ವಾಷಿಂಗ್ಟನ್,ಫೆ.9- ಭಾರತದೊಂದಿಗೆ ಕೇವಲ ಭದ್ರತಾ ಪಾಲುದಾರರಾಗಿ ಮಾತ್ರ ಮುಂದುವರೆಯುವುದಿಲ್ಲ ಬದಲಿಗೆ ಆ ದೇಶದ ಅಸಾಧಾರಣ ಬೆಳವಣಿಗೆಗಳಲ್ಲೂ ಅಮೆರಿಕ ಪ್ರಧಾನ ಪಾಲುದಾರನಾಗಿ ಇರಲು ಬಯಸುತ್ತದೆ ಎಂದು ಪೆಂಟಗಾನ್ ಹೇಳಿದೆ.
ಭಾರತ ಮತ್ತು ಅಮೆರಿಕ ಉಪಕ್ರಮದ ನಿರ್ಣಾಯಕ ತಂತ್ರಜ್ಞಾನ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೆಂಟಗಾನ್ ಪ್ರೆಸ್ ಸೆಕ್ರೆಟರಿ ಬ್ರಿಗ್ ಜನರಲ್ ಪ್ಯಾಟ್ರಿಕ್ ರೈಡರ್ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಅಮೆರಿಕ ಸರ್ಕಾರ, ಉದ್ಯಮ ಮತ್ತು ಇಲ್ಲಿನ ವಿವಿಗಳಲ್ಲಿ ಭಾರತೀಯರ ಉನ್ನತಮಟ್ಟದ ಭಾಗವಹಿಸುವಿಕೆ ಅಭೂತಪೂರ್ವವಾಗಿದೆ ಹೀಗಾಗಿ ನಾವು ಭಾರತದೊಂದಿಗೆ ಕೇವಲ ಭದ್ರತಾ ಪಾಲುದಾರರಾಗಿ ಇರುವ ಬದಲು ಆ ದೇಶದ ಪ್ರಮುಖ ಪಾಲುದಾರರಾಗಿ ಮುಂದುವರೆಯಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ
ವೈಟ್ ಹೌಸ್ ನೇತೃತ್ವದ ಯುನೈಟೆಡ್ ಸ್ಟೇಟ್ಸï-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ನ ಭಾಗವಾಗಿ ಇತರ ಯುಎಸ್ ಏಜೆನ್ಸಿಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಲು ರಕ್ಷಣಾ ಇಲಾಖೆ ಉತ್ಸುಕವಾಗಿದೆ ಎಂದು ಅವರು ಹೇಳಿದರು.
ಭಾರತ ಮಾನವೀಯತೆ ಪರ ಸದಾ ನಿಲ್ಲುತ್ತದೆ: ಜೈಶಂಕರ್
ಹೊಸ ಉಪಕ್ರಮಗಳು ಮುಂದೆ ಸಾಗುತ್ತಿರುವಂತೆ ಭಾರತದೊಂದಿಗೆ ನಮ್ಮ ರಕ್ಷಣಾ ಸಹಕಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ. ಈ ಉಪಕ್ರಮಗಳು ರಕ್ಷಣಾ ಮಾರಾಟದಿಂದ ರಕ್ಷಣಾ ಜಂಟಿ ಉತ್ಪಾದನೆ ಮತ್ತು ಅಭಿವೃದ್ಧಿಗೆ ಬದಲಾವಣೆಯನ್ನು ವೇಗಗೊಳಿಸುತ್ತದೆ ಮತ್ತು ಯುಎಸ್ ಮತ್ತು ಭಾರತೀಯ ರಕ್ಷಣಾ ಸಂಸ್ಥೆಗಳ ನಡುವೆ ಏಕೀಕರಣವನ್ನು ಉತ್ತೇಜಿಸುತ್ತದೆ ಎಂದು ರೈಡರ್ ಹೇಳಿದರು.
US, wants, India, premier partner, extraordinary, Pentagon,