ಇಸ್ಲಾಮಾಬಾದ್,ಡಿ.25- ಪಾಕಿಸ್ತಾನದ ಗಡಿ ಭಾಗಗಳ ಭದ್ರತೆ ಗಾಗಿ ಅಮೆರಿಕ ವಿಶೇಷ ಅನುದಾನ ನೀಡಲು ಆಸಕ್ತಿ ತೋರಿಸಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾಲ್ ಭುಟ್ಟು ಡಿ.14ರಿಂದ 21ರ ನಡುವೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಲ್ಲಿ ಸೆನೆಟರ್ಗಳು ಸೇರಿದಂತೆ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ.
ಈ ಹಂತದಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರು ಹಿರಿಯ ಸೆನೆಟರ್ಗಳು , 2023ರ ಬಜೆಟ್ನಲ್ಲಿ ಪಾಕಿಸ್ತಾನದ ಗಡಿ ಭದ್ರತೆಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಫ್ಘಾನಿಸ್ತಾನದಿಂದ ಎದುರಾಗಬಹುದಾದ ಅಪಾಯಗಳಿಂದ ರಕ್ಷಿಸಿಕೊಳ್ಳಲು ಪಾಕಿಸ್ತಾನದ ಗಡಿ ರಕ್ಷಣೆಗೆ ಅಮೆರಿಕ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು-ಪುದುಚೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆ
ಮತ್ತೊಂದೆಡೆ ಅಫ್ಘಾನಿಸ್ತಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಉದ್ಯೋಗಕ್ಕೆ ಮಹಿಳೆಯರನ್ನು ನೇಮಿಸುವ ಕ್ರಮವನ್ನು ತಾಲಿಬಾನಿಗಳು ನಿಷೇಸಿರುವುದನ್ನು ಅಮೆರಿಕ ಖಂಡಿಸಿದೆ. ಇದರಿಂದ ಲಕ್ಷಾಂತರ ಜನರ ಜೀವರಕ್ಷಣೆ ಮತ್ತು ಸುಸ್ಥಿರ ಬದುಕಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
#US, #willing, #provide, #Pakistan, #funds, #enhance, #bordersecurity,