ನವದೆಹಲಿ, ಜ.13- ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ 50 ಮಹಿಳೆಯರು ಸೇರಿದಂತೆ 125 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಉತ್ತರ ಪ್ರದೇಶ ಚುನಾವಣೆಗಳಿಗಾಗಿ ನಾವು ಜನತೆಯ ಸಮಸ್ಯೆಗಳು, ಮಹಿಳೆಯರು ಮತ್ತು ಅಭಿವೃದ್ಧಿ ವಿಷಯಗಳನ್ನು ಪ್ರಧಾನವಾಗಿ ಚರ್ಚಿಸುತ್ತೇವೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಶೇ.40ರಷ್ಟು ಮಹಿಳೆಯರು ಮತ್ತು ಶೇ.40ರಷ್ಟು ಯುವಕರನ್ನು ಕಣಕ್ಕಿಳಿಸುವ ಮೂಲಕ ನಾವು ಉತ್ತರ ಪ್ರದೇಶದಲ್ಲಿ ಹೊಸ ಮಾದರಿಯ ರಾಜಕೀಯವನ್ನು ಆರಂಭಿಸುವ ಭರವಸೆ ಹೊಂದಿದ್ದೇವೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಉತ್ತರ ಪ್ರದೇಶದ ಉಜ್ವಲ ಭವಿಷ್ಯಕ್ಕಾಗಿ ನಾವು ಸಕಾರಾತ್ಮಕ ಪ್ರಚಾರಕ್ಕಿಳಿಯುವುದಿಲ್ಲ. ಸಕಾರಾತ್ಮಕವಾಗಿ ಪ್ರಚಾರ ಮಾಡುತ್ತೇವೆ ಎಂದು ಅವರು ನುಡಿದಿದ್ದಾರೆ.
ಉತ್ತರ ಪ್ರದೇಶದಲ್ಲಿ ನ್ಯಾಯಕ್ಕಾಗಿ ಯಾರು ಹೋರಾಡಿದ್ದಾರೋ ಮತ್ತು ಹೋರಾಡುವ ಸಾಮಥ್ರ್ಯ ಹೊಂದಿರುವರೋ ಅಂಥವರನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ಪ್ರಿಯಾಂಕಾ ಪ್ರತಿಪಾದಿಸಿದ್ದಾರೆ.
