ಮದ್ದೂರು,ಫೆ.23- ಮೂವತ್ತು ವರ್ಷ ತುಂಬಿದರೂ ಮದುವೆಯಾಗಿಲ್ಲ ಎಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಕೆ.ಎಂ.ದೊಡ್ಡಿಯ ಅವಿವಾಹಿತರು ಆಯೋಜಿಸಿರುವ ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಪಾದಯಾತ್ರೆಗೆ ನಟರಾದ ಡಾಲಿ ಧನಂಜಯ ಹಾಗೂ ನಾಗಭೂಷಣ ಚಾಲನೆ ನೀಡಿದರು.
ತಾಲ್ಲೂಕಿನ ಕೆ.ಎಂ.ದೊಡ್ಡಿಯ ಶ್ರೀ ವೆಂಕಟೇಶ್ವರ ದೇವಲಾಯದಲ್ಲಿ ಮುಂಜಾನೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಪಾದಯಾತ್ರೆಗಳ ಜೊತೆ ಸ್ವಲ್ಪ ದೂರ ಕಾಲ್ನಡಿಯಲ್ಲಿ ಹೆಚ್ಜೆ ಹಾಕಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಡಾಲಿ ಧನಂಜಯ, 30 ವರ್ಷ ತುಂಬಿದರು ಮದುವೆಯಾಗದೆ ಇರುವಂತಹ ಅವಿವಾಹಿತರನ್ನು ಸಂಘಟಿಸಿ ಅವರಿಗೆ ಆತ್ಮ ಸ್ಥೆ ೈರ್ಯ ತುಂಬುವ ನಿಟ್ಟಿನಲ್ಲಿ ಆಯೋಜಿಸಿರುವ ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಪಾದಯಾತ್ರೆಗೆ ಶುಭವಾಗಲಿ. ಶ್ರೀ ಮಲೈ ಮಹದೇಶ್ವರ ಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಅವರಿಗೆ ಮದುವೆಯಾಗಲಿ ಎಂದು ಹಾರೈಸಿದರು.
7ನೇ ವೇತನ ಆಯೋಗ ಮಧ್ಯಂತರ ವರದಿ ಅನುಷ್ಠಾನ
ಒಂದು ಗಂಡಿಗೆ ಒಂದು ಹೆಣ್ಣು ಇದ್ದೆ ಇರುತ್ತಾರೆ ಎಂದು ಹಿಂದಿನ ಕಾಲದ ಹಿರಿಯರು ಹೇಳುತ್ತಾರೆ. ಆದರೆ, ಇಂದು ಎಷ್ಟೋ ಯುವಕರಿಗೆ ಹೆಣ್ಣು ಸಿಗದೆ ಪರದಾಡುತ್ತಿದ್ದಾರೆ. 30 ವರ್ಷ ವಯಸ್ಸು ದಾಟಿದರು ಮದುವೆ ಆಗಲಿಲ್ಲ ಎಂಬ ಕೊರಗಿನಿಂದ ಬ್ರಹ್ಮಚಾರಿಗಳು ನಮಗೊಂದು ವಧು ಕರುಣಿಸಲಿ ಎಂದು ಮಲೈ ಮಹದೇಶ್ವರ ದೇವರಿಗೆ ಹರಕೆ ಹೊತ್ತು ನೋವಿನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಪಾದಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಕರ್ನಾಟಕವಲ್ಲದೆ ನೆರೆಯ ಆಂಧ್ರಪ್ರದೇಶ , ತಮಿಳುನಾಡಿನ ಇಬ್ಬರೂ ಅವಿವಾಹಿತರು ಪಾದಯಾತ್ರೆಗೆ ಬಂದಿದ್ದಾರೆ.
ಪಾದಯಾತ್ರೆಯಲ್ಲಿರುವ ಬಹುತೇಕ ಯುವಕರು ರೈತರಾಗಿದ್ದು, ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಅಂತಾ ನೋವಿನಲ್ಲಿ ಮಾದಪ್ಪನ ಮೊರೆ ಹೋಗಿದ್ದಾರೆ. ಮಲೈ ಮಹದೇಶ್ವರ ಸ್ವಾಮಿ ಮುಂದಿನ ದಿನಗಳಲ್ಲಿ ಹೆಣ್ಣು ಹೆತ್ತ ತಂದೆ-ತಾಯಿಯರು ರೈತರು, ಬಡ ಯುವಕರಿಗೆ ಹೆಣ್ಣು ಕೊಡುವ ಬುದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂದರು.
ಕೆ.ಎಂ.ದೊಡ್ಡಿ ಸುತ್ತಮುತ್ತಲಿನ ಅವಿವಾಹಿತರ ತಂಡ ಆಯೋಜಿಸಿರುವ ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ಕಡ್ಡಾಯವಾಗಿ ಮೂರು ಷರತ್ತುಗಳನ್ನು ಹಾಕಿದ್ದಾರೆ. ಮೊದಲನೆಯದಾಗಿ ಕಡ್ಡಾಯವಾಗಿ 30 ವರ್ಷ ತುಂಬಿರಬೇಕು, ಎರಡನೆಯದಾಗಿ ವಿವಾಹಿತರಿಗೆ ಕಡ್ಡಾಯವಾಗಿ ಪಾದಯಾತ್ರೆಗೆ ಅವಕಾಶವಿರುವುದಿಲ್ಲ, ಮೂರನೆದಾಯಾಗಿ ನಿಶ್ಚಿತಾರ್ಥವಾದವರು ಸಹ ಪಾದಯಾತ್ರೆಗೆ ಬರುವಂತಿಲ್ಲ ಎಂದು ತಿಳಿಸಿದ್ದಾರೆ.
ಹಿಂಡೆನ್‍ಬರ್ಗ್ ವರದಿಯಿಂದ ಅದಾನಿ ಸಮೂಹದಲ್ಲಿ ಮೂಡಲಿದೆಯಂತೆ ಆರ್ಥಿಕ ಶಿಸ್ತು
ಇದೇ ಸಂದರ್ಭದಲ್ಲಿ ಅಯೋಜಕರಾದ ಶಿವಪ್ರಸಾದ್ ಮಾತನಾಡಿ, ಅವಿವಾಹಿತರನ್ನು ಸಂಘಟಿಸಿ ಅವರಿಗೆ ಆತ್ಮಸೈರ್ಯ ತುಂಬುವ ನಿಟ್ಟಿನಲ್ಲಿ ಈ ಪಾದಯಾತ್ರಯನ್ನು ಹಮ್ಮಿಕೊಂಡಿಡದ್ದು, ಕೆ.ಎಂ.ದೊಡ್ಡಿ,ಮಳವಳ್ಳಿ, ಕೊಳ್ಳೇಗಾಲ, ಹನೂರು ಮಾರ್ಗವಾಗಿ ಮಲೇ ಮಹದೇಶ್ವರ ಬೆಟ್ಟವನ್ನು ತಲುಪಲಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ , ತಿಂಡಿ, ಪಾನೀಯಗಳ್ನು ನೀಡಿ, ರಾತ್ರಿ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
unmarried, people, mahadeshwara betta,