ಭಾರತ-ಚೀನಾ ಗಡಿ ಸಂಘರ್ಷ ಕುರಿತು ಅಮೇರಿಕ ಪ್ರತಿಕ್ರಿಯೆ ಏನು ಗೊತ್ತೇ..?

Social Share

ವಾಷಿಂಗ್ಟನ್, ಡಿ .14 – ಗಡಿ ರೇಖೆಯನ್ನು ಗುರುತಿಸಲು ಭಾರತ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆಗೆ ಮಾರ್ಗ ಕಂಡುಕೊಳ್ಳಬೇಕು ಎಂದು ಆಮೆರಿಕ ಹೇಳಿದೆ. ಪ್ರಾದೇಶಿಕ ಹಕ್ಕುಗಳಿಗಾಗಿ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದೆ.

ಆದರೆ ಎರಡೂ ಕಡೆಯವರು ಘರ್ಷಣೆಯಿಂದ ಬೇಗನೆ ಹೊರಬಂದಂತೆ ತೋರುತ್ತಿರುವುದು ನಮಗೆ ಸಂತೋಷವಾಗಿದೆ, ಆದರು ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪ್ರೈಸ್‍ತಿಳಿಸಿದ್ದಾರೆ.

ಚಿಕನ್ ರೋಲ್ ಕೊಡದಿದ್ದಕ್ಕೆ ಹೊಟೇಲ್ ಮಾಲಿಕನ ಮನೆಗೆ ಬೆಂಕಿ

ವಿವಾದಿತ ಗಡಿಯನ್ನು ಗುರುತ್ತಿಸಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಾರ್ಗ ಬಳಸಿಕೊಳ್ಳಲು ನಾವು ಭಾರತ ಮತ್ತು ಚೀನಾವನ್ನು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದರು.

ರೋಹಿತ್‍ ಶರ್ಮಾ ಅನುಪಸ್ಥಿತಿ, ದ್ರಾವಿಡ್‍ಗೆ ತಗ್ಗಿದ ತಲೆನೋವು

ಭಾರತವು ವಾಸ್ತವವಾಗಿ ದ್ವಿಪಕ್ಷೀಯವಾಗಿ, ಕ್ವಾಡ್ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಅಮೆರಿಕಕ್ಕೆ ಪ್ರಮುಖ ಕಾರ್ಯತಂತ್ರದ ಪಾಲುದಾರ . ಆದ್ದರಿಂದ ನಾವು ಯಾವಾಗಲೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಕಟ ಸಂಪರ್ಕದಲ್ಲಿದ್ದೇವೆ, ಬೆಂಬಲ ನೀಡುತ್ತೇವೆ ಎಂದು ¨s ಪ್ರೈಸ್ ಹೇಳಿದರು.

US reacts, India-China clash, Tawang,

Articles You Might Like

Share This Article