ಯುಪಿ-ಮಧ್ಯಪ್ರದೇಶ ನಂತರ ದೆಹಲಿಯಲ್ಲಿ ಬುಲ್ಡೋಜರ್ ಅಬ್ಬರ

Spread the love

ನವದೆಹಲಿ, ಏ.20- ಉತ್ತರ ಪ್ರದೇಶ, ಮದ್ಯ ಪ್ರದೇಶ ನಂತರ ದೆಹಲಿಯಲ್ಲಿ ಬುಲ್ಡೋಜರ್ ಅಬ್ಬರ ಶುರುವಾಗಿದ್ದು, ಜಹಾಂಗೀರ್ಪುರಿಯಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ಕೆಲವು ದಿನಗಳ ನಂತರ, ಉತ್ತರ ದೆಹಲಿ ಮುನ್ಸಿಪಲ್ ಕಾಪೆರ್ರೇಷನ್ (NDMC) ಏಪ್ರಿಲ್ 20 ಮತ್ತು 21 ರಂದು ಪ್ರದೇಶದಲ್ಲಿ ವಿಶೇಷ ಜಂಟಿ ಅತಿಕ್ರಮಣ ತೆರವು ಕ್ರಿಯಾ ಕಾರ್ಯಕ್ರಮವನ್ನು ಘೋಷಿಸಿದೆ.

ಗಲಭೆಯ ಆರೋಪಿಗಳ ಮನೆ ಮತ್ತು ಆಸ್ತಿಗಳನ್ನು ಕೆಡವಲು ಬುಲ್ಡೋಜರ್‍ಗಳ ಬಳಕೆಯು ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಪ್ರಾರಂಭವಾಯಿತು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಗಳ ಅಕ್ರಮ ಆಸ್ತಿಯನ್ನು ಧ್ವಂಸಗೊಳಿಸಿ ಅದನ್ನು ಸ್ಟಾಂಪ್ ಆಗಿ ಪ್ರಚಾರ ಮಾಡಿದ್ದಕ್ಕಾಗಿ ಬುಲ್ಡೋಜರ್ ಬಾಬಾ ಎಂಬ ಹೆಸರು ಗಳಿಸಿದ್ದಾರೆ.

ಶನಿವಾರ ಹನುಮ ಜಯಂತಿಯಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಸಂಭವಿಸಿದ ದಿನಗಳ ನಂತರ ದೆಹಲಿಯ ಮುನ್ಸಿಪಲ್ ಕಾಪೆರ್ರೇಷನ್ ಜಹಾಂಗೀರ್ಪುರಿಯಲ್ಲಿ ಇಂದು ಅತಿಕ್ರಮಣ ತೆರವು ಅಭಿಯಾನವನ್ನು ಆರಂಭಿಸಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾಪೆರ್ರೇಷನ್ ಇಂದಿನಿಂದ ಪ್ರಾರಂಭವಾಗುವ ಎರಡು ದಿನಗಳ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಿಗದಿಪಡಿಸಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿ ಪೊಲೀಸರಿಗೆ ಕನಿಷ್ಠ 400 ಸಿಬ್ಬಂದಿಯನ್ನು ಕೇಳಿದೆ.

ಇಂದು ಬೆಳಗ್ಗೆ ವಿಶೇಷ ಪೊಲೀಸ್ ಕಮಿಷರ್ನ ದೇಪೇಂದ್ರ ಪಾಠಕ್ ಮತ್ತು ಇತರ ಹಿರಿಯ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಮುನ್ನ ಪ್ರದೇಶದ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ, ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ ಮತ್ತು ಇತರರನ್ನು ಒಳಗೊಂಡ ಜಂಟಿ ಅತಿಕ್ರಮಣ ತೆರವು ಕಾರ್ಯಕ್ರಮವನ್ನು ಜಹಾಂಗೀರಪುರಿಯಲ್ಲಿ ನಿಗದಿಪಡಿಸಲಾಗಿದೆ ಎಂದು ಮುನ್ಸಿಪಲ್ ಕಾಪೆರ್ರೇಶನ್ ಪೊಲೀಸರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಜಹಾಂಗೀರ್ಪುರಿಯಲ್ಲಿ ಗಲಭೆಕೋರರ ಅಕ್ರಮ ನಿರ್ಮಾಣಗಳನ್ನು ಗುರುತಿಸಿ ಅವುಗಳನ್ನು ಕೆಡವಲು ಉತ್ತರ ಕಾಪೆರ್ರೇಷನ್ ಮೇಯರ್ಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿಯನ್ನು ನಗರಸಭೆಯ ಆಯುಕ್ತರಿಗೆ ಕಳುಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.