗವು ಸಾಹಿಬಾಬಾದ್‍ನಿಂದ ದುಹೈ ಡಿಪೋ ನಡುವೆ 17 ಕಿಮೀ ಉದ್ದವಿದೆ. ಈ ವಿಭಾಗದಲ್ಲಿ ಕ್ಷಿಪ್ರ ರೈಲು ಮಾರ್ಚ್ 2023 ರಿಂದ ಪ್ರಯಾಣಕ್ಕಾಗಿ ಪ್ರಾರಂಭವಾಗಲಿದೆ. ಈ ವಿಭಾಗದಲ್ಲಿ ಟ್ರ್ಯಾಕ್ ಮಾಡುವ ಕೆಲಸ ಪೂರ್ಣಗೊಂಡಿದೆ. ಇಲ್ಲಿ ಓವರ್ ಹೆಡ್ ಸಲಕರಣೆ ಲೈನ್ ಅಳವಡಿಸುವ ಕೆಲಸ ನಡೆಯುತ್ತಿದೆ. ಮಾರ್ಚ್ 2023 ರಿಂದ, ಇದು ದುಹೈ ಡಿಪೋ ಮತ್ತು ಸಾಹಿಬಾಬಾದ್ ನಡುವೆ ಪ್ರಯಾಣಿಕರಿಗಾಗಿ ಓಡಲು ಪ್ರಾರಂಭಿಸುತ್ತದೆ.
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಗುಜರಾತ್‍ನ ಎಂಟು ಜಿಲ್ಲೇಗಳು ಮತ್ತು ದಾದ್ರಾ ಮತ್ತು ನಗರ್ ಹವೇಲಿ ಮೂಲಕ ಸಮಾನಾಂತರವಾಗಿ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬುಲೆಟ್ ರೈಲು ಯೋಜನೆ ಮಹಾರಾಷ್ಟ್ರ ಸೇರಿದಂತೆ ಇತ್ತೀಚೆಗೆ ವೇಗ ಪಡೆದುಕೊಂಡಿದೆ. ಅಧಿಕಾರಿಗಳ ಪ್ರಕಾರ, ಯೋಜನೆಯು 2027 ರಲ್ಲಿ ಪೂರ್ಣಗೊಳ್ಳಬಹುದು.
ಪ್ರಾರ್ಥನೆ ಸಲ್ಲಿಸುವವರ ಮೇಲೆ ಭಾರತದಲ್ಲೂ ದಾಳಿ ನಡೆಸಲ್ಲ : ಪಾಕ್ ಸಚಿವ
ಬೈರ್ಬಿ-ಸೈರಾಂಗ್ ಹೊಸ ಮಾರ್ಗದ ರೈಲು ಯೋಜನೆ: ಈಶಾನ್ಯ ರಾಜ್ಯವಾದ ಮಿಜೋರಾಂ ಅನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಬೈರ್ಬಿ-ಸೈರಾಂಗ್ ಹೊಸ ಮಾರ್ಗದ ರೈಲು ಯೋಜನೆಯಲ್ಲಿ ಕೆಲಸ ನಡೆಯುತ್ತಿದೆ. ಯೋಜನೆಯು ಪೂರ್ಣಗೊಂಡ ನಂತರ, ದೇಶದ ಈಶಾನ್ಯ ಪ್ರದೇಶದಲ್ಲಿ ವಿಶೇಷವಾಗಿ ಮಿಜೋರಾಂನಲ್ಲಿ ಸಂವಹನ ಮತ್ತು ವಾಣಿಜ್ಯದ ವಿಷಯದಲ್ಲಿ ಹೊಸ ಯುಗವು ಪ್ರಾರಂಭವಾಗುತ್ತದೆ. ಬೈರಾಬಿ-ಸೈರಂಗ್ ಯೋಜನೆಯು ಈಶಾನ್ಯ ಭಾರತದಲ್ಲಿ ಹೆಚ್ಚುವರಿ 51.38 ಕಿಮೀ ರೈಲು ಮಾರ್ಗವನ್ನು ರಚಿಸುವ ಗುರಿಯನ್ನು ಹೊಂದಿದೆ.
ಭಾಲುಕ್‍ಪಾಂಗ್-ತವಾಂಗ್ ಲೈನ್: ಭಾಲುಕ್‍ಪಾಂಗ್-ತವಾಂಗ್ ಲೈನ್ ಈಶಾನ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ, ಇದು ಚೀನಾದೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಪ್ರದೇಶದಲ್ಲಿ ಸೇನೆಯ ವ್ಯಾಪಕ ಅಗತ್ಯಗಳನ್ನು ಪೂರೈಸುತ್ತದೆ. ಉದ್ದೇಶಿತ ಮಾರ್ಗವು ಹಲವಾರು ಸುರಂಗಗಳನ್ನು ಹೊಂದಿರುತ್ತದೆ ಮತ್ತು 10,000 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ.ಅದೇ ರೀತಿ ದೇಶದ ವಿವಿಧ ರಾಜ್ಯಗಳ ಹಲವಾರು ರೈಲು ಯೋಜನೆಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಅವರು ಹೇಳಿದರು.
# ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ
ಮಧ್ಯಕರ್ನಾಟಕಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಭದ್ರ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5300 ಕೋಟಿ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.ಕರ್ನಾಟಕದ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು 5300 ಕೋಟಿ ಅನುದಾನ ಹಾಗೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಾರೆ.
ಈ ಮೂಲಕ ಭದ್ರ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ. 5,57,022 ಎಕರೆ ಭೂ ಪ್ರದೇಶ ನೀರಾವರಿಗೆ ಒಳಪಡಲಿದೆ.ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆ ಎಂಬ ಹಿರಿಮೆಗೆ ಭದ್ರಾ ಮೇಲ್ದಂಡೆ ಪಾತ್ರವಾಗಿದೆ. ಹನಿ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸುವ ಬೃಹತ್ ಗಾತ್ರದ ನೀರಾವರಿ ಯೋಜನೆ ಇದಾಗಿದೆ. ಇತರ ರಾಜ್ಯಗಳ ನೀರಾವರಿ ಯೋಜನೆಗಳಿಗೂ ಇದು ಮಾದರಿಯಾಗಲಿದೆ.
# ಸತತ 5 ಬಜೆಟ್ ಮಂಡಿಸಿದ 6ನೇ ಸಚಿವೆ ನಿರ್ಮಲಾ ಸೀತಾರಾಮನ್
ಸತತ ಐದನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಭಾರತದ ಆರನೇ ವಿತ್ತ ಸಚಿವೆ ಎಂಬ ಕೀರ್ತಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಜನರಾಗಿದ್ದಾರೆ.ಈ ಹಿಂದೆ ಮೊರರ್ಜಿ ದೇಸಾಯಿ, ಮಹಮೋಹನ್ ಸಿಂಗ್, ಯಶವಂತ್ ಸಿನ್ಹಾ, ಆರುಣ್ ಜೇಟ್ಲಿ, ಪಿ.ಚಿದಂಬರಂ ಅವರಂತಹ ಘಟಾನುಘಟಿ ಆರ್ಥ ಸಚಿವರು ಸತತ ಐದು ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಿ ಗಮನ ಸೆಳೆದಿದ್ದರು.
ಇಂದು ತಮ್ಮ ಸತತ ಐದನೆ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ಐದನೆ ಬಾರಿ ಬಜೆಟ್ ಮಂಡನೆ ಮಾಡುತ್ತಿರುವ ದೇಶದ ಆರನೇ ವಿತ್ತ ಸಚಿವೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2019 ರಿಂದ ಇದುವರೆಗೂ ಐದು ಬಾರಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ಇದೀಗ ದೇಶದ ಅತ್ಯುತ್ತಮ ವಿತ್ತ ಸಚಿವೆ ಎಂಬ ಹಿರಿಮೆಗೂ ಪಾತ್ರರಾಗಿರುವುದು ಉಲ್ಲೇಖಾರ್ಹವಾಗಿದೆ.
2014 ರಲ್ಲಿ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವಾಲಯದ ಅಕಾರ ವಹಿಸಿಕೊಂಡ ನಂತರ, ಜೇಟ್ಲಿ 2014-15 ರಿಂದ 2018-19 ರವರೆಗೆ ಸತತವಾಗಿ ಐದು ಬಜೆಟ್‍ಗಳನ್ನು ಮಂಡಿಸಿದರು.ಜೇಟ್ಲಿ ಅವರ ಅನಾರೋಗ್ಯದ ಕಾರಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿರುವ ಪಿಯೂಷ್ ಗೋಯಲ್ ಅವರು 2019-20 ರ ಮಧ್ಯಂತರ ಬಜೆಟ್ ಅಥವಾ ವೋಟ್ ಆನ್ ಅಕೌಂಟ್ ಅನ್ನು ಮಂಡಿಸಿದರು.
2019 ರ ಸಾರ್ವತ್ರಿಕ ಚುನಾವಣೆಯ ನಂತರ, ಮೋದಿ 2.0 ಸರ್ಕಾರದಲ್ಲಿ, ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಬಜೆಟ್ ಮಂಡನೆ ಮಾಡುತ್ತಲೆ ಬಂದಿರುವ ನಿರ್ಮಲಾ ಅವರು 1970-71 ಸಮಯದಲ್ಲಿ ಇಂದಿರಾಗಾಂಧಿ ಅವರ ನಂತರ ಬಜೆಟ್ ಮಂಡಿಸಿದ ಎರಡನೆ ಮಹಿಳಾ ಮಂತ್ರಿಯಾಗಿಯೂ ಹೊರ ಹೊಮ್ಮಿದ್ದಾರೆ.
