ನಾಲ್ಕು ದಶಲಕ್ಷ ಡಾಲರ್ ಮೌಲ್ಯದ ಪ್ರಾಚೀನ ವಸ್ತುಗಳು ಭಾರತಕ್ಕೆ ಹಸ್ತಾಂತರ

Social Share

ನ್ಯೂಯಾರ್ಕ್,ಅ.19- ಭಾರತದಿಂದ ಕಳ್ಳಸಾಗಾಣಿಕೆ ಮಾಡಲಾಗಿದ್ದ ನಾಲ್ಕು ದಶಲಕ್ಷ ಡಾಲರ್ ಮೌಲ್ಯದ 307 ಪ್ರಾಚೀನ ವಸ್ತುಗಳನ್ನು ಮರಳಿ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಮೆರಿಕದ ಮಾನಂಟನ್ ಜಿಲ್ಲೆಯ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.

ಸುಮಾರು 15 ವರ್ಷಗಳ ತನಿಖೆಯಿಂದಾಗಿ ಭಾರತ, ಆಫ್ಘಾನಿಸ್ತಾನ, ಕಾಂಬೋಡಿಯ, ಇಂಡೋನೇಷ್ಯ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲಾಂಡ್ ಸೇರಿದಂತೆ ಇತರ ದೇಶಗಳಿಂದ ಕಳ್ಳ ಸಾಗಾಣಿಕೆಯಾಗಿದ್ದ 235ಕ್ಕೂ ಹೆಚ್ಚು ವಸ್ತುಗಳನ್ನು ತನಿಖಾಕಾಧಿರಿಗಳು ಸುಭಾಷ್ ಕಪೂರ್ ಎಂಬ ಕಲಾ ವಸ್ತುಗಳ ಡೀಲರ್‍ನಿಂದ ಜಪ್ತಿ ಮಾಡಿದ್ದಾರೆ.

ಇವುಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದ ವ್ಯಕ್ತಿಗಳಿಗೆ ಅವುಗಳ ಪ್ರಾಚೀನತ್ವ ಮತ್ತು ಧಾರ್ಮಿಕ ಇತಿಹಾಸಗಳ ಅರಿವಿರಲಿಲ್ಲ ಎಂದು ಹೇಳಲಾಗಿದೆ. ಭಾರತಕ್ಕೆ ಹಿಂದಿರುಗಿಸಲಾದ ಹಲವಾರು ವಸ್ತುಗಳಲ್ಲಿ ಅಮೂಲ್ಯ ಪರಿಕರಗಳು ಸೇರಿವೆ. 12-13ನೇ ಶತಮಾನಕ್ಕೆ ಸೇರಿದ ಸುಮಾರು 85 ಸಾವಿರ ಡಾಲರ್ ಮೌಲ್ಯದ ಕಮಾನು ಸೇರಿದೆ. ಈ ಅಮೂಲ್ಯ ವಸ್ತುಗಳು 2002ರಿಂದ ಸುಭಾಷ್ ಕಪೂರ್ ಅಕ್ರಮವಾಗಿ ಖರೀದಿಸಿದ್ದರು ಎಂದು ಹೇಳಲಾಗಿದೆ.

ಆರೋಪಿ ತಪ್ಪೋಪ್ಪಿಕೊಂಡಿದ್ದು, ಎಲ್ಲ ವಸ್ತುಗಳನ್ನು ಹಿಂದಿರುಗಿಸಿದ್ದಾನೆ. ಹೀಗಾಗಿ ಅವುಗಳನ್ನು ಅಮೆರಿಕ , ಭಾರತಕ್ಕೆ ವಾಪಸ್ ನೀಡಿದೆ.

Articles You Might Like

Share This Article