ವಿದೇಶಿ ದೇಣಿಗೆ ದುರುಪಯೋಗ : ಕೇರಳ ವಿಧಾನಸಭೆಯಲ್ಲಿ ಕೋಲಾಹಲ

Social Share

ತಿರುವನಂತಪುರಂ,ಫೆ.28-ವಿದೇಶಿ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡ ಲೈಫ್ ಮಿಷನ್ ಹಗರಣ ಇಂದು ವಿಧಾನಸಭೆಯಲ್ಲಿ ಚರ್ಚೆಯಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಕೋಲಾಹಲದಿಂದ ಕಲಾಪ ಮುಂದೂಡಿಕೆಯಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯೇಂದ್ರನ್ ವಿರುದ್ಧ ಪ್ರತಿಪಕ್ಷ ಯುಡಿಎಫ್ ಶಾಸಕರು ಆರೋಪ ಮಾಡಿ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಎಡಪಕ್ಷಗಳ ನೇತೃತ್ವದ ಸರ್ಕಾರದ ಶಾಸಕರು ಪ್ರತಿ ಘೋಷಣೆಗಳನ್ನು ಕೂಗಿದ್ದರಿಂದ ಕಲಾಪದಲ್ಲಿ ಗದ್ದಲ-ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆ ಕೈಬಿಡಲು ಸರ್ಕಾರಿ ನೌಕರರಿಗೆ ಸಿಎಂ ಮನವಿ

ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಸಂದರ್ಭದಲ್ಲಿ ಸ್ಪೀಕರ್ ಎ.ಎನ್.ಶಂಶೀರ್ ಕಲಾಪವನ್ನು ಮುಂದೂಡಿದ್ದಾರೆ.
ಆರಂಭದಲ್ಲಿ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಂಜಳಾಂದನ್ ಜಾರಿ ನಿರ್ದೇಶನಾಲಯದ ವರದಿಯನ್ನು ಓದಿದ್ದಾರೆ. ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಮುಖ್ಯಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಶಿವಶಂಕರ್ ಹೇಳಿಕೆಯ ಪ್ರಕಾರ ಹಣ ದುರುಪಯೋಗ ಮತ್ತು ಗುತ್ತಿಗೆದಾರರ ನೇಮಕದಲ್ಲಿ ಲೋಪದೋಷಗಳು ಮುಖ್ಯಮಂತ್ರಿಯವರ ಗಮನದಲ್ಲಿತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಒಂದು ವೇಳೆ ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಮುಖ್ಯಮಂತ್ರಿಗಳು ಇಡಿ ವರದಿಯನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ ಎಂದು ಕಾಂಗ್ರೆಸ್ ಶಾಸಕರು ಪ್ರಶ್ನಿಸಿದರು.

ಚಂದ್ರಯಾನ-3ರ ಮಿಷನ್‍ನಲ್ಲಿ ಇಸ್ರೋದ ಮತ್ತೊಂದು ಸಾಧನೆ

ಸರ್ಕಾರಕ್ಕೆ ಕಾಂಗ್ರೆಸಿಗರ ಕಾನೂನಿನ ಸಲಹೆಗಳ ಅನಗತ್ಯ. ಸರ್ಕಾರ ಯಾವುದೇ ತಪ್ಪು ಮಾಡಿಲ್ಲ ಎಂದು ಪಿಣರಾಯಿ ವಿಜಯೇಂದ್ರನ್ ನೇತೃತ್ವದ ಆಡಳಿತಾರೂಢ ಪಕ್ಷದ ಬೆಂಬಲಿಗರು ಸಮರ್ಥನೆಗಿಳಿದರು. ಇದರಿಂದ ವಾಗ್ವಾದಗಳು ತೀವ್ರಗೊಂಡವು.

2020ರಲ್ಲಿ ಕೊಚ್ಚಿಯ ನ್ಯಾಯಾಲಯದ ವಿದೇಶೀ ದೇಣಿಗೆ ದುರುಪಯೋಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಕಾಂಗ್ರೆಸ್ ಶಾಸಕ ಅನಿಲ್ ಅಕಾರ್ ದೂರು ನೀಡಿದ್ದು, ವಿದೇಶಿ ದೇಣಿಗೆಯಲ್ಲಿ ಮನೆ ನಿರ್ಮಿಸುವ ಯೋಜನೆಗಾಗಿ 20 ಕೋಟಿಗಳನ್ನು ಪಡೆದುಕೊಳ್ಳಲಾಗಿದ್ದು, ಅದು ದುರುಪಯೋಗವಾಗಿದೆ ಎಂದು ಆರೋಪಿಸಲಾಗಿದೆ.

Uproar, Kerala, assembly, Congress, MLA, reads, ED report,

Articles You Might Like

Share This Article