ಹುಬ್ಬಳ್ಳಿ,ಫೆ.23- ಸಾರಿಗೆ ಬಸ್‍ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಆಸನದ ಮೇಲೆ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊನ್ನೆ ರಾತ್ರಿ ಕೆಎಸ್‍ಆರ್‍ಟಿಎಸ್ ಬಸ್ ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಊಟಕ್ಕಾಗಿ ಡಾಬಾ ಬಳಿ ಬಸ್ ನಿಲ್ಲಿಸಿದಾಗ 32 ವರ್ಷದ ವ್ಯಕ್ತಿಯೊಬ್ಬ ಮಹಿಳೆಯ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಹುಬ್ಬಳ್ಳಿ ಸಮೀಪದ ಕಿರೇಸೂರ ಡಾಬಾದಲ್ಲಿ ಬಸ್ ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ ಎಂದು ಸಹ ಪ್ರಯಾಣಿಕ ರೊಬ್ಬರು ಹೇಳಿದ್ದಾರೆ. ಯುವತಿ ಸೀಟ್ ಕಾಯ್ದಿರಿಸಿ ವಿಜಯಪುರದಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬೇರೆ ಸೀಟ್‍ನ ಲ್ಲಿ ಪ್ರಯಾಣಿಸುತ್ತಿದ್ದನು. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಗುರುತನ್ನು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಕಂಡು ಹಿಡಿದ ಬಗ್ಗೆ ಮಾಹಿತಿ ದೊರೆತಿಲ್ಲ.
ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆಗೆ’ ಪಾದಯಾತ್ರೆಗೆ ಡಾಲಿ ಚಾಲನೆ
ಡಾಬಾದಲ್ಲಿ ಯುವತಿ ಊಟ ಮಾಡಿ ಬಸ್ ಬಳಿ ಬಂದಾಗ ಪಾನಮತ್ತನಾಗಿದ್ದ ವ್ಯಕ್ತಿ ತನ್ನ ಆಸನದ ಮೇಲೆ ಮೂತ್ರ ವಿಸರ್ಜನೆ ಮಾಡೋದನ್ನು ನೋಡಿ ಭಯದಿಂದ ಕೂಗಿಕೊಂಡಿದ್ದಾರೆ. ಯುವತಿ ಕೂಗುತ್ತಿದ್ದಂತೆ ಸಹ ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ ಬಸ್ ಬಳಿ ಬಂದಿದ್ದಾರೆ.
ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಬಸ್‍ನಿಂದ ಕೆಳಗೆ ಇಳಿಸುವಂತೆ ಇತರೆ ಪ್ರಯಾಣಿಕರು ಒತ್ತಾಯಿಸಿದ್ದರು. ಆದರೆ ಯುವತಿ ಸಹ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ಆಸನ ಶುಚಿಗೊಳಿಸಿದ ನಂತರ ಬಸ್ ತನ್ನ ಪ್ರಯಾಣ ಆರಂಭಿಸಿತ್ತು ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿ ಹೇಳಿದ್ದಾರೆ.
ಹಾವೇರಿ : ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ದೂರು ದಾಖಲಾಗಿಲ್ಲ:
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಘಟಕದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ, ಯುವತಿ ಪೊಲೀಸರ ಬಳಿಯೂ ಯಾವುದೇ ದೂರು ದಾಖಲಿಸಿಲ್ಲ. ನಮ್ಮ ಬಳಿಯೂ ದೂರು ನೀಡಲು ಹಿಂದೇಟು ಹಾಕಿದ್ದಾರೆ ಎಂದಿದ್ದಾರೆ.
ಮೂತ್ರ ವಿಸರ್ಜನೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಸಹ ಪ್ರಯಾಣಿಕ, ಯುವತಿ ಕೆಳಗಿಳಿದು ಹೋದಾಗ ಆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದು, ಈ ವಿಷಯ ತಿಳಿದ ಬಳಿಕ ಸಾರಿಗೆ ಸಿಬ್ಬಂದಿ ಆಸನವನ್ನು ಶುಚಿಗೊಳಿಸಿದರು. ನಂತರ ಯುವತಿಗೆ ಧೈರ್ಯ ಹೇಳಿ, ಯುವತಿಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದರು ಎಂದು ತಿಳಿಸಿದ್ದಾರೆ.
urination, female, passenger, KSRTS, bus, Hubli,