ಎಟಿಎಂನ ಹಣ ಲಪಟಾಯಿಸುತ್ತಿದ್ದ ಕಳ್ಳನ ಬಂಧನ

Social Share

ತಿರುವನಂತಪುರಂ,ಆ.27- ಎಟಿಎಂ ಯಂತ್ರದ ಹಣ ವಿತರಣೆ ಸ್ಥಳದಲ್ಲಿ ಸಣ್ಣದಾದ ಪ್ಲಾಸ್ಟಿಕ್ ಟೇಪ್ ರೂಪದ ಸ್ಕೇಲ್‍ನ್ನು ಅಳವಡಿಸಿ ಗ್ರಾಹಕರ ಹಣ ಲಪಟಾಯಿಸುತ್ತಿದ್ದ ಉತ್ತಪ್ರದೇಶದ ಮೂಲದ ಖತರ್‍ನಾಕ್ ಕಳ್ಳನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಎಂ.ಮುಬಾರಕ್ ಬಂಧಿತ ಆರೋಪಿ. ಈತ ಕಳೆದ 6 ದಿನಗಳಲ್ಲಿ ಕೊಚ್ಚಿಯಲ್ಲಿ 11 ಎಟಿಎಂ ಬಳಕೆದಾರರಿಂದ ಹಣವನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಎಟಿಎಂ ಬಳಕೆದಾರರನ್ನು ವಂಚಿಸಿ 1.50 ಲಕ್ಷಕ್ಕೂ ಹೆಚ್ಚು ಹಣಲಪಟಾಯಿಸಿರುವ ಈತ ಎಟಿಎಂನ ಹಣ ವಿತರಣಾ ಸ್ಥಳದಲ್ಲಿ ಸಣ್ಣ ಪ್ಲಾಸ್ಟಿಕ್ ಟೇಪ್-ಕಮ್-ಸ್ಕೇಲ್‍ನ್ನು ಅಳವಡಿಸಿ ಜನರಿಗಾಗಿ ಕಾಯುತ್ತಿದ್ದ.

ಟೇಪ್ ಅಳವಡಿಸಿದ್ದರಿಂದ ಹಣ ಡ್ರಾ ಮಾಡಲು ಬರುವ ವ್ಯಕ್ತಿಗಳು ಎಲ್ಲಾ ವಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ತಕ್ಷಣವೇ ಹಣ ಹೊರಗೆ ಬರಲು ವಿಳಂವಾಗುತ್ತಿತ್ತು. ತಾಂತ್ರಿಕ ದೋಷದಿಂದ ಹಣದ ಬರುವತ್ತಿಲ್ಲವೆಂದು ಎಟಿಎಂ ಕೌಂಟರ್‍ನಿಂದ ಜನರು ಹೊರಟು ಹೋದ ತಕ್ಷಣ ಅಲ್ಲಿ ಕಾದು ನಿಂತಿರುತ್ತಿದ್ದ ಕಳ್ಳ ತಾನು ಎಟಿಎಂಗೆ ಅಳವಡಿಸಿದ್ದ ಟೇಪ್‍ನ್ನು ತೆಗೆದು ಹಣ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಕಲಮಸ್ಸೆರಿಯ ಎಟಿಎಂ ಒಂದರಲ್ಲಿ ಈ ತಂತ್ರ ಬಳಸಿ ವ್ಯಕ್ತಿಯೊಬ್ಬನಿಂದ 25,000 ದೋಚಿದ್ದಾನೆ. ಕೆಲವು ಎಟಿಎಂಗಳಲ್ಲಿ ಮಾಸ್ಕ್ ಧರಿಸದೆ ಈ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಕಳ್ಳನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಡಪಲ್ಲಿಯ ಎಟಿಎಂವೊದರಲ್ಲಿ ಇದೇ ರೀತಿ ಹಣ ಲಪಾಟಿಸಯಲು ಹೊಂಚು ಹಾಕಿದ್ದ. ಅಲಲಿನ ಎಂಟಿಎಂ ಆಸುಪಾಸು ನಾವು ಮೊದಲೇ ಪೊಲೀಸರನ್ನು ಕಾವಲು ಬಿಟ್ಟಿದ್ದೆವು. ಇದರಿಂದ ಆರೋಪಿಯನ್ನು ಬಂಧಿಸಲು ಸುಲಭವಾಯಿತು
ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಲರಿವಟ್ಟಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 390ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Articles You Might Like

Share This Article