ಡಾಲರ್​ಗೆ ಸೆಡ್ಡು ಹೊಡೆಯಲು ಭಾರತದೊಂದಿಗೆ ಕೈ ಜೋಡಿಸಿದ ಹಲವು ರಾಷ್ಟ್ರಗಳು

Social Share

ನವದೆಹಲಿ, ಜ.19-ಅಮೆರಿಕಾದ ಡಾಲರ್‍ಗೆ ಸೆಡ್ಡು ಹೊಡೆಯಲು ವಿಶ್ವದ ಹಲವು ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸಿದೆ. ಈಗಾಗಲೇ ಸುಮಾರು 35ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದ ರೂಪಾಯಿಯನ್ನು ತನ್ನ ದೇಶಿಯ ವಹಿವಾಟಿನೊಂದಿಗೆ ಬಳಸಿಕೊಳ್ಳಲು ಮುಂದಾಗುತ್ತಿವೆ.

ಜಾಗತೀಕವಾಗಿ ಡಾಲರ್ ಈಗ ವ್ಯಾಪಾರ ವಹಿವಾಟಿನಲ್ಲಿ ಅಗ್ರಸ್ಥಾನ ಹೊಂದಿದೆ. ನಂತರ ಯೂರೋ, ಪೌಂಡ್ಸ್, ಆಸ್ಟ್ರೇಲಿಯನ್ ಡಾಲರ್, ಸಿಂಗಾಪುರ್ ಡಾಲರ್ ಹೀಗೆ ಹಲವು ಕರೆನ್ಸಿಗಳು ವಿಶ್ವಮಟ್ಟದಲ್ಲಿ ಆಕ್ರಮಿಸಿಕೊಂಡಿವೆ.

ಆದರೆ ಈಗ ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆರಂಭಿಸಿದ ಯೋಜನೆಯ ಮೂಲಕ ರೂಪಾಯಿ ಮೂಲಕವೇ ವ್ಯಾಪಾರ ವಿನಿಮಯ ಮಾಡಿಕೊಂಡು ತಮ್ಮ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಮುಂದಾಗಿವೆ.

ಪ್ರಮುಖವಾಗಿ ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು ಅಗ್ಗವಾಗಿದ್ದರ ಜೊತೆಗೆ ಭಾರತದ ರೂಪಾಯಿಯಲ್ಲೇ ವಹಿವಾಟಿನಲ್ಲಿ ಬಳಸಿಕೊಳ್ಳಲು ಪರಸ್ಪರ ಒಪ್ಪಂದವಾಗಿದ್ದು, ಇದು ಯಶಸ್ವಿಯೂ ಆಗಿದೆ.

ಇದರಿಂದ ಉತ್ತೇಜನಗೊಂಡಿರುವ ನೆರೆಯ ಶ್ರೀಲಂಕಾ, ಬಾಂಗ್ಲಾ ದೇಶ, ಆಫ್ರಿಕಾದ ಹಲವು ರಾಷ್ಟ್ರಗಳು ಜೊತೆಗೆ ಸೌ ಅರಬೀಯಾ ಕೂಡ ರೂಪಾಯಿನಲ್ಲಿ ವಹಿವಾಟಿಗೆ ಸಹಮತ ವ್ಯಕ್ತಪಡಿಸುತ್ತಿದೆ. ಹೀಗೆ ಸುಮಾರು 35ಕ್ಕೂ ಹೆಚ್ಚು ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸುವ ಕಾರಣ ಮುಂದಿನ ದಿನಗಳಲ್ಲಿ ಡಾಲರ್‍ಗೆ ಸೆಡ್ಡು ಹೊಡೆಯಬಹುದು ಎಂದು ವಿಶ್ವ ಆರ್ಥಿಕ ಪಂಡಿತರು ಅಂದಾಜು ಮಾಡಿದ್ದಾರೆ.

ಈ ಮೊದಲು ಇರಾನ್ ಮತ್ತು ಸೌಧಿ ಅರಬಿಯಾದಿಂದ ಕಚ್ಚಾ ತೈಲವನ್ನು ಪಡೆಯುತ್ತಿದ್ದ ಭಾರತ ದೇಶದ ಆರ್ಥಿಕತೆ ಶೇ. 40ರಿಂದ 50ರಷ್ಟು ಭಾಗವನ್ನು ಇದಕ್ಕೆ ಬಳಸಬೇಕಾಗುತ್ತಿತ್ತು. ಆದರೆ ಈಗ ಇದನ್ನು 35ಕ್ಕೆ ಇಳಿಸುವುದರಿಂದ ದೇಶದ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ.

