ಭಾರತದ ಜಿ20 ಅಧ್ಯಕ್ಷ ಸ್ಥಾನಕ್ಕೆ ಅಮೆರಿಕ ಬೆಂಬಲ

Social Share

ವಾಷಿಂಗ್ಟನ್, ಡಿ 1 – ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದ ಜಿ-20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಲು ಅಮೆರಿಕ ಎದುರು ನೋಡುತ್ತಿದೆ ಎಂದು ಶ್ವೇತಭವನ ತಿಳಿಸಿದೆ.

ಇಂಡೋನೇಷ್ಯಾ ಬಾಲಿಯಲ್ಲಿ ನಡೆದ ಎರಡು ದಿನಗಳ ಜಿ-20 ಶೃಂಗಸಭೆಯ ಕೊನೆಯಲ್ಲಿ ಪ್ರಭಾವಿ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಅದರಂತೆ ಭಾರತವು ಇಂದು ಔಪಚಾರಿಕವಾಗಿ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸುವುದು ಸೇರಿದಂತೆ ಚೇತರಿಸಿಕೊಳ್ಳುವ ಜಾಗತಿಕ ಆರ್ಥಿಕತೆಯನ್ನು ನಿರ್ಮಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದ ಜಿ 20 ಅಧ್ಯಕ್ಷೀಯ ಸ್ಥಾನವನ್ನು ಬೆಂಬಲಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ-ಪಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಮರಾಠಿ ಪುಂಡರಿಂದ ಹಲ್ಲೆ

ಮುಂದಿನ ವರ್ಷ ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಅವರ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಇದರ ನಡುವೆ ಮುಂದಿನ ಜಿ-20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ ಹೊಸ ಅಲೆ ನೋಡುತ್ತಿರುವುದಾಗಿ ಹೇಳಿದ್ದಾರೆ.

ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ಧರ್ಮ ದಂಗಲ್

ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಶಕ್ಕಿಯುತ ವೇದಿಕೆಯಾಗಿದೆ ,ಜಗ್ಗತ್ತು ಮತ್ತೊಮ್ಮೆ ಪ್ರಗತಿಯಲಯಕ್ಕೆ ಮರಳುವ ವಿಶ್ವಾಸ ಹೊಂದಲಾಗಿದೆ.

US, Looking, Forward, Supporting, India, G20,

Articles You Might Like

Share This Article