ಬೆಂಗಳೂರು,ಫೆ.11- ಕರಾವಳಿ ಭಾಗದಲ್ಲಿ ಕೇಂದ್ರ ಗೃಹ ಸಚಿವರಿಗೆ ರಕ್ಷಣೆ ನೀಡಲಾಗದೆ ರೋಡ್ ಶೋ ರದ್ದುಗೊಳಿಸಿರುವುದು ರಾಜ್ಯಕ್ಕಾದ ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ತೂರು ರೋಡ್ ಶಾ ರದ್ದುಗೊಂಡಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರು ಟ್ವೀಟ್ ಮಾಡಿ ಕಾನೂನು ಸುವ್ಯವಸ್ಥೆ ಕಾರಣಕ್ಕೆ ರೋಡ್ ಶೋ ರದ್ದುಗೊಂಡಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದರೆ ಇನ್ನೂ ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ಅಮಿತಾ ಶಾ ಸಾಹೇಬರಿಗೆ ರಕ್ಷಣೆ ಕೊಡಲಾಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ರಾಜ್ಯಕ್ಕೆ ಇದಕ್ಕಿಂತ ನಾಚಿಗೆಗೇಡು ಮತ್ತು ಅವಮಾನವಾದ ವಿಷಯ ಮತ್ತೊಂದಿಲ್ಲ. ರಾಜ್ಯದಲ್ಲಿ ಕಾನೂನು ಇಲ್ಲದ ಸರ್ಕಾರ, ರಕ್ಷಣೆ ನೀಡಲಾಗದ ಸರ್ಕಾರ ಕೊನೆಯಾಗಬೇಕಿದೆ.
ಶೇ.50 ರಿಯಾಯಿತಿ ದಂಡ ವಸೂಲಿಯಲ್ಲಿ ಪೊಲೀಸರಿಂದ ನಿಯಮ ಉಲ್ಲಂಘನೆ
ಇದಕ್ಕಾಗಿ ನಾವು ಯಾವುದೇ ತನಿಖೆಯನ್ನು ಒತ್ತಾಯಿತ್ತಿಲ್ಲ. ಸರ್ಕಾರ ವಜಾ ಆಗಬೇಕು ಎಂದು ಹೇಳುವುದಿಲ್ಲ. ಬಿಜೆಪಿಯವರ ಹೇಳಿಕೆಗಳ ಕನ್ನಡಿಗಳು, ಅವರ ಮನಸಾಕ್ಷಿ, ಅವರ ಹೇಳಿಕೆಗಳು ಮುಖದ ಕನ್ನಡಿ ಇದ್ದಂತೆ. ಇದಕ್ಕೆ ಜನರೇ ಉತ್ತರ ನೀಡಬೇಕು. ಸ್ಪಷ್ಟನೆ ನೀಡುವಂತೆ ನಾನು ಗೃಹ ಸಚಿವರನ್ನು ಕೇಳಿವುದಿಲ್ಲ, ಮುಖ್ಯಮಂತ್ರಿಯವರೇ ಉತ್ತರಿಸಬೇಕು ಎಂದರು.
ಈ ಹಿಂದೆ ಬಿಜೆಪಿಯ ಕಾರ್ಯಕರ್ತರು ಕೊಲೆಯಾದಾಗ ಆ ಪಕ್ಷದ ಕಾರ್ಯಕರ್ತರು ಯಾವ ರೀತಿ ಆಕ್ರೋಶ ವ್ಯಕ್ತ ಪಡಿಸಿದರು ಎಂದು ನಾವು ನೋಡಿದ್ದೇವೆ. ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಬಿಜೆಪಿ ಅಧ್ಯಕ್ಷರಿದ್ದ ಕಾರನ್ನು ಎತ್ತಿಬಿಸಾಕಲು ಯತ್ನಿಸಲಾಗಿತ್ತು. ಈಗ ಕಾನೂನು ಸುವ್ಯಸ್ಥೆ ಪಾಲನೆ ಮಾಡಲಾಗದೆ ಕೇಂದ್ರ ಗೃಹ ಸಚಿವರ ರೋಡ್ ಶೋವನ್ನೆ ರದ್ದು ಮಾಡಿರುವುದು ರಾಜ್ಯಕ್ಕೆ ಆಗಿರುವ ದೊಡ್ಡ ಅವಮಾನ ಎಂದರು.
ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಚುನಾವಣೆ ಸಮೀಪಿಸಿದ ಕಾಲದಲ್ಲಿ ನೌಕರರು, ಕಾರ್ಮಿಕರು, ದೀನ ದಲಿತರು ಎಲ್ಲಾ ಜಾತಿ ಜನಾಂಗಗಳ ಹಿತ ರಕ್ಷಣೆಗೆ ಬದ್ಧ ಎಂದು ಶಾಂತಿ ಮಂತ್ರ ಜಪಿಸುತ್ತಾರೆ. ನಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಆಯನೂರು ಮಂಜುನಾಥ್ ಅವರು ಮೋದಿ, ಅಮಿತ್ ಶಾ, ಕಟೀಲ್ ಅವರ ಫೋಟೋ ಹಾಕಿಕೊಂಡು ಗೂಂಡಾ, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ, ಕೋಮುಗಲಭೆ, ದಂಗೆ, ರಕ್ತಪಾತ ರಹಿತ, ನಿಷೇದಾಜ್ಞೆ ಮುಕ್ತ ನೆಮ್ಮದಿಯ ಶಿವಮೊಗ್ಗಕ್ಕೆ ಬೆಂಬಲ ನೀಡುವಂತೆ ಬೋರ್ಡ್ ಹಾಕಿಕೊಂಡಿದ್ದಾರೆ. ಅಂದರೆ ಶಿವಮೊಗ್ಗದಲ್ಲಿ ನೆಮ್ಮದಿ, ಶಾಂತಿ ಇಲ್ಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಸಂಸದ, ಎಂ ಎಲ್ ಸಿ ಆಗಿದ್ದ ಆಯನೂರು ಮಂಜುನಾಥ ಅವರು ಸತ್ಯ ಒಪ್ಪಿರುವುದಕ್ಕೆ ಸೆಲ್ಯೂಟ್ ಮಾಡುತ್ತೇನೆ. ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ಸೌಹಾರ್ದತೆ ನಾಶವಾಗಿದ್ದು ಮಲೆನಾಡು ಹಾಗೂ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರವನ್ನು ಕಿತ್ತುಹಾಕಬೇಕು.
ಬಿಜೆಪಿಯವರು ಅಂಬೇಡ್ಕರ್ ಅವರ ಸಂವಿಧಾನದ ಹೆಸರಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರ ಸ್ವೀಕರಿಸಿ ನಂತರ ಎಲ್ಲಾ ವರ್ಗದ ರಕ್ಷಣೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ಜಿಲ್ಲೆ, ಮಲೆನಾಡು, ಕರಾವಳಿ ಭಾಗದಲ್ಲಿ ಇದು ಸಾಧ್ಯವಾಗಿಲ್ಲ ಎಂದು ಅವರ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಮತ್ತೇನು ಬೇಕು? ಎಂದರು,
ಶಾಂತಿ ಬಯಸುವುದರಲ್ಲಿ ತಪ್ಪೇನು ಎಂಬ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅರ್ಹತೆಯನ್ನು ಅವರು ಉಳಿಸಿಕೊಂಡಿಲ್ಲ. ಇಡೀ ಸರ್ಕಾರ ಹಾಗೂ ರಾಜ್ಯಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಶಿವಮೊಗ್ಗದಲ್ಲಿ ನಿಷೇಧಾಧಿ ಜಾರಿ ಇದ್ದರೂ ಮೆರವಣಿಗೆ ಮಾಡಿದ್ದು ಅವರೇ ಅಲ್ಲವೇ? ಬಿಜೆಪಿ ಅವರು ಹೃದಯಪೂರ್ವಕವಾಗಿ ಸತ್ಯ ಒಪ್ಪಿಕೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
