ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಅಪ್ರಾಪ್ತನಿಗೆ ಶಿಕ್ಷೆ

Social Share

ಕೋಟಾ,ಜ.19- ನೆರೆಮನೆಯಲ್ಲಿ ಸಂಬಂಧಿ ಬಾಲಕನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಅಪರಾಧಕ್ಕಾಗಿ ಅಪ್ರಾಪ್ತನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು, ನೇರವಾಗಿ ಜೈಲಿಗೆ ಕಳುಹಿಸುವ ಬದಲು 20 ವರ್ಷ ತುಂಬುವರೆಗೂ ಕಲ್ಯಾಣ ಕೇಂದ್ರದಲ್ಲಿರುವಂತೆ ಆದೇಶಿಸಿದೆ.

ಶಿಕ್ಷೆಗೆ ಒಳಗಾದ ಅಪರಾಧಿಗೆ ಪ್ರಸ್ತುತ 18 ವರ್ಷಗಳಾಗಿವೆ. ಆತನಿಗೆ 20 ವರ್ಷ ತುಂಬುವವರೆಗೂ ಬಾಲಾಪರಾಧಿಗಳನ್ನು ಇರಿಸುವ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಶಿಕ್ಷೆಯ ಜೊತೆಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಇನ್ನೂ ಆರು ತಿಂಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ೀರೇಂದ್ರ ಚೌಧರಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಘಟನೆ ನಡೆದ 2021ರ ಸೆಪ್ಟೆಂಬರ್ ವೇಳೆಗೆ ಅಪರಾಧಿಗೆ 16 ವರ್ಷ ಮತ್ತು ಒಂಬತ್ತು ತಿಂಗಳ ವಯಸ್ಸಾಗಿತ್ತು. ಬಾಲಾಪರಾ ನ್ಯಾಯ ಮಂಡಳಿ ಆರೋಪಿಯನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿತ್ತು.

ಆದರು ನ್ಯಾಯಾಲಯ ಆರೋಪಿಗೆ 21 ವರ್ಷ ವಯಸ್ಸಾಗುವವರೆಗೆ ಸುರಕ್ಷಿತ ಸ್ಥಳದಲ್ಲಿ ಇರಿಸುವಂತೆ ನಿರ್ದೇಶಿಸಿದೆ. ಆತನ ಶೈಕ್ಷಣಿಕ, ಬೌದ್ಧಿಕ ಮತ್ತು ನಡವಳಿಕೆಯ ಬೆಳವಣಿಗೆಗಾಗಿ ಸೂಕ್ತ ಕೌನ್ಸೆಲಿಂಗ್ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

ವ್ಯಾನ್‍ಗೆ ಡಿಕ್ಕಿ ಹೊಡೆದ ಟ್ರಕ್, ಒಂಬತ್ತು ಮಂದಿ ಸಾವು

ರಾಜಸ್ಥಾನದ ಕೋಟಾ ಜಿಲ್ಲೆಯ ರಾಮಗಂಜಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ಥನ ಚಿಕ್ಕಪ್ಪ 2021ರ ಸೆಪ್ಟೆಂಬರ್ 14 ರಂದು ಪೊಲೀಸರಿಗೆ ದೂರು ನೀಡಿದ್ದರು.

ನೆರೆಮನೆಯಲ್ಲಿ ವಾಸವಿದ್ದ ಆರೋಪಿ ತನ್ನ ಸೋದರಳಿಯನಿಗೆ ಗಾಳಿಪಟ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶದ ಕೊಳವೊಂದರ ಬಳಿಯ ಕರೆದೊಯ್ದಿದ್ದಾನೆ. ಅಲ್ಲಿ ಅನೈಸರ್ಗಿಕ ಕ್ರಿಯೆ ಮಾಡಿದ್ದಾನೆ. ಮನೆಗೆ ಹಿಂದಿರುಗಿದ ಸಂತ್ರಸ್ಥ ಬಾಲ ತನ್ನ ಕುಟುಂಬ ಸದಸ್ಯರಿಗೆ ಘಟನೆಯನ್ನು ವಿವರಿಸಿದ ಬಳಿಕ ದೂರು ದಾಖಲಿಸಲಾಗಿತ್ತು.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

2021ರ ಡಿಸೆಂಬರ್ 17 ರಂದು ಜುವೆನೈಲ್ ಜಸ್ಟಿಸ್ ಬೋರ್ಡ್‍ನ ಪ್ರಿನ್ಸಿಪಾಲ್ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ ಶೀಟ್ ಸಲ್ಲಿಸಲಾಯಿತು. ಬಾಲಾಪರಾಧಿ ನ್ಯಾಯ ಮಂಡಳಿಯು ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿತ್ತು. ಅದರಂತೆ ಪ್ರಕರಣವನ್ನು ಪೋಕ್ಸೊ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.

ನ್ಯೂಜಿಲೆಂಡ್ ಪ್ರಧಾನಿ ಸ್ಥಾನಕ್ಕೆ ಜಸಿಂದಾ ಆರ್ಡೆರ್ನ್ ರಾಜಿನಾಮೆ

ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾೀಧಿಶ ಮೊಹಮ್ಮದ್ ಆರಿಫ್ ಅವರು ಆರೋಪಿಯನ್ನು ದೋಷಿ ಎಂದು ಘೋಷಿಸಿದರು. ಲೈಂಗಿಕ ಕಿರುಕುಳದ ಅಪರಾಧಕ್ಕಾಗಿ ಶಿಕ್ಷೆಯನ್ನು ಪ್ರಕಟಿಸಿದರು. ಆದರೆ ಅಪರಾಧಿಯನ್ನು ನೇರವಾಗಿ ಜೈಲಿಗೆ ಕಳುಹಿಸುವ ಬದಲು ಆತನಿಗೆ 21 ವರ್ಷ ತುಂಬುವವರೆಗೂ ಕಲ್ಯಾಣ ಕೇಂದ್ರದಲ್ಲಿರಿಸುವಂತೆ ಸೂಚಿಸಿದ್ದಾರೆ. ಬಳಿಕ ಆತನನ್ನು ಸಾಮಾನ್ಯ ಜೈಲಿಗೆ ಕಳುಹಿಸುವ ಶಿಫಾರಸ್ಸು ಮಾಡಲಾಗಿದೆ.

unnatural, sex, Man, gets, jail, Rajasthan,

Articles You Might Like

Share This Article