ವಾಷಿಂಗ್ಟನ್,ಫೆ.25-ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಸಾಲ ನೀಡಿ ಬಲವಂತದಿಂದ ಆ ದೇಶಗಳ ಮೇಲೆ ಹತೋಟಿ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ.
ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿಗೆ ಸಾಲ ನೀಡಿ ಅ ಮೂಲಕ ಎರಡು ರಾಷ್ಟ್ರಗಳ ಮೇಲೆ ಬಲವಂತದ ಹತೋಟಿ ಪಡೆದುಕೊಳ್ಳಬಹುದು ಎಂಬ ಶಂಕೆಯಿದೆ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಸುದ್ದಿಗಾರರಿಗೆ ತಿಳಿಸಿದರು.
ಕುಟುಂಬದ ಪ್ರತಿಯೊಬ್ಬರಿಗೂ 10ಕೆಜಿ ಉಚಿತ ಅಕ್ಕಿ : ಕಾಂಗ್ರೆಸ್ ಘೋಷಣೆ
ದೇಶಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಹೇಗೆ ಸಹಾಯ ಮಾಡುತ್ತೇವೆ ಎಂಬುದರ ಕುರಿತು ನಾವು ಭಾರತದೊಂದಿಗೆ ಮಾತನಾಡುತ್ತಿದ್ದೇವೆ ಹಾಗೂ ಈ ಕುರಿತಂತೆ ಪಾಕ್ ಮತ್ತು ಶ್ರೀಲಂಕಾ ದೇಶಗಳ ನಾಯಕರ ಜತೆಗೂ ಮಾತುಕತೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಚೀನಾ ಸೃಷ್ಟಿಸುತ್ತಿರುವ ಅರಾಜಕತೆ ಹಾಗೂ ಆತಂಕ ಕುರಿತಂತೆಯೂ ನಮ್ಮ ದೇಶ ಭಾರತದೊಂದಿಗೆ ಗಂಭೀರ ಮಾತುಕತೆ ನಡೆಸುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
US, concerned, Chinese, loans, Pakistan, Sri Lanka,