ಫಿರೋಜಾಬಾದ್,ಆ.11- ಪೊಲೀಸ್ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಕಾನ್ಸ್‍ಟೇಬಲ್ ವೊಬ್ಬರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ಲಾಗಿದೆ. ಫಿರೋಜಾಬಾದ್‍ನ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನ ಮೆಸ್‍ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ರೊಟ್ಟಿ ದಾಲ್ ಮತ್ತು ಚಟ್ನಿ ಇರುವ ಆಹಾರದ ಪ್ಲೇಟ್‍ನ್ನು ಹಿಡಿದುಕೊಂಡು ಪೊಲೀಸ್ ಕಾನ್ಸ್‍ಟೇಬಲ್ ಸ್ಟೆಬಲ್ ಮನೋಜ್‍ಕುಮಾರ್ ರಸ್ತೆಗೆ ಬಂದಿದ್ದಾರೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮುಂದೆ ಹೋಗಿ ನಾಯಿಯೂ ತಿನ್ನದಂತಹ ಕೆಟ್ಟ ಆಹಾರವನ್ನು ನಮಗೆ ನೀಡಲಾಗುತ್ತಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸರ ಪೌಷ್ಟಿಕ ಆಹಾರಕ್ಕಾಗಿ ಹೆಚ್ಚುವರಿಯಾಗಿ 1875 ರೂ.ಗಳನ್ನು ನೀಡುವುದಾಗಿ ಹೇಳಿದ್ದಾರೆ. ಆದರೆ ಈ ರೊಟ್ಟಿ ನೋಡಿ ಎಂದು ಪ್ರಯಾಣಿಕರಿಗೆ ತೋರಿಸಿದ್ದಾರೆ.
ಹೆದ್ದಾರಿಯ ಮಧ್ಯದಲ್ಲಿರುವ ಡಿವೈಡರ್ ಮೇಲೆ ಕುಳಿತು ಧರಣಿ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಾನ್ಸ್‍ಟೇಬಲ್ ಹೆಡ್ ಕ್ವಾಟ್ರಸ್ ಮುಂದೆ ಆಹಾರದ ತಟ್ಟೆಯೊಂದಿಗೆ ನಿಂತು ಅತ್ತು ರಂಪಾಟ ಮಾಡಿದ್ದಾರೆ. ಈ ವಿಡಿಯೋ ಯೋಗಿ ಆದಿತ್ಯನಾಥ್ ಅವರಿಗೆ ತಲುಪಿಸಿ ನಮ್ಮ ಗೋಳು ಕೇಳುವವರು ಇಲ್ಲ. ಎಡಿಜಿಪಿ ಅವರಿಗೆ ದೂರು ನೀಡಲು ಕರೆ ಮಾಡಿದ್ದೆ. ಆದರೆ ಅವರು ನನ್ನ ಫೋನ್ ತೆಗೆಯುತ್ತಿಲ್ಲ ಎಂದು ಕಾನ್ಸ್‍ಟೇಬಲ್ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಇನ್‍ಸ್ಪೆಕ್ಟರ್ ಒಬ್ಬರು ಕಾನ್ಸ್‍ಟೇಬಲ್ ಪಕ್ಕದಲ್ಲೇ ನಿಂತು ಗಮನಿಸುತ್ತಿದ್ದಾರೆ. ಮನೋಜ್‍ಕುಮಾರ್‍ನ ಮನವೊಲಿಸಿ ಕರೆದೊಯ್ಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಘಟನೆಯನ್ನು ಗಮನಿಸಿರು ವುದಾಗಿ ಪೊಲೀಸ್ ಮುಖ್ಯ ಅಧಿಕಾರಿಗಳು ಆಶೀಶ್ ತಿವಾರಿ ತಿಳಿಸಿದ್ದಾರೆ. ಘಟನೆ ನಡೆದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನ ವೃತ್ತಾಧಿಕಾರಿ ಅಭಿಷೇಕ ಶ್ರೀವಾತ್ಸವ್ ಅವರಿಂದ ತನಿಖೆಗೆ ಆದೇಶಿಸಲಾಗಿದೆ.
ಕಳಪೆ ಆಹಾರದ ಕುರಿತ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದ ಅವರು ಹೇಳಿದ್ದಾರೆ. ಆದರೆ ಈ ನಡುವೆ ವಿವಾದಿತ ಪೊಲೀಸ್ ಕಾನ್ಸ್‍ಟೇಬಲ್ ವಿರುದ್ಧ ಆಶೀಶ್ ತಿವಾರಿ, ಅನಧಿಕೃತ ಗೈರುಹಾಜರಿ, ಅವಿಧೇಯತೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಿದ್ದು, ಎಲ್ಲವೂ ವಿಚಾರಣೆಗೆ ಬಾಕಿ ಉಳಿದಿವೆ ಎಂದು ಹೇಳಿದ್ದಾರೆ.