ಐಎಎಸ್ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ..?

Social Share

ನವದೆಹಲಿ, ಫೆ.3- ದೇಶದಲ್ಲಿ ಎದುರಾಗಿರುವ ಐಎಎಸ್ ಅಧಿಕಾರಿಗಳ ಕೊರತೆಯನ್ನು ನಿಗಿಸಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಪರೀಕ್ಷೆ ಬದಲಾಗಿ, ಸಿಎಸ್‍ಇ ಸೇರಿದಂತೆ ಪರ್ಯಾಯ ಪದ್ಧತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಇಲಾಖೆಯಯ ಹೊಣೆಗಾರಿಕೆ ಹೊಂದಿರುವ ಪ್ರಧಾನಿ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್‍ನ ಸದಸ್ಯ ಕೆ.ಸಿ.ವೇಣುಗೋಪಾಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ. ಸರ್ಕಾರ ಆಂತರಿಕ ಪರ್ಯಾಯ ಸಾಧ್ಯತೆಗಳ ಪರಿಶೀನೆಗೆ ಸಮಿತಿಯೊಂದನ್ನು ರಚನೆ ಮಾಡಿದೆ.
ನಾಗರೀಕ ಸೇವಾ ಪರೀಕ್ಷೆ-ಸಿವಿಲ್ ಸರ್ವಿಸ್ ಎಕ್ಸಾಮಿನೆಷನ್ಸ್ (ಸಿಎಸ್‍ಇ) ಮೂಲಕ ನೇರವಾಗಿ ಐಎಎಸ್ ಅಧಿಕಾರಿಗಳನ್ನು ನೇಮಕಾತಿ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಇದಕ್ಕಾಗಿ ಆಂತರಿಕ ಸಮಿತಿಯೊಂದನ್ನು ರಚಿಸಲಾಗಿದೆ.
ಸಮಿತಿಯಿಂದ ಸಲಹೆಗಳು ಮತ್ತು ಮಾನದಂಡಗಳನ್ನು ಶೀಘ್ರವಾಗಿ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಧ್ಯಮ ಮತ್ತು ದೂರಕಾಲಿಕ ಕ್ರಮಗಳ ಮೂಲಕ ಅಧಿಕಾರಿಗಳ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿ 2014ರಲ್ಲಿ 4619, 2015ರಲ್ಲಿ 4802, 2016ರಲ್ಲಿ 4926, 2017ರಲ್ಲಿ 5004, 2018ರಲ್ಲಿ 5104, 2019-20ರಲ್ಲಿ 5205, 2021ರಲ್ಲಿ 5231 ಐಎಎಸ್ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಸದಸ್ಯರಾದ ಡಾ.ವಿ.ಸಿವದಾಸನ್ ಅವರ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಅವರು, ಕೇಂದ್ರ ಸರ್ಕಾರದಲ್ಲಿ ಗ್ರೂಪ್ ಎ ದರ್ಜೆಯ 21,255 ಹುದ್ದೆಗಳು, ಸಿ ದರ್ಜೆಯ 7,56,146 ಹುದ್ದೆಗಳು ಖಾಲಿ ಇವೆ. ಆರನೇ ವೇತನ ಆಯೋಗ ಡಿ ದರ್ಜೆಯ ಎಲ್ಲಾ ಹುದ್ದೆಗಳನ್ನು ಸಿ ದರ್ಜೆಗೆ ಏರಿಸುವಂತೆ ಶಿಫಾರಸ್ಸು ಮಾಡಿತ್ತು. ಹಾಗಾಗಿ ಡಿ ದರ್ಜೆಯಲ್ಲಿ ಯಾವುದೇ ಹುದ್ದೆಗಳು ಖಾಲಿ ಇಲ್ಲ ಎಂದು ತಿಳಿಸಿದ್ದಾರೆ.

Articles You Might Like

Share This Article