ನಗ್ನ ವಿಡಿಯೋ ಮಾಡಿದ್ದ ಹೋಟೆಲ್’ಗೆ 707 ಕೋಟಿ ರೂ. ಶಾಕ್ ಕೊಟ್ಟ ಮಹಿಳೆ..!

Women--01

ನ್ಯೂಯಾರ್ಕ್, ಡಿ.7- ಹೊಟೇಲ್ ಕೊಠಡಿಯಲ್ಲಿ ತಾನು ನಗ್ನವಾಗಿ ಸ್ನಾನ ಮಾಡುತ್ತಿದ್ದುದ್ದನ್ನು ರಹಸ್ಯ ಕ್ಯಾಮೆರಾ ಮೂಲಕ ಸೆರೆ ಹಿಡಿದು ಈ ವಿಡಿಯೋವನ್ನು ಅಶ್ಲೀಲ ವೆಬ್‍ಸೈಟ್‍ಗೆ ಅಪ್ ಲೋಡ್ ಮಾಡಿದ್ದರ ವಿರುದ್ಧ ಸಮರ ಸಾರಿರುವ ಮಹಿಳೆ ತನಗೆ 707 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಮೆರಿಕದ ಚಿಕಾಗೋದ ಹಿಲ್ಟನ್ ಹೊಟೇಲ್‍ನ ಸಿಬ್ಬಂದಿಗಳೇ ಈ ಕೃತ್ಯ ಎಸಗಿದ್ದರು. ಅಲ್ಲದೆ, ತನ್ನ ನಗ್ನ ದೇಹದ ವಿಡಿಯೋವನ್ನು ಅಶ್ಲೀಲ ವೆಬ್ ಸೈಟ್‍ಗೆ ಅಪ್‍ಲೋಡ್ ಮಾಡಿದ್ದು, ಇದರಿಂದ ಮಹಿಳೆ ಹಿಲ್ಟನ್ ಹೊಟೇಲ್‍ನವರು 100 ಮಿಲಿಯನ್ ಡಾಲರ್ (ಸುಮಾರು 707 ಕೋಟಿ ರೂ.) ಪರಿಹಾರ ನೀಡಬೇಕೆಂದು ಹೋಟೆಲ್‍ನವರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ತಮ್ಮ ಹೊಟೇಲ್‍ಗೆ ಬರುವ ಅತಿಥಿಗಳ ಖಾಸಗೀತನವನ್ನು ಕಾಪಾಡದೆ ರಹಸ್ಯ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವಾಗಿದೆ. ಅಲ್ಲದೆ, ಪರಿಚಯಸ್ಥರ ಮುಂದೆ ಆಗಿರುವ ಅವಮಾನಕ್ಕೆ 707 ಕೋಟಿ ರೂ. ಪರಿಹಾರ ನೀಡಲೇಬೇಕು ಎಂದು ಮಹಿಳೆ ವಾದಿಸಿದ್ದಾರೆ.

ಮಹಿಳೆ 2015ರಲ್ಲಿ ಹಿಲ್ಟನ್ ಹೊಟೇಲ್‍ನ ರೂಮ್‍ನಲ್ಲಿ ಉಳಿದುಕೊಂಡಿದ್ದರು. ಆಗ ತನ್ನ ನಗ್ನ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಲಾಗಿತ್ತು. ಆದರೆ, ಈ ವಿಷಯ ಮಹಿಳೆಗೆ ಈ ವರ್ಷ ತಿಳಿದಿತ್ತು. ಮಹಿಳೆಯ ಸ್ನೇಹಿತನೊಬ್ಬ ಈ ವಿಡಿಯೋ ನೋಡಿ ಅದನ್ನು ಆಕೆಗೆ ಕಳುಹಿಸಿದ್ದ. ಇದಾದ ನಂತರ ಆಕೆ ಹೊಟೇಲ್ ವಿರುದ್ಧ ದೂರು ದಾಖಲಿಸಿದ್ದಾರೆ.

Sri Raghav

Admin