ವಾಷಿಂಗಟ್ಟನ್, ಫೆ.26- ಯುದ್ಧ ಪೀಡಿತ ಉಕ್ರೇನ್‍ನ ಭದ್ರತಾ ಸೌಲಭ್ಯಗಳಿಗೆ ಅಮೆರಿಕಾ ಸುಮಾರು 600 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ. ಅಮೆರಿಕಾದ ಅಧ್ಯಕ್ಷ ಜೋ ಬಿಡೇನ್, ಉಕ್ರೇನ್ ಅಗತ್ಯ ರಕ್ಷಣಾ ಸಾಮಾಗ್ರಿಗಳು ಮತ್ತು ಸೇನಾ ತರಬೇತಿ, ಶಿಕ್ಷಣಕ್ಕೆ 350 ಮಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದೆ.
250 ಮಿಲಿಯನ್ ಡಾಲರ್ ನೆರವನ್ನು ಅಮೆರಿಕಾದ ಕಾರ್ಯದರ್ಶಿಗಳು ಘೋಷಿಸಿದ್ದಾರೆ. ಇದು ಅಮೆರಿಕಾದ ಭದ್ರತೆ ವಿಷಯವಾಗಿ ಮುಖ್ಯವಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಅಮೆರಿಕಾದಿಂದ ಉಕ್ರೇನ್‍ಗೆ 60 ಮಿಲಿಯನ್ ಡಾಲರ್ ನೆರವು ಸಿಕ್ಕಂತಾಗಿದೆ.
ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕಿವ್‍ಗೆ ಸಮೀಪಿಸಿರುವುದರಿಂದ ಯುದ್ಧ ಪೀಡಿತ ಪ್ರದೇಶದಲ್ಲಿ ಭಾರೀ ಒತ್ತಡ ಸೃಷ್ಟಿಯಾಗಿದೆ. ರಷ್ಯಾ ಪಡೆಗಳು ಕಿವ್ ನ ಉತ್ತರ ಭಾಗಕ್ಕಿರುವ ಒಬ್ಲೋನ್ ಜಿಲ್ಲೆಯತ್ತಲೂ ಮುನ್ನುಗ್ಗುತ್ತಿವೆ. ದೇಶದ ಕೇಂದ್ರ ಭಾಗದಿಂದ ಕೆಲವೇ ಕಿಲೋ ಮೀಟರ್‍ಗಳ ಅಂತರದಲ್ಲಿ ರಷ್ಯಾ ಸೇನೆಯಿದೆ.
ಚೆರ್ನಿವ್ ನಗರಕ್ಕೆ ರಷ್ಯಾ ಶಸ್ತ್ರಸ್ತ್ರ ಪಡೆಗಳು ದಿಗ್ಭಂದನ ವಿಸಿವೆ. ಕಿವ್ ನ ಹೊರ ಹೊಲಯದಲ್ಲಿರುವ ಗೊಸ್ಟ್ ಮೆಲ್ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳು ಸುರಕ್ಷಿತವಾಗಿ ಇಳಿದು ಕಾರ್ಯಾಚರಿಸಿವೆ. ಹೀಗಾಗಿ ಅಮೆರಿಕಾದ ನೆರವು ಉಕ್ರೇನ್ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ.
ನ್ಯಾಟೋ ಪಡೆಗಳು ಉಕ್ರೇನ್ ಗೆ ಆಗಮಿಸಿ ರಷ್ಯಾ ಪಡೆಗಳೊಂದಿಗೆ ಸೆಣೆಸಾಟಕ್ಕೆ ಕೈಜೊಡಿಸಬೇಕು ಎಂಬುದು ಉಕ್ರೇನ್ ಅಧ್ಯಕ್ಷರ ಅಂಬೋಣವಾಗಿದೆ. ಆದರೆ ಈವರೆಗೂ ಈ ನಿಟ್ಟಿನಲ್ಲಿ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ನ್ಯಾಟೋ ಪಡೆಯ ಹಿರಿಯಣ್ಣ ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ಅಂತರಾಷ್ಟ್ರೀಯ ಸಮುದಾಯ ಭಾದ್ಯಸ್ಥ ದೇಶಗಳ ಜೊತೆ ಸಮಾಲೋಚನೆ ನಡೆಸುತ್ತಿರುವುದಾಗಿ ಹೇಳುತ್ತಿದ್ದಾರೆ. ಈ ನಡುವೆ ವಿಶ್ವಸಂಸ್ಥೆ ಕೂಡ ಉಕ್ರೇನ್‍ಗೆ 20 ಮಿಲಿಯನ್ ಡಾಲರ್ ತುರ್ತು ನೆರವನ್ನು ಘೋಷಣೆ ಮಾಡಿದೆ.
