ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ ಅಮೆರಿಕದ ಉನ್ನತಾಧಿಕಾರಿ

Social Share

ನವದೆಹಲಿ,ಮಾ.8- ಅಮೆರಿಕಾದ ಉನ್ನತಾಧಿಕಾರಿಯೊಬ್ಬರು ರಾಷ್ಟ್ರ ರಾಜಧಾನಿಯಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಖುಷಿಪಟ್ಟರು. ಭಾರತಕ್ಕೆ ಭೇಟಿ ನೀಡಿರುವ ಅಮೆರಿಕಾ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದದ ಹೋಳಿ ಸಂಭ್ರದಲ್ಲಿ ವಿದೇಶಾಂಗ ಸಚಿವ ಜೈ ಶಂಕರ್ ಹಾಗೂ ಕಿರಣ್ ರಿಜಿಜು ಅವರೊಂದಿಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಕೇಂದ್ರ ಸಚಿವರು ಹಾಗೂ ಅಮೆರಿಕ ಅಧಿಕಾರಿಗಳು ಪರಸ್ಪರ ಹೋಳಿ ಎರಚಿಕೊಂಡು ಕುಣಿದು ಕುಪ್ಪಳಿಸಿ ಡ್ರಮ್ ಬೀಟ್‍ಗೆ ತಕ್ಕಂತೆ ನೃತ್ಯ ಮಾಡಿ ಗಮನ ಸೆಳೆದರು.

ಈಶಾನ್ಯದಲ್ಲಿ ಬಿಜೆಪಿ ನಿದ್ದೆಗೆಡಿಸಿದ ತಿಪ್ರಾ ಮೋತಾ ಪಕ್ಷ

ಇಂಡೋ-ಯುಎಸ್ ವಾಣಿಜ್ಯ ಸಂವಾದದ ಫೋರಮ್‍ನಲ್ಲಿ ಭಾಗವಹಿಸಲು ರೈಮೊಂಡೋ ಅವರು ಭಾರತ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ, ಅವರು ಭಾರತ ಮತ್ತು ಯುಎಸ್ ನಡುವೆ ಹೊಸ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಕುರಿತಂತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಅಮೆರಿಕ -ಇಂಡಿಯಾ ಸಿಇಒ ಫೋರಂ ಅನ್ನು ಕಳೆದ ನವೆಂಬರ್‍ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಎಂಎಸ್ ರೈಮೊಂಡೋ ಅವರು ಪ್ರಾರಂಭಿಸಿದರು ಎಂದು ಯುಎಸ್ ವಾಣಿಜ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

#US, #Official, #Attends, #Holi, #RajnathSingh, #SJaishankar,

Articles You Might Like

Share This Article