ಮತ್ತೊಂದು ಬಲೂನ್ ಹೊಡೆದುರುಳಿಸಿದ ಅಮೆರಿಕ

Social Share

ವಾಷಿಂಗ್‍ಟನ್, ಫೆ.12- ಕೆನಡಾ ಮತ್ತು ಅಮೆರಿಕದ ಗಡಿ ವಾಯುಪ್ರದೇಶದ ಮೇಲೆ ಹಾರಾಡುತ್ತಿದ್ದ ವಸ್ತುವನ್ನು ಅಮೆರಿಕದ ಯುದ್ಧವಿಮಾನ ಹೊಡೆದುರುಳಿಸಿ ನಾಶಪಡಿಸಿದೆ. ಕೆನಡಾದ ಯುಕೋನ್ ಪ್ರಾಂತ್ಯದ ಆಗಸದ ಮೇಲೆ ಹಾರುತ್ತಿದ್ದ ವಸ್ತುವೊಂದನ್ನು ಗಮನಿಸಿ ನಿಖರವಾಗಿ ಕಾರ್ಯಾಚರಣೆ ನಡೆಸಿ ನಾಶಗೊಳಿಸಲಾಗಿದೆ.

ಚೀನಾದ ಬಲೂನ್ ಸೇರಿ ಮೂರು ಆಕಾಶಕಾಯ ವಸ್ತುಗಳನ್ನು ಹೊಡೆದುರಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಯುಕೋನ್‍ನ ವಾಯುಪ್ರದೇಶದಲ್ಲಿ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಈ ವಸ್ತು ಹಾರಾಡುತ್ತಿತ್ತು.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇದನ್ನು ಹೊಡೆದುರುಳಿಸಲು ಆದೇಶ ನೀಡಿದ ಬಳಿಕ ಕೆನಡಾ ಮತ್ತು ಅಮೆರಿಕದ ಯುದ್ಧವಿಮಾನಗಳು ಕ್ಷಿಪ್ರ ಕಾರ್ಯಾಚರಣೆಗೆ ಇಳಿದು ಅಮೆರಿಕದ ಎಫ್-22 ಸಮರ ವಿಮಾನ ಈ ವಸ್ತುವನ್ನು ನಾಶ ಮಾಡಿತು ಎನ್ನಲಾಗಿದೆ.

ನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ಕೆನಡಾದ ವಾಯುಪ್ರದೇಶ ನಿಯಮಗಳನ್ನು ಮುರಿದಿದ್ದರಿಂದ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತಂದಿದ್ದರಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಕೆನಡಾ ಹೇಳಿದೆ. ಸದ್ಯ ಈ ಅಪರಿಚಿತ ವಸ್ತುವನ್ನು ಅವಶೇಷಗಳನ್ನು ಪರಿಶೀಲಿಸಲಾಗುತ್ತಿದೆ.

ಕ್ರಿಮಿಗಳನ್ನು ಬೆಳಸಿ ಬುಡಕ್ಕೆ ಬಾಂಬ್ ಇಟ್ಟುಕೊಂಡ ‘ಪಾಪಿ’ಸ್ತಾನ

ಕಳೆದ ವಾರ ಚೀನಾದ ಗೂಢಚರ್ಯೆ ಬಲೂನು ಎನ್ನಲಾದ ವಸ್ತುವನ್ನು ಅಮೆರಿಕದ ಹೊಡೆದುರುಳಿಸಿತ್ತು ಅಮೆರಿಕದ ಸೂಕ್ಷ್ಮ ಸ್ಥಳಗಳ ಮೇಲೆ ಹಾದು ಹೋಗಿತ್ತು. ನಾಗರಿಕರ ಪ್ರದೇಶದ ಮೇಲೆ ಬಲೂನು ಹೊಡೆದರೆ ಜನರಿಗೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಇದು ಸಾಗರ ಪ್ರದೇಶದ ಮೇಲೆ ಬಂದ ಬಳಿಕ ನಾಶ ಮಾಡಲಾಯಿತು ಎಂದು ಹೇಳಲಾಗಿದೆ.

US, shoots, down, unidentified, object, Canada,

Articles You Might Like

Share This Article