ಮಹಿಳೆಯ ಹೃದಯ ಬಗೆದು ಬೇಯಿಸಿ ತಿಂದಿದ್ದ ನರಭಕ್ಷಕನಿಗೆ ಜಿವಾವಧಿ ಶಿಕ್ಷೆ

Social Share

ವಾಷಿಂಗ್ಟನ್,ಮಾ.17- ಮಹಿಳೆಯೊಬ್ಬರನ್ನು ಕೊಂದು ಆಕೆಯ ಹೃದಯ ಕತ್ತರಿಸಿ ಹೊರ ತೆಗೆಯುವುದರ ಜತೆಗೆ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದಿದ್ದ ಭಯಾನಕ ವ್ಯಕ್ತಿಗೆ ಅಮೆರಿಕದ ಒಕ್ಲಹೋಮ ರಾಜ್ಯದಲ್ಲಿ ಜಿವಾವಧಿ ಶಿಕ್ಷೆ ವಿಧಿಸಲಾಗಿದೆ.

44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಜಿವಾವ ಶಿಕ್ಷೆಗೆ ಗುರಿಯಾಗಿರುವ ನರಹಂತಕ. ಈತ 2021 ರಲ್ಲಿ ಕೊಲೆ ಮಾಡಿ ಜೈಲು ಸೇರಿದ್ದ ಅಲ್ಲಿಂದ ಬಿಡುಗಡೆಯಾದ ನಂತರ ಆತ ಆಂಡ್ರಿಯಾ ಎಂಬಾಕೆಯ ಹತ್ಯೆ ಮಾಡಿ ಆಕೆಯ ಹೃದಯ ಹೊರ ತೆಗೆದಿದ್ದ.

ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಬೆಂಕಿ, 6 ಮಂದಿ ಸಾವು

ನಂತರ ಹೃದಯವನ್ನು ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಹೃದಯವನ್ನು ಅಲೂಗಡ್ಡೆಯೊಂದಿಗೆ ಬೇಯಿಸಿ ಊಟ ಮಾಡಿದ್ದ ಎಂದು ವರದಿಯಾಗಿದೆ.

ನಂತರ 67 ವರ್ಷದ ಲಿಯಾನ್ ಪೈ ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ ಅವರನ್ನು ಇರಿದು ಕೊಂದಿದ್ದ ಎನ್ನಲಾಗಿದೆ.

US, Man, Cuts, Out, Woman, Heart, Cooks, Family, Kills,

Articles You Might Like

Share This Article