ಸೈನಿಕರ ಸಂಖ್ಯೆ ಕಡಿತಗೊಳಿಸಲು ಮುಂದಾದ ಅಮೇರಿಕ

Social Share

ವಾಷಿಂಗ್ಟನ್, ಜು-ವಿಶ್ವದಲ್ಲೇ ಪ್ರಭಲ ದೊಡ್ಡ ರಕ್ಷಣಾಪಡೆ ಹೊಂದಿರುವ ಅಮೆರಿಕ ಮುಂದಿನ ಎರಡು ವರ್ಷಗಳಲ್ಲಿ ಸೈನಿಕರ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲು ಮುಂದಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 10,000 ಸೈನಿಕರ ಸೇವೆಯು ಕಡಿತಗೊಳ್ಳಲಿದೆ ಮತ್ತು ಮುಂದಿನ ವರ್ಷ ನಿರೀಕ್ಷೆಗಳು ಕಠೋರವಾಗಿವೆ ಎಂದು ಪೆಂಟಗನ್‍ನ ಸೇನಾಧಿಕಾರಿ ಹೇಳಿದ್ದಾರೆ.

ಹಾಲಿ 476,000 ಯೋಧರಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ 466,400ಕ್ಕೆ ಇಳಿಯಲಿದೆ ಎಂದು ಆರ್ಮಿ ಜನರಲ್ ಜೋಸೆಫ್ ಮಾರ್ಟಿನ್ ಹೇಳಿದ್ದಾರೆ. ಮತ್ತು 2023 ರಲ್ಲಿ 452,000 ಸೈನಿಕರೊಂದಿಗೆ ಕೊನೆಗೊಳ್ಳಬಹುದು,

ಮುಂದಿರುವ ಸವಾಲನ್ನು ಎದುರಿಸಲು ಹಲವು ಬದಲಾವಣೆ ಅಗತ್ಯ, ಅದಕ್ಕಾಗಿ ಸಜ್ಜಾಗಬೇಕಾಗಿರುವುದರಿಂದ ಅಧುನಿಕ ಮಟ್ಟಕ್ಕೆ ಹೊಸ ನೇಮಕಾತಿ ಚಾಲನೆ ಸಿಕ್ಕಿದೆ ಎಂದು ಲೆಫ್ಟಿನೆಂಟ್ ಕರ್ನಲ್ ರಾಂಡಿ ಫಾರೆಲ್ ಹೇಳಿದ್ದಾರೆ. ಸೇನೆ ಸೇರಲು ಬಯಸುವ ದೈಹಿಕ, ಮಾನಸಿಕ ಮತ್ತು ನೈತಿಕ ಬಲವುಳ್ಳ ಯುವಕರನ್ನು ಹುಡುಕುವುದು ಕಠಿಣ ಸಮಯವಾಗಿದೆ ಬರುವವರಲ್ಲಿ ಕೇವಲ 23% ಮಾತ್ರ ಅರ್ಹರಾಗಿದ್ದಾರೆಎಂದು ತಿಳಿಸಿದ್ದಾರೆ.

Articles You Might Like

Share This Article