ಭೂಮಂಡಲಕ್ಕೆ ಕಾದಿದೆ ಅಪಾಯ, ಆತಂಕ ವ್ಯಕ್ತಪಡಿಸಿದ ಗುಟೆರೆಸ್

Social Share

ವಿಶ್ವಸಂಸ್ಥೆ, ನ.4- ಭೂ ಮಂಡಲವು ಬದಲಾಯಿಸಲಾಗದ ಹವಾಮಾನ ಅವ್ಯವಸ್ಥೆ ಯತ್ತ ಸಾಗುತ್ತಿದೆ ಎಂದು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಈಜಿಪ್ಟ್‍ನಲ್ಲಿ ಮುಂಬರುವ ಹವಾಮಾನ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಜಾಗತಿಕ ತಾಪಮಾನ ತಗ್ಗಿಸಲು ಗಂಭೀರವಾಗಿ ಚರ್ಚಿಸಿ ಮತ್ತೆ ಜಗತ್ತನ್ನು ಸರಿ ದಾರಿಗೆ ತರಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಅಭಿವೃದ್ಧಿಶೀಲ ರಾಷ್ಟ್ರಗಳು ನವೀಕರಿಸಬಹುದಾದ ಇಂಧನದ ಬಗ್ಗೆ ತಮ್ಮ ವೇಗವನ್ನು ಹೆಚ್ಚಿಸಬೇಕು ಎಂದು ಎಚ್ಚರಿಸಿದ್ದಾರೆ. ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸ್ಪಷ್ಟವಾದ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ಅವರು ಹೇಳಿದರು.

ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಉದಯೋನ್ಮುಖ ಆರ್ಥಿಕತೆ ದೇಶಗಳ ನಡುವೆ ಐತಿಹಾಸಿಕ ಒಪ್ಪಂದದ ಅಗತ್ಯವಿದೆ ಎಂದು ಗುಟೆರಸ್ ಹೇಳಿದರು.

ಟಿ-20 ವಿಶ್ವಕಪ್ : ಆಸ್ಟ್ರೇಲಿಯಾ-ಭಾರತ ಫೈನಲ್ ಫೈಟ್, ಪಾಂಟಿಂಗ್ ಭವಿಷ್ಯ

ವಿಜ್ಞಾನಿಗಳು ಹೇಳುವಂತೆ 2030 ರ ವೇಳೆಗೆ 45% ರಷ್ಟು ಕಡಿಮೆಯಾಗುವ ಬದಲು ಜಾಗತಿಕ ತಾಪಮಾನದ ಹಸಿರುಮನೆ ಅನಿಲ ಹೊರಸೂಸುವಿಕೆಯು ಇನ್ನೂ ದಾಖಲೆಯ ಮಟ್ಟದಲ್ಲಿ ಬೆಳೆಯುತ್ತಿರುವ ಸ್ಪಷ್ಟ ಎಂದು ಹೇಳಿದ್ದಾರೆ.

Articles You Might Like

Share This Article