ಕೋರೆಗಾಂವ್-ಭೀಮಾ ಹಿಂಸಾಚಾರ ತನಿಖಾ ಆಯೋಗದ ಅಧಿಕಾರವಧಿ ವಿಸ್ತರಣೆ

ವಿದೇಶಿ ವಿನಿಮಯಕ್ಕಾಗಿಯೇ ಭಾರತದಲ್ಲಿ ಹಲವು ರಾಷ್ಟ್ರಗಳು ಬ್ಯಾಂಕ್ ಶಾಖೆಯನ್ನು ತೆರೆಯುತ್ತಿದೆ. ಈ ಮೂಲಕ ತಮ್ಮ ದೇಶದ ಉದ್ಯಮಿಗಳಿಗೆ ಆಮದು ಹಾಗೂ ರಫ್ತಿಗೆ ರೂಪಾಯಿಯನ್ನು ಬಳಸಿಕೊಂಡು ತಮ್ಮ ಆರ್ಥಿಕತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದಕ್ಕಾಗಿ ವೋಸ್ಟ್ರೋ ಖಾತೆ ವಾಣಿಜ್ಯ ವಹಿವಾಟುಗಳಲ್ಲಿ ರೂಪಾಯಿಯನ್ನು ಬಳಸಿಕೊಳ್ಳಲು ಆಯಾ ದೇಶಗಳು ಬ್ಯಾಂಕ್ ಶಾಖೆಗಳನ್ನು ಆರಂಭಿಸಿ ವೋಸ್ಟ್ರೋ ಅಕೌಂಟ್‍ಅನ್ನು ಈಗಾಗಲೇ ರಷ್ಯಾದ ಸಬೀರ್ ಬ್ಯಾಂಕ್ ವಿಟಿಬಿ ಬ್ಯಾಂಕ್ ತನ್ನ ಶಾಖೆಗಳನ್ನು ಭಾರತದಲ್ಲಿ ಹೊಂದಿದೆ.

ಇಲ್ಲಿ ಭಾರತದ ರೂಪಾಯಿ ಮೂಲಕ ವಿನಿಮಯ ಮಾಡಲು ವೋಸ್ಟ್ರೋ ಅಕೌಂಟನ್ನು ತೆರೆಯಲಾಗಿದೆ. ಇನ್ನು ಭಾರತದಲ್ಲೂ ಭಾರೀ ಹೂಡಿಕೆ ಮಾಡಿರುವ ರಷ್ಯಾ ಈ ಅಕೌಂಟ್ ಮೂಲಕವೇ ಭಾರತದ ರೂಪಾಯಿಯನ್ನು ಜಮೆ ಮಾಡಿದರೆ ತಮ್ಮ ದೇಶದಲ್ಲಿ ಅವರು ರಷ್ಯಾ ಕರೆನ್ಸಿಯಾಗಿ ಬದಲಿಸಿಕೊಳ್ಳಬಹುದು.

ಆದರೆ ಈ ಹಿಂದೆ ಡಾಲರ್ ವಹಿವಾಟು ಇದ್ದಾಗ ಅದನ್ನು ಅಮೇರಿಕಾದ ಬ್ಯಾಂಕುಗಳಲ್ಲಿ ಜಮೆ ಮಾಡಿ ನಂತರ ಶುಲ್ಕ ಕಟ್ಟಿ ನಂತರ ರಷ್ಯಾದ ಕರೆನ್ಸಿಯಾಗಿ ಪಡೆಯಬೇಕಾಗಿತ್ತು.

ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ನೋಸ್ಟ್ರೋ ಅಕೌಂಟ್ ತೆರಯಲು ಕೂಡ ಅವಕಾಶ ನೀಡಿದರೂ ಕೂಡ ಇದರಿಂದ ಭಾರತದಲ್ಲಿ ತಮ್ಮ ಶಾಖೆ ಇಲ್ಲದಿದ್ದಲ್ಲಿ ಅನುಮತಿ ಪಡೆದು ರೂಪಾಯಿ ಮೂಲಕ ವಿನಿಮಯ ಮಾಡಿಕೊಳ್ಳಬಹುದಾಗಿದೆ.

7 ಬಿಡಿಎ ನಿವೇಶನಗಳನ್ನು ನುಂಗಿದರೇ ನಿರ್ಮಾಪಕ ಉಮಾಪತಿ..?

ಎರಡೂ ಖಾತೆಗಳು ಒಂದೆ ತರಹದಲ್ಲಿ ಕಾರ್ಯನಿರ್ವಹಿಸಿದರೂ ಸ್ವಲ್ಪ ಮಟ್ಟಿನ ಬದಲಾವಣೆ ಇದೆ.
ಡಾಲರ್ ಒಂದನ್ನೇ ಅವಲಂಭಿಸುವುದರಿಂದ ಜಾಗತಿಕ ಮಟ್ಟದ ಹಣದುಬ್ಬರ ಕೂಡ ಏರಿಕೆಯಾಗುತ್ತದೆ. ಇದನ್ನು ತಪ್ಪಿಸಲು ರೂಪಾಯಿಯಲ್ಲಿಯೇ ವಹಿವಾಟು ನಡೆಸಲು ಹಲವು ರಾಷ್ಟ್ರಗಳು ಹಾಗೂ ಅಮೇರಿಕಾ ಆರ್ಥಿಕ ತಜ್ಞರ ಹುಬ್ಬೇರುವಂತೆ ಮಾಡಿದೆ.

ಜಾಗತಿಕ ಟಾಪ್ 5 ದೊಡ್ಡ ಆರ್ಥಿಕತೆ ರಾಷ್ಟ್ರಗಳಲ್ಲಿ ಭಾರತವೂ ಕೂಡ ಇದ್ದು ಸದ್ಯದಲ್ಲಿಯೇ ಹೊಸ ಶಾಖೆ ಆರಂಭಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನದಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಸ್ಥಾನವನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.

US dollar, Indian, rupee,

Articles You Might Like

Share This Article