ನವದೆಹಲಿ,ಜು.20- ರಾಹುಲ್‍ಗಾಂಧಿ ಸಂಸತ್‍ನಲ್ಲಿ ಪ್ರಶ್ನೆಯನ್ನೂ ಕೇಳುವುದಿಲ್ಲ. ಕಲಾಪವನ್ನು ಅಗೌರವಿಸಿ ಚರ್ಚೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಆಕ್ಷೇಪಿಸಿದ್ದಾರೆ.
ರಾಹುಲ್‍ಗಾಂಧಿ ಅವರ ಹಾಜರಾತಿ ಸಂಸತ್‍ನಲ್ಲಿ ಶೇ.40ಕ್ಕಿಂತಲೂ ಕಡಿಮೆ ಇದೆ. ರಾಜಕೀಯವಾಗಿ ಅವರ ಉತ್ಪಾದಕತೆ ಕುಸಿತವಾಗಿದೆ. ಹೀಗಾಗಿ ಅವರು ಸಂಸತ್‍ನ ಕಲಾಪದಲ್ಲಿ ಕುಳಿತು ಚರ್ಚೆಯಲ್ಲಿ ಭಾಗವಹಿಸಲು ತಯಾರಿಲ್ಲ ಎಂದು ಆರೋಪಿಸಿದ್ದಾರೆ.
ಸಂಸತ್ ಕಲಾಪದ ದಿನ ಫಲಪ್ರದ ಚರ್ಚೆಗಳಿಗೆ ರಾಹುಲ್‍ಗಾಂಧಿ ಅಡ್ಡಿಪಡಿಸುತ್ತಿದ್ದಾರೆ. ಕಲಾಪದ ಕಾರ್ಯವಿಧಾನಗಳಿಗೂ ಅಗೌರವ ತೋರಿಸುತ್ತಾರೆ. ಅವರ ರಾಜಕೀಯ ಇತಿಹಾಸದ ಜೀವನದುದ್ದಕ್ಕೂ ಸಂಸದೀಯ ವ್ಯವಹಾರಗಳಲ್ಲಿ ನಾಕಾರಾತ್ಮ ಅಂಶಗಳೇ ಕಾಣುತ್ತಿವೆ ಎಂದು ಆಕ್ಷೇಪಿಸಿದ್ದಾರೆ.