ಟ್ರಂಪ್ ಸ್ವಾಗತಕ್ಕೆ ಸಜ್ಜಗೊಳ್ಳುತ್ತಿರುವ ಅಹಮಾದಾಬಾದ್

ಅಹಮದಾಬಾದ್,ಫೆ.18- ಮುಂದಿನ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣನನ್ನು ಸ್ವಾಗತಿಸಲು ಅಹಮದಾಬಾದ್‍ನ ಮೊಟೆರಾ ಕ್ರೀಡಾಂಗಣದಲ್ಲಿ ಸಮಾರೋಪಾದಿಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಅಹದಾಬಾದ್‍ನ ಅತಿದೊಡ್ಡ ಕ್ರೀಡಾಂಣಗಳಲ್ಲಿ ಮೊಟೆರಾ ಕ್ರೀಡಾಂಗಣವೂ ಒಂದಾಗಿದ್ದು, ಅಮೆರಿಕ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಈಗಿನಿಂದಲೇ ಕ್ರೀಡಾಂಗಣವನ್ನು ಸ್ವಚ್ಚಗೊಳಿಸಿ,ಶೃಂಗರಿಸುವ ಕಾರ್ಯವೂ ಭರದಿಂದ ಸಾಗಿದೆ.

ಫೆ.24ರಂದು ಭಾರತಕ್ಕೆ ತಮ್ಮ ಮೊದಲ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮಾಬಾದ್‍ನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಪತ್ನಿ ಮೆಲೆನಿಯಾ ಟ್ರಂಪ್ ಅವರೊಂದಿಗೆ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಟ್ರಂಪ್ ಅವರನ್ನು ಸ್ವಾಗತಿಸಲು ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಟ್ರಂಪ್‍ರನ್ನು ಹುರಿದುಂಬಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶಗೊಳ್ಳುವ ಸಾಧ್ಯತೆ ಇದೆ.

Sri Raghav

Admin