1700 ಅಡಿ ಎತ್ತರದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್
ಚುನಾವಣೆ ಕಾಲದಲ್ಲಿ ಬಿಜೆಪಿ ಅಭ್ಯರ್ಥಿಗಳ ಪೆÇೀಸ್ಟರ್ ಅಂಟಿಸಿ ಪ್ರಚಾರ ಮಾಡಿದಂತೆ ಎಲ್ಲಾ ಜಾತಿ ಜನಾಂಗಗಳನ್ನು ವಿಶ್ವಾಸದಿಂದ ನೋಡಿಕೊಳ್ಳುತ್ತಿಲ್ಲ. ಹಿಂದುತ್ವ ಈಗ ಅಜೆಂಡಾವೇ ಅಲ್ಲ, ಈ ಮೊದಲು ಕೋಮು ಗಲಭೆಯಲ್ಲಿ ಸಾವನ್ನಪ್ಪಿದವರಿಗೆ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಅದೇ ರೀತಿ ಗಲಭೆಯಲ್ಲಿ ಮೃತಪಟ್ಟ ಅನ್ಯ ಧರ್ಮದವರಿಗೆ ಒಂದು ರೂಪಾಯಿಯನ್ನು ನೀಡಲಿಲ್ಲ. ನಿಷೇಧಾಜ್ಞೆ ಇದ್ದಾಗ್ಯೂ ಧ್ವಜ ಹಿಡಿದು ಶವಯಾತ್ರೆ ನಡೆಸಿದರು. ಈಗ ಸರ್ವ ಧರ್ಮ ಸಮನ್ವಯ ಜಪ ಮಾಡುತ್ತಿದ್ದಾರೆ. ಬಹುಶಃ ಈಗ ಅವರಿಗೆ ಸತ್ಯ ಅರಿವಾಗಿದೆ, ಅದನ್ನು ಪೋಸ್ಟರ್ ಮೂಲಕ ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಬಿಜೆಪಿ ಆಂತರಿಕ ವರದಿಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಮೂರರಿಂದ ನಾಲ್ಕು ಸ್ಥಾನ ಗೆಲ್ಲಲಿದೆ ಎಂದು ಹೇಳಿರುವುದು ಸುಳ್ಳು ಮಾಹಿತಿ. ನಮ್ಮ ವರದಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರವೇ ಕಾಂಗ್ರೆಸ್ 10 ಸ್ಥಾನ ಗೆಲ್ಲಲಿದೆ. ನಮ್ಮದೇ ಆದ ಕಾರ್ಯಕ್ರಮ ಇದೆ. ಸಮಾಜದ ಎಲ್ಲಾ ವರ್ಗಗಳಿಗೆ ಪ್ರತ್ಯೇಕ ನಿಗಮ ಮಾಡಿ, ಸಣ್ಣ ಸಮುದಾಯ, ಕಲಾವಿದರು ಮತ್ತು ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಘೋಷಿಸುವುದಾಗಿ ಭರವಸೆ ನೀಡಿದ್ದೇವೆ. ಹೀಗಾಗಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಐಸಿಸಿಯ ರಚಿಸಿರುವ ಪರಿಶೀಲನಾ ಸಮಿತಿ ಸದಸ್ಯರು ಶೀಘ್ರವೇ ಬೆಂಗಳೂರಿಗೆ ಬರಲಿದ್ದಾರೆ. ಈಗಾಗಲೇ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಚರ್ಚೆ ನಡೆಸಿದ್ದೇವೆ. ಅಲ್ಲಿ ಸಂಭವನೀಯ ಅಭ್ಯರ್ಥಿಗಳ ಮಾಹಿತಿಯನ್ನು ಕ್ರೋಢಿಕರಿಸಿ ಪರಿಶೀಲನಾ ಸಮಿತಿಗೆ ರವಾನೆ ಮಾಡಿದ್ದೇವೆ. ರಾಜ್ಯಕ್ಕೆ ಭೇಟಿ ನೀಡುವ ಎಐಸಿಸಿಯ ಪರಿಶೀಲನಾ ಸಮಿತಿ ನಮ್ಮೊಂದಿಗೆಲ್ಲಾ ಚರ್ಚೆ ನಡೆಸಲಿದೆ. ನಂತರ ಅಭ್ಯರ್ಥಿಗಳ ಆಯ್ಕೆ ವಿಷಯಾಗಿ ಹೈಕಮಾಂಡ್‍ಗೆ ವರದಿ ನೀಡಲಿದೆ ಎಂದರು.
Union, Home Minister, road show, KPCC, president, DK Shivakumar,