ಬೀಜಿಂಗ್,ಫೆ.5- ಗೂಢಚಾರಿಕೆ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿರುವುದು ಚೀನಾವನ್ನು ಕೆರಳಿಸಿದೆ. ನಿಮ್ಮ ನಿರ್ಧಾರಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದೂ ಎಚ್ಚರಿಸಿದೆ.
ಚೀನಾದ ಗೂಢಚಾರಿಕೆ ಬಲೂನ್ ಅನ್ನು ಅಟ್ಲಾಂಟಿಕ ಕರಾವಳಿಯಲ್ಲಿ ಹೊಡೆದುರುಳಿಸಿರುವ ಪೆಂಟಗಾನ್ ಕ್ರಮವನ್ನು ಬಿಡೆನ್ ಆಡಳಿತ ಶ್ಲಾಘಿಸಿರುವ ಬೆನ್ನಲ್ಲೆ ಚೀನಾ ಅತೃಪ್ತಿ ಹೊರಹಾಕಿರುವುದು ಗಮನಿಸಿದರೆ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಚೀನಾದ ನಡೆ ನಮ್ಮ ದೇಶಕ್ಕೆ ವಿರುದ್ಧವಾದ ನಡೆಯಾಗಿರುವುದರಿಂದ ಬಲೂನ್ ಹೊಡೆದುರುಳಿಸಿರುವ ನಮ್ಮ ಕಾರ್ಯ ಕಾನೂನುಬದ್ಧವಾಗಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ತಿಳಿಸಿದ್ದಾರೆ.
ಆದರೆ, ಅಮೆರಿಕ ನಡೆಯನ್ನು ಖಂಡಿಸಿರುವ ಚೀನಾ ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿ ಅಂಗಳ ತಲುಪುತ್ತಿರುವ ಕಾಂಗ್ರೆಸ್‍ನ ಒಳ ಬೇಗುದಿಗಳು
ಮೂರು ಬಸ್ ಗಾತ್ರವಿದ್ದ ಚೀನಾ ಗೂಢಚಾರಿಕೆ ಬಲೂನ್ ಅನ್ನು ಆಕಾಶದಲ್ಲೇ ಸ್ಪೋಟಿಸಿರುವ ಅಮೆರಿಕಾ ಸೇನೆ ಅವಶೇಷಗಳು ಭೂಮಿ ಮೇಲೆ ಬೀಳದಂತೆ ಸಮುದ್ರದ ಮಧ್ಯಭಾಗದಲ್ಲಿ ಬೀಳುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಒಂದು ವೇಳೆ ಸ್ಪೋಟಗೊಂಡ ಬಲೂನಿನ ಅವಶೇಷಗಳು ಭೂಮಿ ಮೇಲೆ ಬಿದ್ದಿದ್ದರೆ ಅಪಾರ ಸಾವು-ನೋವು ಸಂಭವಿಸುವ ಸಾಧ್ಯತೆಗಳಿತ್ತು. ಹೀಗಾಗಿ ಅವಶೇಷಗಳನ್ನು ಸಮುದ್ರದಲ್ಲಿ ಬೀಳಿಸುವಂತೆ ನೋಡಿಕೊಳ್ಳಲಾಗಿತ್ತು.
ಆಕಾಶದಲ್ಲಿ ಬಲೂನ್ ಸ್ಪೋಟಿಸುವ ದೃಶ್ಯ ಹಾಗೂ ಅವಶೇಷಗಳು ಸಮುದ್ರಕ್ಕೆ ಬೀಳುವುದನ್ನು ಕೆಲವರು ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಲೂನ್ ಸ್ಪೋಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ ನಮ್ಮ ರಾಷ್ಟ್ರ ಗೂಢಚಾರಿಕೆ ಬಲೂನ್ ಅಲ್ಲ ಅದೊಂದು ನಾಗರಿಕ ಹವಾಮಾನ ಬಲೂನ್ ಆಗಿದೆ. ಇಂತಹ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಲ್ಲ ಎಂದು ಮಾತು ಬದಲಿಸಿದೆ.
ಘೋಷಿತ 93 ಅಭ್ಯರ್ಥಿಗಳ ಸಭೆ ಕರೆದ ಹೆಚ್ಡಿಕೆ
ಏತನ್ಮಧ್ಯೆ, ಚೀನಾ ಪ್ರವಾಸವನ್ನು ಮೊಟಕುಗೊಳಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಮತ್ತೆ ಬೀಜಿಂಗ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
US, downs, Chinese, balloon, off, Carolina, coast,