ಔಟ್‍ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್‍ಸ್ಟೆಬಲ್ ಅಮಾನತು

Social Share

ಬಲ್ಲಿಯಾ (ಉತ್ತರ ಪ್ರದೇಶ) , ಡಿ 26- ರಾಜ್ಯದ ಗಡಿಯಲ್ಲಿರುವ ಜನೇಶ್ವರ ಮಿಶ್ರಾ ಸೇತುವೆಯಲ್ಲಿ ಸರಕು ಸಾಗಣೆ ವಾಹನ ಚಾಲಕರಿಂದ 50 ರೂ ಲಂಚ ಪಡೆಯುತ್ತಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.

ಉತ್ತರ ಪ್ರದೇಶ-ಬಿಹಾರ ಗಡಿಯ ಬಳಿ ಮಾಮೂಲಿ ವಸೂಲಿ ದಂಧೆ ನಡೆಯುತ್ತಿರುವ ಬಗ್ಗೆ ದೂರು ಬರುತ್ತಿತ್ತು ಪ್ರಸ್ತುತ ಕೆಲವರು 50 ರೂ ಪಡೆಯುತ್ತಿರುವುದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಪ್‍ಲೋಡ್ ಮಾಡಲಾಗಿತ್ತು.

ಇದು ಪೊಲೀಸರ ಕಾರ್ಯವೈಕರಿ ಬಗ್ಗೆ ಟೀಕೆಗಳು ಹೆಚ್ಚಾದಾಗ ಪೊಲೀಸ್ ವರಿಷ್ಠಾಧಿಕಾರಿ ಆರ್‍ಕೆ ನಯ್ಯರ್ ಅವರು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಕಾನ್‍ಸ್ಟೆಬಲ್ ಆಯುಶ್ ಸಿಂಗ್‍ನನ್ನು ಅಮಾನತುಗೊಳಿಸಿದ್ದಾರೆ.

ವಿಶ್ವ ಟೆಸ್ಟ್ ಫೈನಲ್ ಭಾರತ ಸ್ಥಾನ ಸುಭದ್ರ

ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ ಡಿಯಾರ್ ಪೊಲೀಸ್ ಔಟ್‍ಪೊಸ್ಟ್‍ನಲ್ಲಿ ಅಕ್ರಮ ಕುರಿತು ಈಗ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಟ್ವಿಟರ್‍ನಲ್ಲಿ ಪ್ರಕಟಿಸಿದ್ದಾರೆ. ಕೆಲವು ದಿನಗಳ ಹಳೆಯದು ವೀಡಿಯೊ ಎಂದು ಕಾನ್‍ಸ್ಟೆಬಲ್ ಆಯುಷ್ ಸಿಂಗ್ ಹೇಳಿದ್ದಾರೆ.

UP, cop, caught, video, demanding, bribes, suspended,

Articles You Might Like

Share This Article