ಬೆಂಗಳೂರಿನತ್ತ ಚುನಾವಣಾ ಚಾಣಕ್ಯನ ಚಿತ್ತ

Social Share

ಬೆಂಗಳೂರು, ಮಾ.2- ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ನಿರ್ಣಾಯಕವಾಗಿರುವ ರಾಜ್ಯ ರಾಜಧಾನಿಯ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದತ್ತ ಗಮನ ಹರಿಸಿದ್ದಾರೆ.

ತಮ್ಮ ಕೊನೆಯ ಭೇಟಿಯ ಸಂದರ್ಭದಲ್ಲಿ ನಗರದ ಟೌನ್ ಹಾಲ್‍ನಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದರು.ನಾಳೆ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಶಾ, ನಿರ್ಭಯಾ ನಿಯಿಂದ ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ದೇಶದಾದ್ಯಂತ ಆಯ್ಕೆಯಾದ ಎಂಟು ನಗರಗಳಲ್ಲಿ ಬೆಂಗಳೂರು ಕೂಡ ಒಂದು, ಇದು ಕೂಡ. ಗೃಹ ವ್ಯವಹಾರಗಳ ಸಚಿವಾಲಯದ ಯೋಜನೆಯಾಗಿದೆ.

ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ

ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದರೆ ಮತದಾರರ ನಾಡಿಮಿಡಿತವನ್ನು ಅರಿಯಲು ಬಿಜೆಪಿಗೆ ಸಹಾಯವಾಗುತ್ತಿತ್ತು, ಆದರೆ ಇನ್ನೂ ಬಿಬಿಎಂಪಿ ಚುನಾವಣೆ ನಡೆಯದ ಕಾಣ ಬಿಜೆಪಿ ಸ್ವಲ್ಪ ಇಕ್ಕಟ್ಟಿಗೆ ಸಿಲುಕಿದೆ.

ರಸ್ತೆ ಗುಂಡಿಗಳು, ಹದಗೆಟ್ಟ ರಸ್ತೆ ಸೇರಿದಂತೆ ಹಲವಾರು ನಾಗರಿಕ ಸಮಸ್ಯೆಗಳಿಂದ ತತ್ತರಿಸುತ್ತಿರುವ ಸಾರ್ವಜನಿಕರನ್ನು ಓಲೈಸಲು ಪಕ್ಷವು ಹೆಚ್ಚಿನ ಮೈಲು ದೂರ ಹೋಗಬೇಕಾಗುತ್ತದೆ.

ಆದ್ದರಿಂದ ಅಮಿತ್ ಶಾ ಮತ್ತು ಪಿಎಂ ನರೇಂದ್ರ ಮೋದಿ ಅವರಂತಹ ರಾಷ್ಟ್ರೀಯ ನಾಯಕರ ಭೇಟಿ ಪಕ್ಷಕ್ಕೆ ಅಗತ್ಯವಿದೆ ಎಂಬುದನ್ನು ಪಕ್ಷದ ಮುಖಂಡರೇ ಒಪ್ಪಿಕೊಳ್ಳುತ್ತಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 28 ಸ್ಥಾನಗಳಲ್ಲಿ ಆಗಿನ ಆಡಳಿತಾರೂಢ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 11, ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, 2019ರಲ್ಲಿ ಮೂವರು ಕಾಂಗ್ರೆಸ್ ಶಾಸಕರು (ಎಸ್.ಟಿ.ಸೋಮ ಶೇಖರ್, ಬೈರತಿ ಬಸವರಾಜ್ ಮತ್ತು ಮುನಿರತ್ನ) ಮತ್ತು ಜೆಡಿಎಸ್ ಶಾಸಕ (ಕೆ.ಗೋಪಾಲಯ್ಯ) ಬಿಜೆಪಿ ಸೇರ್ಪಡೆಯಾದರು.

ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ

ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದರು, ಇದರಿಂದ ಬಿಜೆಪಿ ಶಾಸಕರ ಸಂಖ್ಯೆ 15 ಕ್ಕೆ ಏರಿತು. ಗೃಹ ಸಚಿವ ಅಮಿತ್ ಶಾ ಯಾವುದೇ ಒಂದು ಸಣ್ಣ ಅವಕಾಶವನ್ನೂ ಬಿಡುತ್ತಿಲ್ಲ, ಹೀಗಾಗಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಬರುತ್ತಿದ್ದಾರೆ. ನಾಳೆ ದೇವನಹಳ್ಳಿಯ ಆವತಿ ಗ್ರಾಮದ ಚೆನ್ನಕೇಶವ ದೇಗುಲ ಬಳಿ ಚಾಲನೆ ನೀಡಿ ಬೃಹತ್ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

Union Home Minister, Amit Shah, Bangalore,

Articles You Might Like

Share This Article