ಮಂಕಿಪಾಕ್ಸ್ : ಆಮೇರಿಕದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

Social Share

ವಾಷಿಂಗ್ಟನ್, ಆಗಸ್ಟ್ 5- ಆಮೆರಿಕದಲ್ಲಿ ಮಂಕಿಪಾಕ್ಸ್ ಆತಂಕ ಸೃಷ್ಟಿಸಿದ್ದು, ಸೋಂಕು ನಿಯಂತ್ರಕ್ಕಾಗಿ ಸರ್ಕಾರ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಸುಮಾರು 7,100 ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಇದರ ವ್ಯಾಪಕತೆ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವರ, ದೇಹದ ನೋವು, ಶೀತ, ಆಯಾಸ ಮತ್ತು ದೇಹದ ಅನೇಕ ಭಾಗಗಳಲ್ಲಿ ಮೊಡವೆ ತರಹದ ಉಬ್ಬುಗಳನ್ನು ಉಂಟುಮಾಡಬಹುದು. ಇದನ್ನು ಕಂಡ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದು ಸೂಚಿಸಲಾಗಿದೆ.
ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳು ಆರೋಗ್ಯ ತಜ್ಞರು ಒಗ್ಗಟ್ಟಾಗಿ ಸೋಂಕಿನಿಂದ ಹೇಗೆ ಪಾರಾಗಾಬೇಕು ಎಂಬುದರ ಬಗ್ಗೆ ಚಿಂತಿಸಿದ್ದೇವೆ. ಪ್ರತಿಯೊಬ್ಬ ಆಮೆರಿಕನ್ನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮಗಳನ್ನು ಪಾಲಿಸಿ ಎಂದು ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಮುಖ್ಯಸ್ಥ ಕ್ಸೇವಿಯರ್ ಬೆಸೆರಾ ಹೇಳಿದರು.

ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಂತಹ ಪ್ರಮುಖ ನಗರಗಳಲ್ಲಿ ಚಿಕಿತ್ಸಾಲಯಗಳು ಬೇಡಿಕೆ ಹೆಚ್ಚಾಗಿದೆ. ಜನರು 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಇನ್ನು ಕೆಲವರು ಮೊದಲ ಡೋಸನ್ನು ಪಡೆಯದೆ ಅಸಡ್ಡೆ ತೋರಿದ್ದಾರೆ.
ಇಂತಹ ಪ್ರವೃತ್ತಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದರ ನಡುವೆ ಶ್ವೇತಭವನದ ಪ್ರಕಟಣೆ ಪ್ರಕಾರ ಸುಮಾರು 1.1 ಮಿಲಿಯನ್ ಡೋಸ್‍ಗಳನ್ನು ಲಭ್ಯಗೊಳಿಸಿದೆ ಮತ್ತು ದೇಶೀಯ ರೋಗನಿರ್ಣಯ ಸಾಮಥ್ರ್ಯವನ್ನು ಹೆಚ್ಚಿಸಲಾಗಿದೆ. ವಾರಕ್ಕೆ 80,000 ಜನರಿಗೆ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಹೇಳಿದೆ.
ಮುದ್ದಾಡುವುದು ಮತ್ತು ಚುಂಬಿಸುವುದು, ಹಾಗೆಯೇ ಹಾಸಿಗೆ, ಟವೆಲ್ ಮತ್ತು ಬಟ್ಟೆಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು. ಇದುವರೆಗೂ ಅಮೆರಿಕದಲ್ಲಿ ಈ ಸೋಂಲಿನಿಂದ ಯಾರು ಮೃತಪಟ್ಟಿಲ್ಲವಾದರೂ ಇತರ ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಮುನ್ನಚ್ಚರಿಕೆ ಕ್ರಮ ಹಾಗೂ ಜಾಗೃತಿ ಕ್ರಮವನ್ನು ಅಗತ್ಯ ಎಂದು ಹೇಳಿದರು.

ಮಂಕಿಪಾಕ್ಸ್ ಮಿತಿಮೀರಿದ ಹಂತವಾಗಿದೆ ಎಂದು ಜಾರ್ಜ್‍ಟೌನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕಾನೂನು ತಜ್ಞ ಲಾರೆನ್ಸ್ ಗೋಸ್ಟಿನ್ ಹೇಳಿದ್ದು, ಸರ್ಕಾರದ ಗಂಭೀರತೆ ಯನ್ನು ಅರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತುರ್ತು ನಿಯಿಂದ ಅಗತ್ಯ ಹಣವನ್ನು ಪಡೆದು ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಮತ್ತು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಎಂದು ಹೇಳಿದ್ದಾರೆ.

ಮೊದಲೇ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಿತ್ತು ಎಂದು ಗೋಸ್ಟಿನ್ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಏಕಾಏಕಿ ನಿಯಂತ್ರಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು ಹೆಚ್ಚು ಕಾನೂನು ಸವಾಲುಗಳನ್ನು ಎದುರಿಸುತ್ತಿವೆ, ಆದರೆ ಮಂಕಿಪಾಕ್ಸ್‍ನೊಂದಿಗೆ ಅದು ಸಂಭವಿಸುತ್ತದೆ ಎಂದು ಗೋಸ್ಟಿನ್ ನಿರೀಕ್ಷಿಸಿರಲಿಲ್ಲ.

ಸಾರ್ವಜನಿಕ ಆರೋಗ್ಯ ತುರ್ತುಸಿ ಪರಿಸ್ಥಿತಿ ಮೊದಲೇ ಘೋಷಿಸಬೇಕಾಗಿತ್ತು. ರಾಷ್ಟ್ರ ವ್ಯಾಪಿ ಮಂಕಿಪಾಕ್ಸ್ ವಿರುದ್ಧ ಹೋರಾಡಲು ಯಾವುದೇ ರಾಜಕೀಯ ವಿರೋಧವಿಲ್ಲ ಎಂದು ಹೇಳಿದ್ದಾರೆ.

Articles You Might Like

Share This Article