ಉರಿಗೌಡ, ನಂಜೇಗೌಡ ವಿಚಾರದಿಂದ ಮತ ವಿಭಜನೆ ಸಾಧ್ಯವಿಲ್ಲ : ಹೆಚ್‌ಡಿಕೆ

Social Share

ಬೆಂಗಳೂರು, ಮಾ.18- ಉರಿಗೌಡ, ನಂಜೇಗೌಡ ವಿಚಾರದಿಂದ ಒಕ್ಕಲಿಗರ ಮತ ವಿಭಜಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಮತಗಳು ಭದ್ರವಾಗಿವೆ. ಯಾವ್ಯಾವ ವಿಷಯದಲ್ಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಘಟನೆಯಿಂದ ಒಕ್ಕಲಿಗರ ಮತ ಬದಲಾಗಲ್ಲ. ಇವೆಲ್ಲ ಕಾಲ್ಪನಿಕ ಕಥೆ ಎಂದು ತಿಳಿಸಿದರು.

ಉರಿಗೌಡ, ನಂಜೇಗೌಡ ಇದ್ದರೋ ಇಲ್ಲವೋ ಗೊತ್ತಿಲ್ಲ. ಜೀವಂತ ಬದುಕಿರುವ ಉರಿಗೌಡ, ನಂಜೇಗೌಡರ ಬಗ್ಗೆ ಯೋಚಿಸಬೇಕು. ಈ ವಿಚಾರ ಈಗ ಅಪ್ರಸ್ತುತ ಎಂದರು. ಒಂದು ಸಮಾಜವನ್ನು ಇನ್ನೊಂದು ಸಮಾಜ ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನು ಎತ್ತಿಕಟ್ಟುತ್ತಿದೆ ಎಂದು ಅವರ ಆರೋಪಿಸಿದರು.

ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ಕಣಕ್ಕೆ..?

ಬಿಜೆಪಿಗೆ ನೈತಿಕತೆ ಇಲ್ಲ. ಇದನ್ನು ಕೇಳಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರಿದ್ದ ಜಾಗದಲ್ಲಿ, ಇವರಿಬ್ಬರ ಹೆಸರನ್ನು ದ್ವಾರಕ್ಕೆ ಹಾಕಿದರು. ವಿರೋಧ ವ್ಯಕ್ತವಾದ ಬಳಿಕ ತೆರವುಗೊಳಿಸಿದರು.

ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು.ಇದರಿಂದ ಹಣ ಮಾಡಬಹುದು ಅಷ್ಟೇ.ಬೇರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ರೌಡಿ ಶೀಟರ್ಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಸೆಗೆ ಅಮಾಯಕರ ಜೀವನ ಬಲಿ ಪಡೆದವರನ್ನ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡುತ್ತಿದ್ದಾರೆ. ಅದೇ ಅವರ ಪಕ್ಷಕ್ಕೆ ಮುಳ್ಳಾಗಲಿದೆ. ಪಾಪದ ಹಣ ಮಾಡಲು ಹೊರಟಿದ್ದು, ಅವರಿಗೆ ಮುಳುವಾಗಲಿದೆ ಎಂದರು.

ಪಕ್ಷದ ಪಂಚರತ್ನ ರಥಯಾತ್ರೆ ರಾಜ್ಯದ 85ಕ್ಷೇತ್ರದಲ್ಲಿ ಪೂರ್ಣಗೊಳಿಸಲಾಗಿದೆ. ಮಾ. 26ರಂದು ಪಂಚರತ್ನ ಯಾತ್ರೆಯ ಬೃಹತ್ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದೇವೆ. ಯಾವ ರೀತಿ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಪೂರ್ವಬಾವಿ ಸಭೆ ಮಾಡುವುದಾಗಿ ಹೇಳಿದರು.

ನಾಯಕರ ಪ್ರಯತ್ನದಿಂದಲೂ ಬಗೆಹರಿಯದ ಕಮಲ ಕಲಹ

ಕನಿಷ್ಠ 10ಲಕ್ಷ ಅಭಿಮಾನಿಗಳು, ಮತದಾರರನ್ನು ಸಮಾವೇಶಕ್ಕೆ ಸೇರಿಸಲು ನಿರ್ಧಾರ ಮಾಡಲಾಗಿದೆ ಎಂದರು.
ಸೇರ್ಪಡೆ: ಜೆಡಿಎಸ್ ಕಚೇರಿಯಲ್ಲಿ ದೇವದುರ್ಗದ ಅಭ್ಯರ್ಥಿ ಕರೆಮ್ಮ ಬೆಂಬಲಿಸಿ ಕಾಂಗ್ರೆಸ್, ಬಿಜೆಪಿ ಪಕ್ಷದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು. ಪಕ್ಷದ ಶಾಲು ಹೊದಿಸಿ ಅವರನ್ನು ಹೆಚ್‍ಡಿಕೆ ಬರಮಾಡಿಕೊಂಡರು.

Urigowda, Nanjegowda, hd kumaraswamy, JDS, BJP,

Articles You Might Like

Share This Article