ಇ-ಪ್ರಾಸಿಕ್ಯೂಷನ್ ಪೋರ್ಟಲ್ ಬಳಕೆಯಲ್ಲಿ ಉತ್ತರ ಪ್ರದೇಶ ಮುಂಚೂಣಿ

Social Share

ಲಕ್ನೋ,ಮಾ.5- ಡಿಜಿಟಲ್ ಇಂಡಿಯಾದ ಮತ್ತೊಂದು ಮೈಲಿಗಲ್ಲಿನ ಪ್ರಯೋಜನ ಪಡೆದಿರುವ ಉತ್ತರ ಪ್ರದೇಶದ ಸರ್ಕಾರ -ಪ್ರಾಸಿಕ್ಯೂಷನ್ ಮೂಲಕ ನ್ಯಾಯದಾನದ ವೇಗವನ್ನು ಹೆಚ್ಚಿಸಿದ್ದು, ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ಇ-ಪ್ರಾಸಿಕ್ಯೂಷನ್ ಪೋರ್ಟಲ್ ಮೂಲಕ 2022 ರಲ್ಲಿ ಸತತ ಎರಡನೇ ವರ್ಷದಲ್ಲೂ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಹಾಗೂ ಹೆಚ್ಚು ಪ್ರಕರಣಗಳನ್ನು ನೋಂದಾಯಿಸಿರುವ ಯಶಕ್ಕೆ ಉತ್ತರ ಪ್ರದೇಶ ಸರ್ಕಾರ ಪಾತ್ರವಾಗಿದೆ.

ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿನ ಈ ಸುಧಾರಣೆ, ಹೊಸ ಶಕೆಗೆ ನಾಂದಿಯಾಡಿದೆ. ಇ-ಪ್ರಾಸಿಕ್ಯೂಷನ್ ಪೋರ್ಟಲ್ ಅನ್ನು ಬಳಸಿಕೊಂಡು, ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವ ದಿನದ ಬಗ್ಗೆ ಸಾಕ್ಷಿಗಳಿಗೆ ತಿಳಿಸಲಾಗುತ್ತದೆ.

ಯುದ್ಧಕ್ಕೆ ಹೊರಟ ಸಾಮಂತರಿಗೆ ದಂಡನಾಯಕನ ಕೊರತೆ

ಸರ್ಕಾರಿ ವಕೀಲರು ಮತ್ತು ಸಂಬಂಧಪಟ್ಟ ಇತರರಿಗೆ ಸಂಬಂಧಿಸಿದ ಮಾಹಿತಿಯನ್ನು ಮುಂಚಿತವಾಗಿ ಒದಗಿಸಲಾಗುತ್ತದೆ, ಪ್ರಾಸಿಕ್ಯೂಷನ್ ದೃಢವಾದ ವಾದಕ್ಕೆ ಸಹಾಯ ಮಾಡಲಾಗುತ್ತಿದೆ. ಹೀಗಾಗಿ ಪ್ರಕರಣಗಳ ತ್ವರಿತ ವಿಲೇವಾರಿ ಮೇಲೆ ನಿಗಾ ಇಡಲಾಗಿದೆ.

ಪೋರ್ಟಲ್, ತನ್ನ ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ಕೇಂದ್ರದಿಂದ ನಿರ್ವಹಿಸಲ್ಪಡುತ್ತಿದ್ದು, ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ಐಸಿಜೆಎಸ್) ಅಡಿಯಲ್ಲಿ ಪೋಲೀಸ್ ಇಲಾಖೆ ಮತ್ತು ಪ್ರಾಸಿಕ್ಯೂಷನ್ ಡೈರೆಕ್ಟರೇಟ್ ನಡುವಿನ ಸಮನ್ವಯತೆಗೆ ಪ್ರಮುಖ ವೇದಿಕೆಯಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚು ಶಿಕ್ಷೆಗೆ ಗುರಿ ಪಡಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ ಪ್ರಮುಖವಾಗಿದೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಕಾಲಿಕ ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿರುವ ನ್ಯಾಯಾಲಯಗಳು, ಪೊಲೀಸ್, ಜೈಲುಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯಗಳ ನಡುವೆ ಡೇಟಾವನ್ನು ವರ್ಗಾಯಿಸಲು ಇದು ಸಹಾಯಕವಾಗಿದೆ. ಫೆಬ್ರವರಿ ವರೆಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 1,11,86,030 ಪ್ರಕರಣಗಳು ಪೋರ್ಟಲ್‍ನಲ್ಲಿ ದಾಖಲಾಗಿವೆ, ಮಧ್ಯಪ್ರದೇಶದಲ್ಲಿ 29,31,335 ಪ್ರಕರಣಗಳು, ಬಿಹಾರ 11,89,288 ಪ್ರಕರಣಗಳು, ಗುಜರಾತ್ 5,16,310 ಮತ್ತು ಛತ್ತೀಸ್‍ಗಢದಲ್ಲಿ 4,71,265 ಪ್ರಕರಣಗಳು ದಾಖಲಾಗಿವೆ.

2021 ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ರಾಷ್ಟ್ರೀಯ ಸರಾಸರಿ ಶೇ.26.5 ರಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಶೇಕಡಾ 59.1 ರಷ್ಟಿದೆ. ಅಪರಾಗಳ ದಂಡನೆ ಕ್ರಮೇಣ ಹೆಚ್ಚಾಗುತ್ತಿದೆ.

