ಚೀನಾದ ಆಕ್ರಮಣಶೀಲತೆ: ಭಾರತದ ಪರ ಅಮೆರಿಕ ನಿಲುವು

Social Share

ವಾಷಿಂಗ್ಟನ್,ಫೆ.4- ಚೀನಾದ ಆಕ್ರಮಣಶೀಲತೆಯ ವಿರುದ್ಧ ಭಾರತದ ಜೊತೆ ನಿಲ್ಲುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ. 2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ದಾಳಿ ನಡೆಸಿದ ಚೀನೀ ಸೇನೆಯ ಭಾಗವಾಗಿದ್ದ ಓರ್ವ ಪಿಎಲ್‍ಎ( ಪೀ ಪಲ್ಸ್ ಲಿಬರೇಷನ್ ಆರ್ಮಿ)ಯ ಸೈನಿಕನೊಬ್ಬನನ್ನು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‍ನ ಜ್ಯೋತಿಧಾರಕನನ್ನಾಗಿ ಆಯ್ಕೆ ಮಾಡಿರುವುದನ್ನು ಅಮೆರಿಕದ ಅನೇಕ ನೀತಿ ನಿರೂಪಕರು ಖಂಡಿಸಿದ್ದಾರೆ.
ಭಾರತ-ಚೀನಾ ಗಡಿವಿವಾದಕ್ಕೆ ಸಂಬಂಧಿಸಿದಂತೆ, ನಾವು ನೇರ ಮಾತುಕತೆ ಮತ್ತು ವಿವಾದದ ಶಾಂತಿಯುತ ಇತ್ಯರ್ಥಕ್ಕೆ ಬೆಂಬಲ ಮುಂದುವರೆಸುತ್ತೇವೆ ಎಂದು ವಿದೇಶಾಂಗ ಇಲಾಕೆ ವಕ್ತಾರ ನೆಡ್‍ಪ್ರೈಸ್ ನಿನ್ನೆ ತಮ್ಮ ದೈನಿಕ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತನ್ನ ನೆರೆಹೊರೆಯನ್ನು ಬೆದರಿಸುವ ಚೀನಾದ ಪ್ರವೃತ್ತಿಯ ವಿರುದ್ಧ ನಾವು ಈ ಮೊದಲೇ ಧ್ವನಿ ಎತ್ತಿದ್ದೇವೆ. ಯಾವಾಗಲೂ ನಾವು ಮಾಡುವಂತೆ ನಮ್ಮ ಸ್ನೇಹಿತರ ಪರ ಇರುತ್ತೇವೆ. ನಾವು ನಮ್ಮ ಸಮೃದ್ಧಿ, ಭದ್ರತೆ ಮತ್ತು ಮೌಲ್ಯಗಳನ್ನು ಇಂಡೋಫೆಸಿಫಿಕ್‍ನಲ್ಲಿ ಹಂಚಿಕೊಳ್ಳಲು ಸಹಭಾಗಿಗಳು ಮತ್ತು ಮಿತ್ರರೊಂದಿಗೆ ನಿಲ್ಲುತ್ತೇವೆ ಎಂದು ಪ್ರೈಸ್ ಪ್ರತಿಪಾದಿಸಿದರು.

Articles You Might Like

Share This Article