# ರಾಷ್ಟ್ರಪತಿ ಒಪ್ಪಿಗೆ ಪಡೆದ ನಿರ್ಮಲಾ
ನವದೆಹಲಿ,ಫೆ.1- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಹಾಗೂ ಎನ್‍ಡಿಎ ಸರ್ಕಾರದ ಪೂರ್ಣಾವ ಕೊನೆಯ ಬಜೆಟ್ 2023-24 ಅನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ. ಇದಕ್ಕೂ ಮುನ್ನಾ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆದುಕೊಂಡರು.

ಸತತವಾಗಿ ಕಾಗದ ರಹಿತ ಬಜೆಟ್‍ನ ಮೂರನೇ ವರ್ಷದಲ್ಲಿ ಟ್ಯಾಬ್ ಬಳಕೆ ಮಾಡುವ ಮೂಲಕ ಬಜೆಟ್ ಮಂಡನೆಯಲ್ಲಿ ಹೈಟೆಕ್ ಸಂಸ್ಕøತಿಯನ್ನು ಕೇಂದ್ರ ಸಚಿವೆ ಮುಂದುರೆಸಿದರು. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುವುದರಿಂದ ಪೂರ್ಣಾವಯ ಬಜೆಟ್‍ಗೆ ಅವಕಾಶ ಇರುವುದಿಲ್ಲ, ಕೇವಲ ಭರವಸೆಗಳ ಆಯವ್ಯಯವನ್ನು ಸಿದ್ದಪಡಿಸಬಹುದು ಮತ್ತು ಲೇಖಾನುದಾನ ಮಾತ್ರ ಪಡೆದುಕೊಳ್ಳಲು ಅವಕಾಶ ಇದೆ.
ಈ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ಮಂಡನೆಯಾಗುವ ಬಜೆಟ್ ಅನ್ನೇ ಪೂರ್ಣಾವಯ ಆಯವ್ಯಯ ಎಂದು ಪರಿಗಣಿಸಲಾಗುತ್ತಿದೆ. ಇಂದು ಬೆಳಗ್ಗೆ ಲೋಕಸಭೆಗೆ ಆಗಮಿಸುವ ಮುನ್ನಾ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಇಲಾಖೆಯ ಸಹದ್ಯೋಗಿ ಸಚಿವರಾದ ಡಾ.ಭಗವತ್ ಕಿಶನ್‍ರಾವ್, ಪಂಕಜ್ ಚೌದರಿ ಮತ್ತು ಹಿರಿಯ ಅಕಾರಿಗಳೊಂದಿಗೆ ಸಂಸತ್‍ನಸ ತಮ್ಮ ಕಚೇರಿಗೆ ಭೇಟಿ ನೀಡಿದರು.

ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್ ಪ್ರತಿಗೆ ಅಂಗೀಕಾರ ಪಡೆದುಕೊಂಡರು. ಬಳಿಕ ನಡೆದ ಸಚಿವ ಸಂಪುಟಸಭೆಯಲ್ಲಿ ಭಾಗವಹಿಸಿದ್ದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಅದನ್ನು ರಾಜ್ಯಸಭೆಯಲ್ಲೂ ಮಂಡಿಸಲಾಯಿತು.
ಕೋವಿಡ್ ನಂತರ ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ವಿಶ್ವವೇ ಆರ್ಥಿಕ ಮುಗ್ಗಟ್ಟು ಹೆದರಿಸುತ್ತಿರುವಾಗ ಭಾರತ ಮಾತ್ರ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಪರಿಗಣಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಬಜೆಟ್‍ನತ್ತ ದೇಶವಾಸಿಗಳಷ್ಟೆ ಅಲ್ಲ, ಇಡೀ ವಿಶ್ವವೇ ಗಮನ ಕೇಂದ್ರೀಕರಿಸಿತ್ತು.
ಪ್ರಧಾನಿ ನರೇಂದ್ರ ಮೋದಿ 2025ರ ವೇಳೆ ಭಾರತವನ್ನು ಐದು ಟ್ರಿಲಿಯನ್‍ಆರ್ಥಿಕತೆಯ ರಾಷ್ಟ್ರವನ್ನಾಗಿಸಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಬಜೆಟ್ ಕೂಡ ಕುತೂಹಲ ಕಾರಿಯಾಗಿದೆ.