ಭಾರತೀಯರಿಗೆ ವೀಸಾ ಸುಗಮವಾಗಿಸಲು ಕ್ರಮ : ಅಮೆರಿಕ

Social Share

ವಾಷಿಂಗ್ಟನ್, ಜ. 5-ಭಾರತದಲ್ಲಿ ವೀಸಾ ಸಂದರ್ಶನ ನೇಮಕಾತಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಅಮೆರಿಕ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಂತಹ ದೇಶಗಳಿಂದ ವೀಸಾ ಅರ್ಜಿಗಳ ತಡವಾಗುತ್ತಿರುವುದು ಕುರಿತು ಹೆಚ್ಚುತ್ತಿರುವ ಕಳವಳವನ್ನು ಉದ್ದೇಶಿಸಿ, ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೀಸಾ ಪ್ರಕ್ರಿಯೆಯು ಚೇತರಿಸಿಕೊಳ್ಳುತ್ತಿದೆ ಮತ್ತು ಸಾಮಾನ್ಯ ವೇಗಕ್ಕೆ ತಲುಪುವ ನಿರೀಕ್ಷೆಯಿದೆ ,ದೀರ್ಘಕಾಲ ಕಾಯಬೇಕಾದವರ ಹತಾಶೆಯನ್ನು ಖಂಡಿತವಾಗಿಯೂ ಅರ್ಥಮಾಡಿಕೊಳ್ಳುಲಾಗಿದೆ ಎಂದಿದ್ದಾರೆ.

ಕಳೆದ ನವೆಂಬರ್ 2022 ರ ಹೊತ್ತಿಗೆ, ಪ್ರವಾಸಿ ವೀಸಾ (ಬಿ1/ಬಿ2) ಸಂದರ್ಶನ ಅಪಾಯಿಂಟ್‍ಮೆಂಟ್‍ಗಾಗಿ ಸರಾಸರಿ ವಿಶ್ವಾದ್ಯಂತ ಕಾಯುವ ಸಮಯ ಸುಮಾರು ಎರಡು ತಿಂಗಳುಗಳಷ್ಟಿತ್ತು ಮತ್ತು ಕೆಲವು ಮಾನದಂಡಗಳನ್ನು ಪೂರೈಸುವ ತುರ್ತು ಪ್ರಯಾಣದ ಅಗತ್ಯತೆಗಳನ್ನು ಹೊಂದಿರುವ ಅರ್ಜಿದಾರರು ತುರ್ತು ಅಪಾಯಿಂಟ್‍ಮೆಂಟ್‍ಗೆ ಅರ್ಜಿ ಸಲ್ಲಿಸಬಹುದು, ಸಾಮಾನ್ಯವಾಗಿ ದಿನಗಳಲ್ಲಿ ಲಭ್ಯವಿರುತ್ತದೆ.

ಚೀನಾ ಪ್ರಯಾಣಿರ ನಿರ್ಭಂಧಕ್ಕೆ ಅಪಸ್ವರ

ವೀಸಾ ಪ್ರಕ್ರಿಯೆಯು ಯೋಜಿತಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಮತ್ತು ಮುಂಬರುವ ವರ್ಷದಲ್ಲಿ ಸಗಮವಾಗಲಿದೆ ಎಂದಿದ್ದಾರೆ. ಕಳೆದ 2016 ರಿಂದ ಹೋಲಿಕೆ ಮಾಡಿದರೆ 2022 ರ ಆರ್ಥಿಕ ವರ್ಷದಲ್ಲಿ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಿದೆ ಎಂದು ಅವರು ಹೇಳಿದರು,

ನಿರ್ದಿಷ್ಟವಾಗಿ ಭಾರತದಲ್ಲಿನ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‍ಗಳು ಒಂದೇ ಆರ್ಥಿಕ ವರ್ಷದಲ್ಲಿ ನೀಡಲಾದ ವಿದ್ಯಾರ್ಥಿ ವೀಸಾಗಳ ಸಂಖ್ಯೆಗೆ ತಮ್ಮ ಸಾರ್ವಕಾಲಿಕ ದಾಖಲೆ ಎಂದು ತಿಳಿಸಿದರು

ನಾವು ಸುಮಾರು 1,25,000 ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ. ಕೆಲವು ಅರ್ಜಿದಾರರು ಇನ್ನೂ ವಿಸ್ತೃತ ವೀಸಾ ಕಾಯುವ ಸಮಯವನ್ನು ಎದುರಿಸಬಹುದು ಎಂದು ನಾವು ಗುರುತಿಸುತ್ತೇವೆ ಮತ್ತು ವೀಸಾ ಸಂದರ್ಶನದ ಅಪಾಯಿಂಟ್‍ಮೆಂಟ್ ಕಾಯುವ ಸಮಯವನ್ನು ಸಾಧ್ಯವಾದಷ್ಟು ಬೇಗ ಕಡಿಮೆ ಮಾಡಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಡಮದರು

XBB.1.5 ವೈರಸ್ ಭಯ ಬೇಡ, ಆದರೆ, ಅನಗತ್ಯವಾಗಿ ಮನೆಯಿಂದ ಹೊರಹೋಗಬೇಡಿ

ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಜೊತೆಗೆ ಅಮೆರಿಕಕ್ಕೆ ಕಾನೂನುಬದ್ಧ ಪ್ರಯಾಣವನ್ನು ಸುಗಮಗೊಳಿಸಲು ವಿದೇಶಾಂಗ ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದರು.

US visa, interview, appointment, time, India, delays,

Articles You Might Like

Share This Article