ಬಿಜ್ನೋರ್, (ಯುಪಿ)ಫೆ. 4-ಕೌಟುಂಬಿಕ ಕಲಹದಿಂದ ಬೇಸತ್ತು ಉತ್ತರ ಪ್ರದೇಶದ ಸಹಸ್ಪುರದ ಮೇವಾ ನವಾಡ ರೈಲು ನಿಲ್ದಾಣದ ಬಳಿ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಮಗಳೊಂದಿಗೆ ಗೂಡ್ಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಆಮ್‍ಆದ್ಮಿ ಪಕ್ಷದ ಸದಸ್ಯಯಾಗಿದ್ದ ಸಾಬಾ ಇಕ್ಬಾಲ್ (30) ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಎರಡು ವರ್ಷಗಳ ಹಿಂದೆ ಬೇರೊಬ್ಬ ಪುರುಷನ ಜೊತಮರು ಮದುವೆಯಾಗಿದ್ದಳು.
ಇತ್ತೀಚೆಗೆ ಆರಿಫಾ ರಾಜಕೀಯಲ್ಲಿ ಬೆಳೆಯುತ್ತಿರುವುದನ್ನು ಸಹಿಸದ ಪತಿ ನಿಂದಿಸುತ್ತಿದ್ದ ಇದರಿಂದ ದಾಂಪತ್ಯದಲ್ಲಿ ವಿರಸ ಮೂಡಿತ್ತು. ನಿನ್ನೆ ಜಗಳ ವಿಕೋಪಕ್ಕೆ ತಿರುಗಿ ರಾತ್ರಿ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಮನೆಯಿಂದ ಹೊರಗೆ ಹೋದರು ಎಂದು ಹೇಳಲಾಗಿದೆ.
ಮೋದಿ ಕರ್ನಾಟಕದಲ್ಲೇ ಬೀಡುಬಿಟ್ಟರೂ ಬಿಜೆಪಿ ಗೆಲ್ಲಿಸಲ್ಲಾಗಲ್ಲ : ಸಿದ್ದರಾಮಯ್ಯ
ಮುಂಜಾನೆ ನವಾಡ ರೈಲು ನಿಲ್ದಾಣದ ಬಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಯೋಹರಾ ಪೊಲೀಸ್ ಠಾಣೆಯ ಅಧಿಕಾರಿ ರಾಜೀವ್ ಚೌಧರಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
UP, Woman, Jumps, Train, , Daughter, Both Die,