ಜಕಾರ್ತಾ, ಆ. 3 – ಚೀನಾ ದಬ್ಬಾಳಿಕೆ, ಬೆದರಿಕೆಗೆ ದಿಟ್ಟ ಸಂದೇಶ ನೀಡಲು ಇಂಡೋನೇಷ್ಯಾ ಸುಮಾತ್ರಾ ದ್ವೀಪದಲ್ಲಿ ಅಮೆರಿಕ ಜೊತೆಗೂಡಿ ಯುದ್ಧ ವ್ಯಾಯಾಮ ನಡೆಸಿದೆ. ಅಮೆರಿಕ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಸಿಂಗಾಪುರದಿಂದ
5,000 ಕ್ಕೂ ಹೆಚ್ಚು ಸೈನಿಕರು ಇದರಲ್ಲಿ ಭಾಗವಹಿಸಿದ್ದರು, ಪರಸ್ಪರ ಕಾರ್ಯಸಾಧ್ಯತೆ, ಸಾಮಥ್ರ್ಯ, ನಂಬಿಕೆ ಮತ್ತು ಸಹಕಾರವನ್ನು ಬಲಪಡಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಇದು ಅಮೆರಿಕ -ಇಂಡೋನೇಷ್ಯಾ ಬಾಂಧವ್ಯದ ಸಂಕೇತವಾಗಿದೆ ಎಂದು ಯುಎಸ್ ಆರ್ಮಿ ಪೆಸಿಫಿಕ್ ಕಮಾಂಡಿಂಗ್ ಜನರಲ್ ಚಾಲ್ಸರ್ ಫ್ಲಿನ್ ತಿಳಿಸಿದ್ದಾರೆ. ಈ ಸಮರಾಭ್ಯಾಸವು ಆಗಸ್ಟ್ 14 ರವರೆಗೆ ನಡೆಯಲಿದ್ದು, ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಾಗರ ಕಾವಲುಪಡೆಯೂ ಒಳಗೊಂಡಿದೆ.
ರಾಷ್ಟ್ರೀಯ ಸಾರ್ವಭೌಮತ್ವವನ್ನು ಕಾಪಾಡಲು ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ನಡೆಸುವುದಾಗಿ ಚೀನಾದ ರಕ್ಷಣಾ ಸಚಿವಾಲಯ ಮಂಗಳವಾರ ರಾತ್ರಿ ಹೇಳಿದೆ. ವಾಸ್ತವಿಕವಾಗಿ ಸಂಪೂರ್ಣ ದಕ್ಷಿಣ ಚೀನಾ ಸಮುದ್ರವನ್ನು ತನ್ನ ಹಕ್ಕು ಎಂದು ಚೀನಾವು ಪ್ರತಿಪಾದಿಸುತ್ತಿದೆ.
ಯುಎಸ್ ಮತ್ತು ಇತರ ಪಾಲುದಾರ ಪಡೆಗಳೊಂದಿಗೆ ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಮಾನಗಳು ಮತ್ತು ಹಡಗುಗಳ ಪ್ರತಿಬಂಧಕಗಳ ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಅಸುರಕ್ಷಿತ ಸಂವಹನಗಳ ಸಂಖ್ಯೆಯು ಏರಿದೆ ಎಂದು ಮಾರ್ಕ್ ಮಿಲ್ಲಿ ಹೇಳಿದ್ದಾರೆ.
ಇಂಡೋನೇಷ್ಯಾವು ಈ ಪ್ರದೇಶ ಆಯಕಟ್ಟಿನ ನಿರ್ಣಾಯಕವಾಗಿದೆ ಮತ್ತು ದೀರ್ಘಕಾಲದವರೆಗೆ ಅಮೆರಿಕ ದ ಪ್ರಮುಖ ಪಾಲುದಾರ ಎಂದು ಮಿಲ್ಲಿ ಹೇಳಿದರು. ಈ ವರ್ಷದ ಆರಂಭದಲ್ಲಿ, ಅಮೆರಿಕ 13.9 ಶತಕೋಟಿ ಸುಧಾರಿತ ಯುದ್ಧ ವಿಮಾನಗಳ ಮಾರಾಟವನ್ನು ಇಂಡೋನೇಷ್ಯಾಕ್ಕೆ ಅನುಮೋದಿಸಿತು. ಮತ್ತು ಕಳೆದ ಡಿಸೆಂಬರ್‍ನಲ್ಲಿ ಜಕಾರ್ತದಲ್ಲಿ, ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಯುಎಸ್ ಮತ್ತು ಇಂಡೋನೇಷ್ಯಾ ನಡುವೆ ರ್ವತ ಜಂಟಿ ನೌಕಾ ವ್ಯಾಯಾಮಗಳಿಗೆ ಒಪ್ಪಂದಗಳಿಗೆ ಸಹಿ ಹಾಕಿದರು.