ಭಾರತದ ನಡೆಗೆ ನಡುಗಿ ಬಿಲ ಸೇರಿಕೊಂಡ ಉಗ್ರರು

Social Share

ನವದೆಹಲಿ,ಡಿ.15- ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಪಾಕ್ ಬೆಂಬಲಿತ ಉಗ್ರರು ಬಿಲ ಸೇರಿಕೊಂಡಿದ್ದಾರೆ. ಭಾರತೀಯ ಸೈನಿಕರು ನಡೆಸಿದಂತಹ ಎರಡು ದಾಳಿಗಳ ನಂತರ ಕಟ್ಟಾ ಉಗ್ರರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ಭಯೋತ್ಪಾದಕ ನಾಯಕರು ಭಾರತದ ವಿರುದ್ಧ ಮಾತನಾಡುವುದಿರಲಿ ಅತ್ಯುನ್ನತ ಭದ್ರತೆಯಲ್ಲಿ ವಾಸಿಸುಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

26/11 ದಾಳಿ ಸೇರಿದಂತೆ ಹಲವಾರು ಕೃತ್ಯಗಳ ಹೊಣೆಯನ್ನು ಹಫೀಜ್ ಸಯೀದ್ ನೇತೃತ್ವದ ಎಲ್‍ಇಟಿ ಉಗ್ರ ಸಂಘಟನೆ ಸಮರ್ಥಿಸಿಕೊಂಡಿತ್ತು. ಮಾತ್ರವಲ್ಲ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರು ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಾಕ್ ಬೆಂಬಲಿತ ಉಗ್ರರ ಉಪಟಳ ಹೆಚ್ಚಾದಾಗ ಮೋದಿ ಸರ್ಕಾರ ಎದುರಾಳಿಗಳಿಗೆ ತಕ್ಕ ಉತ್ತರ ನೀಡುವಂತೆ ಭಾರತೀಯ ಸೇನೆಗೆ ಸೂಚಿಸಿತ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಚಾಣಕ್ಷತನ ಪ್ರದರ್ಶಿಸಿದ ಭಾರತೀಯ ಯೋಧರು ಉರಿ ಸರ್ಜಿಕಲ್ ಸ್ಟೈಕ್ ಮೂಲಕ ಪಾಕ್ ನೆಲದೊಳಗೆ ನುಗ್ಗಿ ಶತ್ರು ಪಾಳಯದ ಮೇಲೆ ದಾಳಿ ನಡೆಸಿ ವಾಪಸ್ಸಾಗಿತ್ತು.

ಅಂತರ್ಜಾತಿ ವಿವಾಹವಾದವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಮಹಾರಾಷ್ಟ್ರ

ಈ ಘಟನೆ ನಂತರ ಭಾರತವೆಂದರೆ ಬೆಚ್ಚಿ ಬೀಳುತ್ತಿರುವ ಉಗ್ರರು ಭಾರತೀಯರ ವಿರುದ್ಧ ಮಾತನಾಡುವುದರಲಿ ಯಾವಾಗ ನಮ್ಮ ಮೇಲೆ ದಾಳಿ ನಡೆಯಬಹುದು ಎಂಬ ಶಂಕೆಯ ಮೇಲೆ ಬಿಲ ಸೇರಿಕೊಳ್ಳುವಂತಾಗಿದೆ.

ಮತ್ತೆ ಗುಂಡಿಮಯವಾದ ಸಿಲಿಕಾನ್ ಸಿಟಿ ರಸ್ತೆಗಳು

ಜಾಗತೀಕ ಉಗ್ರರಾಗಿರುವ ಮಸೂದ್ ಅಜರ್, ಭಾರತದ ಮೋಸ್ಟ್ ವಾಂಟೆಂಡ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ರಾಷ್ಟ್ರ ಮಟ್ಟದ ಮುಖ್ಯಸ್ಥರ ಭದ್ರತೆಯಲ್ಲಿ ಜೀವ ಕಾಪಾಡಿಕೊಳ್ಳುವಂತಾಗಿದೆ.

Uri surgical strike, anniversary, Pakistan, Terrorists,

Articles You Might Like

Share This Article