ಲಖ್ನೋ,ಫೆ.27- ಉತ್ತರಪ್ರದೇಶ ಲೋಕಸಭೆಗೆ 5ನೇ ಹಂತದ ಮತದಾನ ಇಂದು ನಡೆಯಿತು. 12 ಜಿಲ್ಲೆಗಳಲ್ಲಿ ಪ್ರಯಾಗ್‍ರಾಜ್, ರಾಯ್‍ಬರೇಲಿ, ಅಮೇಥಿ, ಅಯೋಧ್ಯ ಸೇರಿದಂತೆ ಪ್ರಮುಖ 61 ಕ್ಷೇತ್ರಗಳಲ್ಲಿ 692 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿದ್ದು , 2.24 ಕೋಟಿ ಮತದಾರರು ಮತ ಚಲಾವಣೆ ಮಾಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡ ಮತದಾನ ನೀರಸವಾಗಿತ್ತು. ಶಾಂತಿಯುತ ಹಾಗೂ ನಿರ್ಭೀತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿರುವುದಾಗಿ ಮುಖ ಚುನಾವಣಾಕಾರಿ ಬಿ.ಡಿ.ರಾಮ್ ತಿವಾರಿ ಲಖ್ನೋದಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್‍ಮೌರ್ಯ, ಪ್ರಯಾಗ್‍ರಾಜ್ ಮತಗಟ್ಟೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮತ ಚಲಾವಣೆ ಮಾಡಿದರು. ಅವರು ಸಿರಾಥ್ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆ ಮಾಡಿದ್ದು, ಹೆಚ್ಚು ಜನ ಮತದಾನ ಮಾಡಬೇಕು, ಬಿಜೆಪಿಗೆ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ಅಮೇಥಿ ಕ್ಷೇತ್ರದ ಅಭ್ಯರ್ಥಿ ಮಹಾರಾಜಿ ದೇವಿ ಅವರು ಇಂದು ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು. ಪ್ರಕರಣವೊಂದರಲ್ಲಿ ಇವರ ಪತಿ ಹಾಗೂ ಮಾಜಿ ಸಚಿವ ಜಿ.ಪ್ರಜಾಪತಿ ಜೀವಾವ ಶಿಕ್ಷೆ ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ ಅವರು ಬಾರಬಂಕಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ, ಬಿಜೆಪಿಯವರಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕಾಗಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವರು ಪದೇ ಪದೇ ರಾಜ್ಯದಲ್ಲಿ ಪ್ರಚಾರ ಮಾಡಿದ್ದಾರೆ. ಈಗಲೂ ಬಿಜೆಪಿಗೆ ಗೆಲ್ಲುವ ಆತ್ಮವಿಶ್ವಾಸವಿಲ್ಲ. ಕಾಂಗ್ರೆಸ್ ಅತ್ಯಕ ಸ್ಥಾನ ಗೆದ್ದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಭದ್ರತೆಗಾಗಿ ಇಂಡೋ ಟಿಬೆಟಿಯನ್ ಗಡಿಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟೆಗಳಲ್ಲೂ ಬಿಗಿಬಂದೋಬಸ್ತ್ ಆಯೋಜಿಸಲಾಗಿದೆ. ಜನ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಆಶಾ ಕಾರ್ಯಕರ್ತೆ ರೋಷಿನಿ ಗುಪ್ತ ಅವರು ತಮ್ಮ ಒಂದು ವರ್ಷದ ಮಗುವಿನೊಂದಿಗೆ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದು, ಮತಗಟ್ಟೆಯಲ್ಲಿ 12 ಗಂಟೆಗಳ ಕಾಲ ಕೆಲಸ ನಿರ್ವಹಿಸಿದ್ದಾರೆ.
