ಜೆಡಿಯು ಪಕ್ಷದಲ್ಲಿ ಮೂಡಿದ ಒಡಕು

Social Share

ಪಾಟ್ನಾ,ಜ.27- ಎನ್‍ಡಿಎ ಮೈತ್ರಿಕೂಟದಿಂದ ಹೊರಬಿದ್ದು ಯುಪಿಎ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರ ರಚಿಸಿರುವ ಜೆಡಿಯುಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾ ಅವರು ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್ ನೀಡಿರುವ ಸೂಚನೆಯನ್ನು ಕಡೆಗಣಿಸಿರುವ ಕುಶ್ವಾ ತನ್ನ ಪಾಲಿನ ಆಸ್ತಿ ನೀಡದ ವಿನಾಃ ಪಕ್ಷ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕುಶ್ವಾ ಅವರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಕೇಳಿ ಬಂದಿರುವ ಬೆನ್ನಲ್ಲೆ ಜೆಡಿಯು ಪಕ್ಷದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಕೂತೂಹಲಕ್ಕೆ ಕಾರಣವಾಗಿದೆ.

ರಾಜೀನಾಮೆ ನೀಡುವಂತೆ ಕೇಳಿರುವ ನಿತೀಶ್ ಅವರಿಗೆ ಚೆನ್ನಾಗಿ ಹೇಳಿದಿರಿ ಭಾಯ್ ಸಾಹೇಬï….! ಅಣ್ಣಂದಿರ ಸಲಹೆಯಂತೆ ಕಿರಿಯ ಸಹೋದರರು ಹೀಗೆಯೇ ಮನೆ ಬಿಟ್ಟು ಹೋಗುತ್ತಿದ್ದರೆ, ಅಣ್ಣಂದಿರೆಲ್ಲ ಕಿರಿಯರನ್ನು ಬಿಸಾಡಿ ಪೂರ್ವಜರ ಆಸ್ತಿಯನ್ನೆಲ್ಲ ಕಿತ್ತುಕೊಳ್ಳುತ್ತಾರೆ. ಸಹೋದರರೇ, ಸಂಪೂರ್ಣ ಆಸ್ತಿಯಲ್ಲಿ ನನ್ನ ಪಾಲನ್ನು ಬಿಟ್ಟು ನಾನು (ಪಕ್ಷದಿಂದ) ಹೇಗೆ ಹೊರಗೆ ಹೋಗಬಹುದು…? ಉಪೇಂದ್ರ ಕುಶ್ವಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಜನರ ನೋವಿನ ಧ್ವನಿಯಾಗಿ 32ನೇ ವರ್ಷಕ್ಕೆ ಕಾಲಿಟ್ಟಿ `ಈ ಸಂಜೆ’

ಉಪೇಂದ್ರ ಕುಶ್ವಾ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಯು ನಾಯಕ ಉಮೇಶ್ ಕುಶ್ವಾ ಅವರು ಪಕ್ಷ ಒಡೆಯಲು ಯತ್ನಿಸುತ್ತಿರುವ ಉಪೇಂದ್ರ ಅವರು ಈ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.

ದಯವಿಟ್ಟು ನನ್ನೊಂದಿಗೆ ಮಾತನಾಡಲು ಉಪೇಂದ್ರ ಕುಶ್ವಾಹ ಅವರನ್ನು ಕೇಳಿ, ಅವರು ಕೂಡ ಮೊದಲೇ ಪಕ್ಷವನ್ನು ತೊರೆದರು, ಅವರಿಗೆ ಏನು ಬೇಕು ಎಂದು ನನಗೆ ತಿಳಿದಿಲ್ಲ. ನಾನು ಪಾಟ್ನಾದಲ್ಲಿ ಇರಲಿಲ್ಲ ಹಾಗಾಗಿ ನನಗೆ ಅದರ ಬಗ್ಗೆ ತಿಳಿದಿಲ್ಲ. ಅವರು ಪ್ರಸ್ತುತ ಅಸ್ವಸ್ಥರಾಗಿದ್ದಾರೆ, ನಾನು ಅವರನ್ನು ಭೇಟಿ ಮಾಡುತ್ತೇನೆ. ಮತ್ತು ಇದನ್ನು ಚರ್ಚಿಸಿ ಎಂದು ಗಯಾದಲ್ಲಿ ತಮ್ಮ ಸಮಾಧಾನ್ ಯಾತ್ರೆಯಲ್ಲಿ ನಿತೀಶ್ ಕುಮಾರ್ ಹೇಳಿದರು.

Bihar,  CM Nitish Kumar,  Upendra Kushwaha,  quit, JDU,

Articles You Might Like

Share This Article