ರಕ್ಷಣಾ ಸಹಕಾರ ಕುರಿತು ಅಮೆರಿಕ-ಜಪಾನ್ ಒಪ್ಪಂದ

Social Share

ವಾಷಿಂಗ್ಟನ್, ಜ.7- ರಕ್ಷಣಾ ಸಹಕಾರವನ್ನು ಆಳವಾಗಿಸಲು ಬಯಸಿರುವ ಅಮೆರಿಕ ಮತ್ತು ಜಪಾನ್ ದೇಶಗಳು ಜಪಾನ್‍ನಲ್ಲಿ ಅಮೆರಿಕ ಮಿಲಿಟರಿ ಪಡೆಗಳ ಉಪಸ್ಥಿತಿಗೆ ತಗಲುವ ವೆಚ್ಚವನ್ನು ಹಂಚಿಕೊಳ್ಳಲು ನೂತನ ಐದು ವರ್ಷಗಳ ಒಪ್ಪಂದಕ್ಕೆ ಶೀಘ್ರವೇ ಸಹಿ ಹಾಕಲಿವೆ ಎಂದು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಅಮೆರಿಕ ಮತ್ತು ಜಪಾನ್‍ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವಿನ ವಚ್ರ್ಯುವಲ್ ಸಮ್ಮೇಳನದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕೆನ್ ಉಭಯ ದೇಶಗಳು ಶಬ್ದಾತೀತ ವೇಗದ ಆಯುಧಗಳ ಬೆದರಿಕೆ ಎದುರಿಸುವ ಸಲುವಾಗಿ ರಕ್ಷಣಾ ಸಂಬಂಧಿತ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಸಹಕಾರವನ್ನು ಹೆಚ್ಚಿಸಲು ಇನ್ನೊಂದು ಒಪ್ಪಂದಕ್ಕೆ ಅಂಕಿತ ಹಾಕಲಿವೆ ಎಂದು ತಿಳಿಸಿದ್ದಾರೆ.
ಜಪಾನ್‍ನಲ್ಲಿ ಅಮೆರಿಕ ಪಡೆಗಳ ಉಪಸ್ಥಿತಿಯ ವೆಚ್ಚವನ್ನು ಜಂಟಿಯಾಗಿ ಭರಿಸಲು ಮಾಡಿಕೊಂಡಿರುವ ಹೊಸ ಒಪ್ಪಂದವು ಅಮೆರಿಕ-ಜಪಾನ್ ನಡುವಣ ಸಂಬಂಧಗಳಲ್ಲಿ ಭಾರೀ ಕಿರಿಕಿರಿಗೆ ಕಾರಣವಾಗಿರುವ ಟ್ರಂಪ್ ಅಧಿಕಾರಾವಧಿಯ ವಿವಾದಕ್ಕೆ ತೆರೆ ಎಳೆಯಲಿದೆ. ಹೊಸ ಒಪ್ಪಂದವು ಉಭಯ ದೇಶಗಳ ಪಡೆಗಳ ಸನ್ನದ್ಧತೆ ಮತ್ತು ಜಂಟಿಯಾಗಿ ಕಾರ್ಯಾಚರಣೆ ನಡೆಸುವ ಅವುಗಳ ಸಾಮಥ್ರ್ಯವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ ಎಂದು ಬ್ಲಿಂಕೆನ್ ನುಡಿದಿದ್ದಾರೆ.

Articles You Might Like

Share This Article