ತಾಯಿ ಶವವನ್ನು 2 ವರ್ಷಗಳಿಂದ ಫ್ರೀಜರ್​ನಲ್ಲಿಟ್ಟಿದ್ದ ಮಹಿಳೆ

Social Share

ವಾಷಿಂಗ್ಟನ್,ಫೆ.4-ಅಮೆರಿಕದ ಮಹಿಳೆಯೊಬ್ಬರು ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯ ದೇಹವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರುವ ಘಟನೆ ಬೆಳಕಿಗೆ ಬಂದಿದೆ. 96 ವರ್ಷದ ತನ್ನ ತಾಯಿಯ ಸಾವನ್ನು ಕಳೆದ ಎರಡು ವರ್ಷಗಳಿಂದ ಮರೆಮಾಚಿಕೊಂಡು ಬಂದಿದ್ದ ಇವಾ ಬ್ರಾಚರ್ ಎಂಬ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಚಿಕಾಗೋದಲ್ಲಿನ ಎರಡು ಅಂತಸ್ತಿನ ಅಪಾಟ್ರ್ಮೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರಿಸಲಾದ ಡೀಪ್ ಫ್ರೀಜರ್‍ನಲ್ಲಿ ಮೃತಪಟ್ಟ ತಾಯಿ ರೆಜಿನಾ ಮಿಚಾಲ್ಸ್ಕಿಯ ಅವರ ಶವವನ್ನು ಆಕೆ ಕಾಪಿಟ್ಟುಕೊಂಡು ಬಂದಿದ್ದರು.

ತಾಯಿಯ ಶವವಿಡಲು ಆಕೆ ತಂದಿದ್ದ ಫ್ರೀಜರ್ ಅನು ಆಕೆ 2021ರಲ್ಲಿ ಖರೀದಿಸಿರುವುದು ಪತ್ತೆಯಾಗಿರುವ ಹಿನ್ನಲೆಯಲ್ಲಿ ಆಕೆ ಎರಡು ವರ್ಷಗಳಿಂದ ತನ್ನ ತಾಯಿಯ ಶವವನ್ನು ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿರಬಹುದು ಎಂದು ಶಂಕಿಸಲಾಗಿದೆ.

ಮರಣದಂಡನೆ ಆರೋಪದಿಂದ ಬಚಾವಾಗಿ ಕೊಲೆ ಕೇಸ್‍ನಲ್ಲಿ ಸಿಕ್ಕಿಬಿದ್ದ..!

ಮೃತಪಟ್ಟ ತಾಯಿಯ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದರಿಂದ ಆಕೆ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮಗಳೊಂದಿಗೆ ಗೂಡ್ಸ್ ರೈಲಿಗೆ ತಲೆ ಕೊಟ್ಟ ತಾಯಿ

ಯಾರ ಬಗ್ಗೆಯೂ ಕನಿಕರವಿಲ್ಲದ ನನ್ನ ತಾಯಿ ಆಕೆಯ ತಾಯಿಯ ಶವವನ್ನು ಎರಡು ವರ್ಷಗಳಿಂದ ಏಕೆ ಫ್ರೀಜರ್‍ನಲ್ಲಿಟ್ಟುಕೊಂಡು ಬಂದಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬ್ರಾಚರ್ ಪುತ್ರಿ ಆಭಿಪ್ರಾಯಪಟ್ಟಿದ್ದಾರೆ.

US, Woman, Charged, Hiding, Mother, Body, Freezer, 2 Years,

Articles You Might Like

Share This Article