ವಾಷಿಂಗ್ಟನ್, ಡಿ .21-ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣಕ್ಕೆ ನಿರ್ಬಂಧ ಹೇರಿರುವ ತಾಲಿಬಾನ್ ಆಡಳಿತದ ನಿರ್ಧಾರವನ್ನು ಅಮೆರಿಕ ಖಂಡಿಸಿದೆ. ಅಫ್ಘಾನ್ ಮಹಿಳೆಯರು ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ತಡೆಯುವ ತಾಲಿಬಾನ್ನ ಅಸಮರ್ಥನೀಯ ನಿರ್ಧಾರವನ್ನು ಅಮೆರಿಕ ಖಂಡಿಸುತ್ತದೆ ಎಂದು ಶ್ವೇತಭವನದ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.
ಇದು ಶೋಚನೀಯ ನಿರ್ಧಾರ,ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಿರುವುದು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ದಮನ ಮಾಡಿದಂತೆ ಎಂದಿದ್ದಾರೆ.
ಅಫ್ಘಾನಿಸ್ತಾನದ ಅರ್ಧದಷ್ಟು ಜನಸಂಖ್ಯೆಯನ್ನು ತಡೆಹಿಡಿಯುವ ಈ ನಿರ್ಧಾರ ಅರ್ಹವಲ್ಲ ,ಈ ನಿಲುವಿನ ಪರಿಣಾಮವಾಗಿ ತಾಲಿಬಾನ್ ಅಂತರಾಷ್ಟ್ರೀಯ ಸಮುದಾಯದಿಂದ ಮತ್ತಷ್ಟು ದೂರವಾಗುತ್ತದೆ ಮತ್ತು ಅವರು ಬಯಸಿದ ಮಾನವೀಯ ಹಾಗು ನ್ಯಾಯಸಮ್ಮತ ಸೌಲಭ್ಯ ಸಿಗುವುದಿಲ್ಲ ಎಂದು ವ್ಯಾಟ್ಸನ್ ಎಚ್ಚರಿಸಿದ್ದಾರೆ.
ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ
ಅಮೆರಿಕ ಈ ವಿಷಯದ ಬಗ್ಗೆ ನಮ್ಮ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದೆ. ಅಫ್ಘಾನಿಸ್ತಾನದ ಮಹಿಳೆಯರು ಮತ್ತು ಹುಡುಗಿಯರನ್ನು ಬೆಂಬಲಿಸಲು ಮತ್ತು ಅಫ್ಘಾನಿಸ್ತಾನದ ಜನರಿಗೆ ದೃಢವಾದ ಮಾನವೀಯ ಬೆಂಬಲವನ್ನು ಒದಗಿಸಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
US, condemns, Taliban, restrictions, women, education,