ಮತ್ತೊಂದು ಪ್ರಕರಣ : ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿನೆ

ಅತ್ಯಾಚಾರ ಕೃತ್ಯದಲ್ಲಿ 2020 ರಲ್ಲಿ 177 ಪ್ರಕರಣಗಳಿಗೆ ಶಿಕ್ಷೆಯಾಗಿದ್ದರೆ, 2022 ರಲ್ಲಿ 671 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಫೋಕ್ಸೋ ಕಾಯ್ದೆಯಡಿ 2020 ರಲ್ಲಿ 535, 2022ರಲ್ಲಿ 2,313 ಪ್ರಕರಣಗಳು ಶಿಕ್ಷೆಯಾಗಿದೆ. ವರದಕ್ಷಿಣೆ ಸಾವು, ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಶಿಕ್ಷೆಯ ಪ್ರಮಾಣ ಕ್ರಮವಾಗಿ ಶೇ.220, ಶೇ.475 ಮತ್ತು ಶೇ.2,075ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 34 ಫೋಕ್ಸೊ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಒಂದು ತಿಂಗಳೊಳಗೆ ಆರೋಪಿಗಳಿಗೆ ಶಿಕ್ಷೆಯಾಗಿದೆ. 2021 ರಲ್ಲಿ ಕೇವಲ ಏಳು, ಅದರ ಹಿಂದಿನ ವರ್ಷ ಐದು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿತ್ತು.

ಪೊಲೀಸರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಇ-ಪ್ರಾಸಿಕ್ಯೂಷನ್ ಪೋರ್ಟಲ್ ಕಾರ್ಯರೂಪಕ್ಕೆ ಬರುತ್ತದೆ. ಪ್ರಕರಣದ ವಿವರಗಳನ್ನು ಅಪ್‍ಲೋಡ್ ಮಾಡಿದ ನಂತರ, ಸಾಕ್ಷಿಗಳಿಗೆ ಸಮನ್ಸ್ ಕಳುಹಿಸುವುದನ್ನು ಆನ್‍ಲೈನ್ ನಲ್ಲಿ ನಿಗಾ ವಹಿಸಲಾಗುತ್ತದೆ ಎಂದು ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ (ಪ್ರಾಸಿಕ್ಯೂಷನ್) ಅಶುತೋಷ್ ಪಾಂಡೆ ಹೇಳಿದ್ದಾರೆ.

ಪೋಲೀಸರು, ವಕೀಲರು, ವಾದಿ, ಪ್ರತಿವಾದಿ, ಸಾಕ್ಷ್ಯಧಾರರೊಂದಿಗೆ ಸಕಾಲದಲ್ಲಿ ಸಮನ್ವಯತೆ ಸಾಧಿಸಿ, ನ್ಯಾಯದಾನವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳ ಮೇಲೆ ಪ್ರಾಸಿಕ್ಯೂಷನ್ ವಿಶೇಷ ಗಮನಹರಿಸಿದೆ, ತ್ವರಿತ ವಿಚಾರಣೆಗೆ ಪೊಲೀಸರು ಮತ್ತು ಅಭಿಯೋಜಕರು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸದಿರು.

ಹಿರಿಯ ವಕೀಲ ರೋಹಿತ್ ಕಾಂತ್, ಉತ್ತರ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ಶಿಕ್ಷೆಯ ಪ್ರಮಾಣ ಗಮನಾರ್ಹವಾಗಿ ಸುಧಾರಿಸಿದೆ. ವಿಚಾರಣೆಯ ಅವಯು ಕಡಿಮೆಯಾಗಿದೆ, ಇದು ನ್ಯಾಯದಾನದ ಬಗ್ಗೆ ಜನರಲ್ಲಿರುವ ಭಾವನೆಯನ್ನು ಬದಲಾವಣೆ ಮಾಡಿದೆ ಎಂದು ಅವರು ಹೇಳಿದರು.

ಮಾ.24ರಿಂದ ಮೆತ್ತೆ ಸಾರಿಗೆ ನೌಕರರ ಮುಷ್ಕರ

ಮಾಫಿಯಾ, ರೌಡಿಸಂ ಸೇರಿದಂತೆ ದುಂಡಾವರ್ತನೆ ಪ್ರಕರಣಗಳಲ್ಲೂ ಶಿಕ್ಷೆಯ ಪ್ರಮಾಣ ಹೆಚ್ಚಾಗಿದೆ. 2022ರ ಮಾರ್ಚ್ ಮತ್ತು ಡಿಸೆಂಬರ್ ನಡುವೆ, 23 ಪ್ರಕರಣಗಳಲ್ಲಿ ಒಟ್ಟು 16 ಮಾಫಿಯಾಗಳಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಅಂಕಿ ಅಂಶಗಳು ಲಭ್ಯ ಇವೆ. ಈ ಪ್ರಕರಣಗಳು ಬಹುತೇಕ ಸುಮಾರು 10 ರಿಂದ 20 ವರ್ಷಗಳಷ್ಟು ಹಳೆಯದಾಗಿದ್ದವು.

ಇ-ಪ್ರಾಸಿಕ್ಯೂಷನ್ ಪೋರ್ಟಲ್ 2021 ಮತ್ತು 2022ರಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದಿದೆ.

Uttar Pradesh, Ranks, First, Disposal, h e-Prosecution, Portal,

Articles You Might Like

Share This Article