ಕೇಂದ್ರ ಸಂಪುಟ ಪುನಾರಚನೆ ಸಾಧ್ಯತೆ..!

Social Share

ನವದೆಹಲಿ,ಜ.14- ಕೇಂದ್ರದಲ್ಲಿ ಈಗ ಸಂಪುಟ ಪುನಾರಚನೆಯ ಗುಸುಗುಸು ದಟ್ಟವಾಗಿ ಕೇಳಿಬರುತ್ತಿದೆ. ಈ ವರ್ಷ ಕರ್ನಾಟಕ, ರಾಜಸ್ಥಾನ, ಛತ್ತೀಸ್ಘಢ ಸೇರಿದಂತೆ 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದರ ಜತೆಗೆ ಮುಂದಿನ 15 ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಬಿಹಾರ, ಪಶ್ಚಿವಬಂಗಾಳದಂತಹ ದೊಡ್ಡ ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ರಾಜಕೀಯ ಲೆಕ್ಕಾಚಾರದ ಹೆಜ್ಜೆ ಇಡಲು ಬಿಜೆಪಿ ಸಜಾ್ಜಗಿದೆ.

ಜನವರಿ 16ರಿಂದ 17ರವರೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ಆದಾದ ನಂತರ ಕೇಂದ್ರ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.ಜನವರಿ 31ಕ್ಕೆ ಕೇಂದ್ರ ಬಜೆಟ್ ಅವೇಶನ ಆರಂಭವಾಗುತ್ತಿದ್ದು ಅದಕ್ಕೆ ಮುನ್ನ ಅಥವಾ ಮೊದಲ ಹಂತದ ಬಜೆಟ್ ಅವೇಶನ ಮುಗಿಯುವ ಫೆಬ್ರವರಿ 10ರ ನಂತರ ಸಚಿವ ಸಂಪುಟ ಪುನಾರಚನೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಕೆಲವು ಹಳಬರಿಗೆ ಹೊಸ ಜವಾಬ್ದಾರಿಗಳನ್ನು ಸಂಪುಟದಲ್ಲಿ ಅಥವಾ ಸಂಘಟನೆಯ ಒಳಗೆ ನೀಡುವ ಸಾಧ್ಯತೆಯಿದೆ. ಅಂತೂ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ, ಬೆಳವಣಿಗೆಗಳು ನಡೆಯಲಿವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಬೆಂಗಳೂರು ವಿವಿಯಲ್ಲಿ ಕಾಣಿಸಿಕೊಂಡಿದ್ದು ಚಿರತೆಯಲ್ಲ ಕಾಡುಬೆಕ್ಕು

ಪ್ರಸ್ತುತ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಕೇಂದ್ರ ಸಚಿವೆ ಸ್ಮತಿ ಇರಾನಿ ನಿರ್ವಹಿಸುತ್ತಿದ್ದರೆ ಉಕ್ಕು ಖಾತೆಯನ್ನು ಜ್ಯೋತಿರಾತ್ಯ ಸಿಂಯಾ ವಹಿಸಿಕೊಂಡಿದ್ದಾರೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಜವಳಿ ಖಾತೆಗೆ ಸಹ ಹೊಸ ಸಚಿವರ ನೇಮಕವಾಗಬಹುದು. ಪ್ರಸ್ತುತ ಅದು ಪಿಯೂಷ್ ಗೋಯಲ್ ನಿರ್ವಹಣೆಯಲ್ಲಿದೆ. ಕಲ್ಲಿದ್ದಲು ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜಾ್ಞನ ಸಚಿವಾಲಯಗಳಿಗೆ ಸಹ ಹೊಸ ಮುಖಗಳು ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ.

ಮೋದಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಈ ಖಾತೆಯನ್ನು ಹಿಂದೆ ಮುಖ್ತಾರ್ ಅಬ್ಬಾಸ್ ನಖ್ವಿ ವಹಿಸಿಕೊಂಡಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜೆ.ಪಿ.ನಡ್ಡಾ ಅವರ ಅಕಾರಾವ ಮುಗಿದ ನಂತರದಲ್ಲಿ ಆ ಸ್ಥಾನಕ್ಕೆ ಗುಜರಾತ್ನ ಸಿ.ಆರ್.ಪಾಟೀಲ್ ಮತ್ತು ಧರ್ಮೇಂದ್ರ ಪ್ರದಾನ್ ಅವರ ಹೆಸರುಗಳು ಕೇಳಿಬರುತ್ತಿವೆ.

ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ ಪಕ್ಷವನ್ನು ಮುನ್ನಡೆಸುತ್ತಿರುವ ಚಿರಾಗ್ ಪಾಸ್ವಾನ್ ಅವರಿಗೂ ಸಹ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲು ಮತ್ತು ದೆಹಲಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಸೋಲು ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ಸಂಪುಟ ಪುನಾರಚನೆ ಬಳಿಕ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ನಿರ್ಗಮನ (ರಾಜ್ಯಸಭೆ ಸದಸ್ಯತ್ವ ಅಂತ್ಯ) ಮತ್ತು ಮಾಜಿ ಮಿತ್ರ ಪಕ್ಷಗಳಾದ ಜೆಡಿಯು ಹಾಗೂ ಶಿವಸೇನಾಕ್ಕೆ ನೀಡಿದ್ದ ಸಚಿವ ಸ್ಥಾನಗಳು ಈಗ ಖಾಲಿ ಇರುವುದರಿಂದ ಅವುಗಳನ್ನು ಭರ್ತಿ ಮಾಡಬೇಕಿದೆ.

ಮೊದಲನೇ ಅವಯ ಸರಕಾರದಲ್ಲಿ ಪಿಎಂ ನರೇಂದ್ರ ಮೋದಿ ಅವರು ಮೂರು ಬಾರಿ ಸಚಿವ ಸಂಪುಟ ಪುನಾರಚಿಸಿದ್ದರು. ಆದರೆ 2019ರಲ್ಲಿ ಎರಡನೇ ಬಾರಿಗೆ ರಚನೆಯಾದ ಬಿಜೆಪಿ ಸರಕಾರದಲ್ಲಿ ಮೋದಿ ಅವರು 2021ರ ಜುಲೈನಲ್ಲಿ ಸಂಪುಟ ಪುನಾರಚಿಸಿದ್ದು ಬಿಟ್ಟರೆ, ಮತ್ತೆ ಬದಲಾವಣೆಗಳನ್ನು ಮಾಡಿಲ್ಲ.

#CabinetReshuffle,

Articles You Might Like

Share This Article