ವ್ಯಾನ್ -ಟ್ಯಾಂಕರ್ ಡಿಕ್ಕಿ: ಇಬ್ಬರು ಸಾವು, 6 ಮಂದಿಗೆ ಗಾಯ

Social Share

ಲಖ್ನೋ,ಆ.3- ವ್ಯಾನ್‍ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಫೀಜ್ ಶಶಿದ್(60), ಜಯವಟಿ(50) ಮೃತಪಟ್ಟ ದುರ್ದೈವಿಗಳು.

ಸತೇಡಿ ಗಂಗಾ ಕಾಲುವೆ ಸಮೀಪ ಖೋಟಲಿ-ಬುಧಾನಾ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು, ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‍ನಲ್ಲಿದ್ದ ಇಬ್ಬರು ಅಸುನೀಗಿದ್ದಾರೆ.

ಉಳಿದ ಆರು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಭವಿಸುತ್ತಿದ್ದಂತೆ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

Articles You Might Like

Share This Article