ಉಕ್ರೇನ್ ಗೆ 725 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಶಸ್ತ್ರಾಸ್ತ್ರ ರವಾನೆ

Social Share

ವಾಷಿಂಗ್ಟನ್,ಅ.15- ರಷ್ಯಾ ಆಕ್ರಮಣದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉಕ್ರೇನ್ಗೆ ಅಮೆರಿಕ 725 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರವಾನೆ ಮಾಡಿದೆ.

ಕಳೆದ 8 ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಕಳೆದ ವಾರ ಪರಿಸ್ಥಿತಿ ಬಿಗಡಾಯಿಸಿತ್ತು. ವಾರಾಂತ್ಯದಲ್ಲಿ ರಷ್ಯಾ-ಕೆಮೆರಿಯನ್ ಸಂಪರ್ಕದ ಸೇತುವೆಯನ್ನು ಸೋಟಿಸಲಾಗಿತ್ತು. ಇದಕ್ಕೆ ಉಕ್ರೇನ್ನ ಸೇನೆಯೇ ಕಾರಣ ಎಂದು ಭಾವಿಸಿದ್ದ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್, ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಲು ಆದೇಶಿಸಿದರು.

ಅದರ ಪ್ರಕಾರ ಎರಡು ದಿನಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳು ಉಕ್ರೇನ್ ರಾಜಧಾನಿ ಕ್ಯೀವ್ ಸೇರಿದಂತೆ ಹಲವು ಭಾಗಗಳಿಗೆ ಅಪ್ಪಳಿಸಿದ್ದವು. ಡ್ರೋಣ್ಗಳ ದಾಳಿಯು ವಿಪರೀತವಾಗಿ ನೂರಾರು ನಾಗರಿಕರ ಹತ್ಯೆಯಾಯಿತು.

ಆ ವೇಳೆ ಯೂರೋಪಿಯನ್ ಒಕ್ಕೂಟದ ಬೆಂಬಲ ಯಾಚಿಸಿದ್ದ ಉಕ್ರೇನ್ ಅಧ್ಕಕ್ಷ ವೋಡ್ಲಿಮಿರ್ ಜೆಲೆನ್ಸ್ಕಿ ತಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚಿನ ಸಶಸ್ತ್ರಾಗಳನ್ನು ನೀಡುವಂತೆ ಮನವಿ ಮಾಡಿದ್ದರು. ಅದರ ಭಾಗವಾಗಿ ಅಮೆರಿಕ 725 ಮಿಲಿಯನ್ ಡಾಲರ್ ಮೌಲ್ಯದ ಸಶಸ್ತ್ರಾಗಳನ್ನು ಮತ್ತು ಯುದ್ಧ ಸಲಕರಣೆಗಳನ್ನು ಉಕ್ರೇನ್ಗೆ ರವಾನಿಸಿದೆ.

ಉಕ್ರೇನ್ ತನ್ನ ರಕ್ಷಣೆಗಾಗಿ ಹೋರಾಡುವ ಎಲ್ಲ ಹಕ್ಕುಗಳನ್ನು ಹೊಂದಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದು, ಈಗ ರವಾನೆ ಮಾಡುತ್ತಿರು ಸಶಸ್ತ್ರಗಳಲ್ಲಿ ಹೊಸದಾಗಿ ಏನೂ ಇಲ್ಲ. ರವಾನೆ ಮಾಡಿರುವುದರಲ್ಲಿ ರಾಕೆಟ್ ಉಡಾವಣಾ ವ್ಯವಸ್ಥೆಗಳು ಸೇರಿವೆ ಎಂದರು.

ನಾಟೋ ರಾಷ್ಟ್ರಗಳು ಮತ್ತಷ್ಟು ನೆರವು ನೀಡುವ ಸಾಧ್ಯತೆ ಇದೆ. ರಷ್ಯಾ ಉಕ್ರೇನ್ನ ಶಕ್ತಿ ಉತ್ಪಾದನೆ ಹಾಗೂ ಇಂಧನ ತೈಲಗಾರಗಳ ಮೇಲೆ ದಾಳಿ ನಡೆಸುವ ಮೂಲಕ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತಾನು ಹೆಚ್ಚು ಲಾಭ ಮಾಡಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಜೆಲೆನ್ಸ್ಕಿ ಆರೋಪಿಸಿದ್ದರು. ಹೀಗಾಗಿ ಅಮೆರಿಕ ಹಾಗೂ ನಾಟೋ ಪಡೆಗಳು ಉಕ್ರೇನ್ ಬೆಂಬಲಕ್ಕೆ ಮತ್ತಷ್ಟು ಆಸಕ್ತಿ ತೋರಿಸಿವೆ.

Articles You Might Like

Share This Article