ವಾಷಿಂಗ್ಟನ್, ಡಿ .15 -ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಖ್ಯಾತಿಯ ನ್ಯಾನ್ಸಿ ಪೆಲೋಸಿ ಬಾವಪೂರ್ಣ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು.
ಸದಾ ಅವರ ಹೆಸರು ಅಚ್ಚಳಿಯದೇ ಉಳಿಯಲು ಭಾವಚಿತ್ರವನ್ನು ಯುಎಸ್ ಕ್ಯಾಪಿಟಲ್‍ನಲ್ಲಿ ಅನಾವರಣಗೊಳಿಸಿ ಗೌರವ ನೀಡಲಾಯಿತು, ಅವರು ಅಧಿಕಾರದ ದಂಡ ಹಿಡಿದ ಮೊದಲ ಮಹಿಳೆಯಷ್ಟೇ ಅಲ್ಲ ,ಅಮೆರಿಕದ ಅತ್ಯಂತ ಪರಿಣಾಮವಾಗಿ ಜನಪ್ರತಿನಿಧಿಗಳ ಸದನದ ಸ್ಪೀಕರ್ ಆಗಿದ್ದರು ಇತಿಹಾಸ ಅವರನ್ನು ಸ್ಮರಿಸುತ್ತದೆ ಎಂದು ಗುಣಗಾನ ಮಾಡಲಾಯಿತು.
ಸಭಾಂಗಣದಲ್ಲಿ ಕಾಂಗ್ರೆಸ್‍ನ ಪ್ರಸ್ತುತ ಮತ್ತು ಮಾಜಿ ಸದಸ್ಯರು, ಸ್ನೇಹಿತರು ಮತ್ತು ಕುಟುಂಬವನ್ನು ಈ ಸಮಾರಂಭ ಸೆಳೆಯಿತು.ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ವೀಡಿಯೊ ಸಂದೇಶದಲ್ಲಿ, ಪೆಲೋಸಿ ಮಹಿಳೆಯರನ್ನು ಗೆಲ್ಲಲು ಮತ್ತು ಮುನ್ನಡೆಸಲು ಪ್ರೇರೇಪಿಸಿದ್ದಾರೆ ಎಂದು ತಿಳಿಸಿದರು 2007 ರಿಂದ 2011 ರವರೆಗೆ ಸ್ಪೀಕರ್ ಆಗಿ ಮೊದಲ ಅಧಿಕಾರಾವಧಿಯ ನಂತರ ಪೆಲೋಸಿ ಅವರ ಭಾವಚಿತ್ರವನ್ನು ವರ್ಷಗಳ ಹಿಂದೆ ಚಿತ್ರಿಸಲಾಯಿತು,
ಮತ್ತೆ ಗುಂಡಿಮಯವಾದ ಸಿಲಿಕಾನ್ ಸಿಟಿ ರಸ್ತೆಗಳು
ಸುಮಾರು 50 ವರ್ಷಗಳಲ್ಲಿ ಎರಡು ಬಾರಿ ಸ್ಪೀಕರ್ ಆದ ಮೊದಲ ಮಹಿಳೆ ಪ್ರಸ್ತುತ ಅವರು ಸ್ಯಾನ್ ಫ್ರಾನ್ಸಿಸ್ಕೋದ ಪ್ರತಿನಿಧಿಯಾಗಿ ಸದನದಲ್ಲಿ ಉಳಿಯಲಿದ್ದಾರೆ.ನವೆಂಬರ್‍ನಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಪಕ್ಷ ಸೋಲು ಕಂಡಿದೆ ರಿಪಬ್ಲಿಕನ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುತ್ತಿದೆ.
ಏಕಕಾಲದಲ್ಲಿ 3 ಕಡೆ ಸಿಸಿಬಿ ದಾಳಿ, 35 ಲಕ್ಷ ಮೌಲ್ಯದ ಮಾಲು ವಶ
ಕ್ಯಾಲಿಫೋರ್ನಿಯಾದ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಕೆವಿನ್ ಮೆಕಾರ್ಥಿ ಅವರು ಜನವರಿಯಲ್ಲಿ ಹೊಸ ಕಾಂಗ್ರೆಸ್ ಸಮಾವೇಶಗೊಂಡಾಗ ಅವರನ್ನು ಸ್ಪೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಆದರೆ ಇವರಿಗೆ ನ್ಯೂಯಾರ್ಕ್‍ನ ಪ್ರತಿನಿಧಿ. ಹಕೀಮ್ ಜೆಫ್ರೀಸ್ ಕೂಡ ಇದೇ ಸ್ಥಾನಕ್ಕೆ ಕೊನೆ ಹಂತದ ಕಸರತ್ತು ನಡೆಸಿದ್ದಾರೆ.
#USCapitol, #NancyPelosi, #historic, #firstfemalespeaker,