ಅಮೆರಿಕದ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಏಲಿಯನ್ಸ್ ಇರಬಹುದೇ.. ?

Social Share

ವಾಷಿಂಗ್ಟನ್,ಫೆ.13- ಬಾಹ್ಯಾಕಾಶದಲ್ಲಿ ಕಾಣಿಸಿಕೊಂಡ ಅಗೋಚರ ವಸ್ತುಗಳನ್ನು ಹೊಡೆದುರುಳಿಸಿರುವ ಅಮೆರಿಕ ಸೇನೆ ಆಕಾಶದಲ್ಲಿ ಕಾಣಿಸಿಕೊಂಡ ವಸ್ತು ಏಲಿಯನ್ಸ್ ಇದ್ದರೂ ಇರಬಹುದು ಎಂದು ಅಭಿಪ್ರಾಯಪಟ್ಟಿದೆ.

ಉತ್ತರ ಅಮೆರಿಕಾದ ವಾಯಪ್ರದೇಶದಲ್ಲಿ ಕಾಣಿಸಿಕೊಂಡ ಮೂರು ಆಗೋಚರ ವಸ್ತುಗಳನ್ನು ನಾವು ಹೊಡೆದುರುಳಿಸಿದ್ದೇವೆ. ಆ ವಸ್ತುಗಳನ್ನು ಬೇರೆ ದೇಶದವರು ಕಳಿಸಿರಬಹುದು ಇಲ್ಲವೆ, ಏಲಿಯನ್ಸ್ ಇದ್ದರೂ ಇರಬಹುದು ಎಂದು ಅಮೆರಿಕಾ ಗುಪ್ತಚರ ಇಲಾಖೆ ಮುಖ್ಯಸ್ಥ ಜನರಲ್ ಗ್ಲೆನ್ ವ್ಯಾನ್‍ರೆಕ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಂತದಲ್ಲಿ ನಾವು ಯಾವುದೆ ದೇಶ, ಇಲ್ಲವೆ ನಿಗೂಢಕಾಯಗಳು ನಡೆಸುವ ಪ್ರತಿ ಬೆದರಿಕೆ ಅಥವಾ ಸಂಭಾವ್ಯ ಬೆದರಿಕೆಯನ್ನು ನಿರ್ಣಯಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ 4 ರಂದು ಶಂಕಿತ ಚೀನಿ ಹವಾಮಾನ ಬಲೂನ್ ಹೊಡೆದುರುಳಿಸಿದ ಅಮೆರಿಕ ಸೇನೆ ಇತ್ತಿಚೆಗೆ ಆಕಾಶದಲ್ಲಿ ಕಾಣಿಸಿಕೊಂಡ ಇನ್ನಿತರ ಎರಡು ಅಗೋಚರ ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬೀಡೆನ್ ಅವರ ಆದೇಶದ ಮೇಲೆ ಹೊಡೆದುರುಳಿಸಿವೆ.

ಏರೋ ಇಂಡಿಯಾ 2023ಗೆ ಚಾಲನೆ, ಇಲ್ಲಿದೆ ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್

ನಾವು ಹೊಡೆದುರುಳಿಸಿರುವ ವಸ್ತುಗಳು ಏಲಿಯನ್ಸ್‍ಗಳೆಂದು ಪರಿಗಣಿಸಲು ನಮಗೆ ಸಾಧ್ಯವಾಗಿಲ್ಲ. ಆದರೂ ಇದು ಏಲಿಯನ್ಸ್‍ಗಳ ಕುಚೆಷ್ಟೇ ಇರಬಹುದು ಎಂದು ನಾವು ಅಂದಾಜಿಸುವುದರಲಿ ಯಾವುದೆ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.

ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿರುವ ವಸ್ತುಗಳನ್ನು ಯಾರು ರವಾನಿಸುತ್ತಿದ್ದಾರೆ ಅದು ಭೂಮಿಯಿಂದ ರವಾನೆಯಾಗಿದೆಯೋ ಅಥವಾ ಬೇರೆ ಗ್ರಹದಿಂದ ಉಡಾವಣೆ ಆಗಿದೆಯೋ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಆದಾಗ್ಯೂ, ಅಸಂಗತ, ಗುರುತಿಸಲಾಗದ ವಸ್ತುಗಳನ್ನು ತನಿಖೆ ಮಾಡುವ ಸರ್ಕಾರದ ಪ್ರಯತ್ನ – ಅವು ಬಾಹ್ಯಾಕಾಶದಲ್ಲಿರಬಹುದು, ಆಕಾಶದಲ್ಲಿರಬಹುದು ಅಥವಾ ನೀರೊಳಗಿನ ಇರಲಿ ಅವುಗಳನ್ನು ಪತ್ತೆ ಮಾಡಿ ನಾಶಪಡಿಸಲಾಗುವುದು ಎಂದು ಹಿರಿಯ ಮಿಲಿಟರಿ ನಾಯಕರು ಹೇಳಿದ್ದಾರೆ.

#USGeneral, #unidentifiedobjects, #UFO, #NorthAmerican, #space,

Articles You Might Like

Share This Article